ಪುಟ:ಕಾದಂಬರಿ ಸಂಗ್ರಹ.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ನಿಲಾನಿ ಮೇಲಕ್ಕದ್ದು ಮನೆಯ ಎಲ್ಲಾ ಭಾಗಗಳನ್ನೂ ಹುಡುಕುತ್ತ ಬಂದನು. ಅಲ್ಲಲ್ಲಿ ಮುಳಗಳು ಗೋಡೆಗಳಿಗೆ ನಾಟಿದ್ದಿದ್ದುದನ್ನು ಕಂಡು ಅವುಗಳಿಂದೆಂ ತಾದರೂ ತನ್ನ ಕೈಗಳಲ್ಲಿದ್ದ ಕೋಳಿಗಳನ್ನು ತೆಗೆದು ಕೊಳ್ಳಬೇಕೆಂದಂದು ಕೊಂಡು ಒಹು ಸಾಹಸದಿಂದ ಕೈಗಳನ್ನು ಮುಂದಕ್ಕೆ ತಿರುಗಿಸಿ ಕೊಂಡು ಆ ಕೊಳಗಳ ಬೀಗದ ತೂತನ್ನು ಮಳೆಗೆ ಸಿಗಿಸಿ ಅದರ ಕೀಲು (Spring) ಮಳಯು ಆಣೆಗೆ ತಗಲಿಕೊಳ್ಳುವವರೆಗೂ ಮೆಲ್ಲನೆ ಅಲು ಗಾಡಿಸಿ, ಅದು ತಗಲಿ ಕೆಳ್ಳಲು, ಬಲವಾಗಿ ಎಳೆದನು. ಬೀಗವು ತೆರೆ ಯಿತು ! ಒಂದು ಕೈಯಿ ಬಿಡುವಾಯಿತು !! ಆಶಯವಾಗಿ ಆ ಕೊಳ ವನ್ನು ತೆಗೆದು ಕೊಂಡು ನಿರಾಯುಧನಾಗಿದ್ದುದರಿಂದ ಮನೆಯಲ್ಲೇನಾ ದರೋ ಸಿಗಬಹುದೆಂದಂದುಕೊಂಡು ಮನೆಯಲ್ಲೆಲ್ಲ ಹುಡುಕಿದನು, ಏನೂ ಸಿಗದಿರಲು ತನ್ನನ್ನು ಬಂಧವಿಮುಹ್ಯನನ್ನಾಗ ಗೊಳಿಸಿದ ಆ ಚೂರಿಯನ್ನು ಪ್ರೀತಿಯಿಂದಲೋ ಅಥವಾ ಆವುದಾದರೊಂದು ಆಯುಧವು ತನ್ನಲ್ಲಿರಬೇ ಆಂದೋ ತೆಗೆದುಕೊಂಡು ಬಾಗಿಲಸಮೀಪಕ್ಕೆ ಹೋದನು. ಅಷ್ಟರಲ್ಲಿಯೆ, ಕಾಳಿಚರಣನು ಸಿಕ್ಕಿಬಿದ್ದಿರುವನೆಂಬ ವರ್ತಮಾನವನ್ನು ಕೇಳಿದ ಆ ಗುಂಪಿನ ಜನಗಳಾರೆ ಬಹುಸಂತೋಷದಿಂದ ಮಾತನಾಡಿಕೊಳ್ಳಿ ಬರುತ್ತಿರುವಂತೆ ಭಾಸವಾಗಲು, “ ಇದೀಗ ಸುಸಮಯವೆ ! ಇನ್ನು ಸ್ವಲ್ಪ ಮುಂಚೆಯೆ ಅವರು ಎಂದಿದ್ದರೆ ನನ್ನ ಗತಿಯೇನಾಗುತ್ತಿತೋ ! ಎಂದಂದು ಕೊಂಡು, ಕಾಳಿಚರಣನು ಆಗ ತಾನು ತಪ್ಪಿಸಿಕೊಂಡು ಹೊರಗಾಗುವ ಮಾರ್ಗವನ್ನು ಆಲೋಚಿಸುತ್ತಿದ್ದನು. ಅಷ್ಟರಲ್ಲಿಯೇ, ಬಾಗಿಲು ತೆರೆ ಯಲ್ಪಟ್ಟಿತು. ಕಾ೪ -ಚರಣನು ಬಾಗಿಲಿನ ಹಿಂಭಾಗದಲ್ಲಿ ಓರೆಯಾಗಿ ನಿಂತುಕೊಂಡನು. ಅವರು ಬಾಗಿಲನ್ನು ತೆಗೆದುಕೊಂಡು ಒಳಗೆ ಪ್ರವೇ ಶಿಸಿದರು. ತತ್ ಕ್ಷಣವೆ ಕಾಳಿಚರಣನು ಅದೇ ಬಾಗಿಲಿನ ಮೂಲಕ ಹೊರಗಾಗಿ ಬಾಗಿಲನ್ನು ಮುಚಿ ಕೊಂಡೆನು. ಕಾಳಿಚರಣನು ಸುರಕ್ಷಿತವಾಗಿ ಹೊರಗೆ ಬಂದವನು ತಲೆತಪ್ಪಿಸಿ ಕೊಂಡು ಹೊರಟುಹೋಗದೆ, ಆ ಬಾಗಿಲಿನ ಸಮೀಪದಲ್ಲಿಯೇ ನಿಂತು ಕಂಡನು, ಅದೆಂತಹ ಭಯ ಲೇಶವೂಇಲ್ಲದ, ಹಿಡಿದಕೆಲಸವನ್ನು ಸಾಧಿ ಸಲು ಏನೇಡರು ಬಂದರೂ ಹಿಮ್ಮೆಟ್ಟದ ಸಂಹಸವೊ ? ಅತ್ಯಲ್ಪ ಕಾಲಕ್ಕೆ