ಪುಟ:ಕಾದಂಬರಿ ಸಂಗ್ರಹ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ vnum RS ಆ ಕಾಡಿನಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಸೀಳುದಾರಿಗಳಿದ್ದರೂ, ಹೆಚ್ಚಿಗೆ ಜನಸಂಚಾರ ವಿಲ್ಲದಿದ್ದುದರಿಂದ ಅಪರಿಚಿತರಿಗೆ ಅವುಗಳ ಕುರುಹು ಕೂಡ ಸಿಗುವಂತಿರಲಿಲ್ಲ. ಸಾಲದುದಕ್ಕೆ, ಮಹೋನ್ನತವಾಗಿ ಬೆಳೆದಿದ್ದ ಮರಗಳ ಶಾಖೋಪಶಾಖೆಗಳು ಒಡು ಸ್ಮಗ್ನವಾಗಿ ಬೆಳೆದು ಬಂದಕೊಂದು ನೇಯ ಲ್ಪಟ್ಟವುಗಳಂತೆ ಸೇರಿಹೋಗಿ, ಎಲ್ಲೆಲ್ಲಿಯ ಕಾರ್ಗತ್ತಲೆಯು ಮುಚ್ಚಿ ಕೊಂಡು ಪ್ರಕೃತಿಯ ನಿರ್ವಕವಾದ ಭಯಂಕರ ರೂಪವು ಆವರಿಸಿತ್ತು. ಉನ್ನತವಾದ ಬಿದಿರುಮೆಳೆಗಳು : ದಟ್ಟವಾದ ಪೊದೆಗಳು !! ಉನ್ನತವಾದ ವೃಕ್ಷಶಿ೯ಣಿಗಳು !!! ಇವುಗಳ ಸಂಸರ್ಗದಿಂದ ಬಿಡೀಕೃತವಾಗಿದ್ದ ಆ ಕಾನನದ ಹೃದಯ ಖಾಂತದಲ್ಲಿ, ಅಂತಹ ಅವೇಳೆಯ ಕತ್ತಲೆಯಲ್ಲಿ, ಅಪ ರಿಜಿತರಿಗೆ ಸಂಚಾರವು ಕೇವಲ ಅಸಾಧ್ಯವೆಂದು ಬೋಧೆಯಾಗುತ್ತಿದ್ದಿತು, ಆ ವ್ಯಕ್ತಿಯು ಸ್ವಲ್ಪವೂ ಹಿಂಜರಿಯದೆ ಹಿಂದುಮುಂದು ಸಹ ನೋಡದೆ, ನಿರ್ಭಯವಾಗಿ ಆ ಹೊತ್ತಿನಲ್ಲಿ, ಆ ಕಾಡಿನಲ್ಲಿ ಹೋಗು ರು ವುದನ್ನು ನೋಡಿದರೆ ಅವನಿಗೆ ಆ ಪ್ರದೇಶದ ಪೂರ್ಣಾನುಭವವು ಇದ್ದಂತಿ ರುವುದು. ಅದಾವುದೋ ಮತ್ತೊಂದು ವ್ಯಕ್ತಿಯು ಈ ವ್ಯಕ್ತಿಯನ್ನೆಲ್ಲ ಅನುಸರಿಸಿಕೊಂಡು ಬರುತ್ತಿದ್ದಂತೆ ಬೋಧೆಯಾಗುತ್ತಿದ್ದಿತು, ಈ ವ್ಯಕ್ತಿಗಳು ಹೀಗೆಯೇ ಸ್ವಲ್ಪ ದೂರ ಹೋಗಿ, ಮುಂದೆಮುಂದೆ ಹೋಗುತ್ತಿದ್ದ ವ್ಯಕ್ತಿಯು ಒಂದು ಪೊದೆಯ ಸಮೀಪದಲ್ಲಿ ನಿಂತು ಸಂಕೇತ ಧ್ವನಿಯನ್ನು ಮಾಡಿದನು. ಇದಕ್ಕೆ ಪ್ರತ್ಯುತ್ತರವು ನಾತಿದೂರದಿಂದಲೆ ಬಂದಿತು. ಆ ವ್ಯಕ್ತಿಗಳ ರ್ವರು ಉತ್ತರವು ಬಂದಕಡೆಗೆ ಹೊರಟರು. ಹಿಂದಿದ್ದ ವ್ಯಕ್ತಿಯು ಮುಂದೆ ಹೋಗುತ್ತಿದ್ದ ವ್ಯಕ್ತಿಯ ಕಡೆ ಹಾರಿ, ಹಿಡಿದು ಕೆಡವಿ, ತನ್ನ ಜೇಬಿನಲ್ಲಿದ್ದ ಒಂದು ಸೀಸೆಯನ್ನು ತೆಗೆದು, ಅದರಲ್ಲಿದ್ದ ದನದ ಒಂದೆರಡು ಬಿಂದುಗಳನ್ನು ಒಂದು ಬಟ್ಟೆಯ ತುಂಡಿಗೆ ಹಾಕಿ, ಅವನ ನಾಸಿಕಕ್ಕೆ ಅದನ್ನು ಕಟ್ಟಿದನು, ಆ ವ್ಯಕ್ತಿಯು ಒಂದೆರಡು ನಿಮಿಷ ಗಳಲ್ಲಿಯೆ ಚೈತನ್ಯಹೀನನಾದನು, ಆ ವ್ಯಕ್ತಿಯ ಉಡುಪುಗಳನ್ನು ತೆಗೆದು ತಾನು ಧರಿಸಿಕೊಂಡು, ಅವನನ್ನು ಒಂದು ಮರೆಯಾದ ಸ್ಥಳದಲ್ಲಿ ಮಲಗಿಸಿ, ಆ ವ್ಯಕ್ತಿಯು ಪುನಃ ಮೊದಲಾದಂತೆಯ ಸಂಕೇತವನ್ನು ಮಾಡಿದನು,