'ಯಾವುದು? ಅದೇ ಬೂದಗಿತ್ತಲ್ಲಾ. . . ಕಡಸು. . ಅದಾ?' ಎಂದ ಆಕಾಶ ನೋಡಿಕೊಂಡು.
“ಆ ಅರ್ಜುನನ್ ಕುಂಟೆತಾವ... ಮಟ್ಗಾ ಹಿಡಿದ್ಬುಟದೇ ಈರೀ”. 'ನಿನಗೆ ಏಳಾನಾ ಅಂತಾನೇ ಇದ್ದೇ.. ..ನೆನ್ನೆ ಅಂಗೇ ಹಂಗ್ ಹೋಗಿದ್ದೇ ನೋಡ್ದೆ' ಎಂದು ತಡವರಿಸಿ ಹೇಳಿದ.
ಈರಿ ತನ್ನ ಮಗ ಕುಳ್ಳೀರನ ಜೊತೆ ಅರ್ಜುನನ್ಕುಂಟೆತಾಕ್ ಹೋಗಿ ನೋಡಿ, ಮಾದೇವ ಮಾಡಿರೊ ಹಲ್ಕ ಕೆಲಸ ಎಲ್ಲಾ ಗೊತ್ತಾಗಿ, ಇನ್ನೂ. . . ಪೋಲೀಸ್‌ನೋರ್ಗೆ ಕಂಪ್ಲೆಂಟ್
ಕೊಟ್ರೆ. . . ಮೊದಲೇ ಕಳ್ಳಗನ್ನು! ಇನ್ನೇಲ್ಲಿ ಐರಾಣಾವಾತದೋ ಎಂದು ಹೆದರಿ, ದೊಡ್ಡಮನೇ ಗೌಡ್ರತ್ರ ನ್ಯಾಯಕ್ಕಾಕೀ. . , ದೊಡ್ಡೇಗೌಡರಿಗೂ ಹಾಗಾಗ ಚೂರು ಪಾರು ಕಾಡುಬಾಡು ಸಪ್ಲೆ ಕೊಡುತ್ತಿದ್ದುದ್ದರಿಂದ ಮಾದೇವನ ಕಡೆಗೇ ಆಯ್ತು ನ್ಯಾಯ.
“ಇರ್ಲಿ ಬಿಡ್ರೋ, ಏನೊ ಗಾಚಾರಾ ಸರಿಯಿಲ್ಲಾ. ಯಡವಟ್ಟಾಗೊಗದೆ” ಎಂದೂ... ಇದು ಊರಿನ ವಿಷಯ ಎಂದೂ.. ಮನೆ ಮನೆಗೂ ನೂರ್ ನೂರ್ ರುಪಾಯಿ ದಂಡ ಹಾಕಿ, ಗೌಡ್ರು ಐನೂರ್ ಸೇರ್ಸಿ ಐದ್ಸಾವರ ಕೊಟ್ಟರಂತೆ ಈರಿಗೆ.
ಹಣ ತೆಗೆದುಕೊಂಡ ಈರಿ,
“ದನ ಹೋದ್ರೆ ಚಿಂತೆಯಿಲ್ಲ ಗೌಡ್ರೇ, ಈ ನನ್ಮಗನಿಗೆ ಕಣ್ಣಿಲ್ವಾ? ಮಿಕ ಯಾವುದು? ದನ ಯಾವುದು? ಎಂದು ಗೊತ್ತಗದ್ದಿದ್ದರೆ ಇವನೆಂತಾ ಶಿಕಾರಿಗಾರ ನೀವೇ ಹೇಳ್ರಿ. ಕಾಡಾಗ ಮನ್ಸಾ ಬಂದ್ರು ಹೊಡೆದು ಹುರುಳಿಸಿಬಿಡತಾನೇ ನೋಡ್ತಾಯಿರ್ರಿ ಇವನು.” ಎಂದು ತನ್ನ ದುಖಃವನ್ನು ತೋಡಿಕೊಂಡರೂ,ಸ್ ಗೌರೆನಳ್ಳಿ ಬುಲಟ್ ಸಾಬೀ ಇದೇ ಹಸುಗೇ 'ಮೂರು ಸಾವಿರದ ಮ್ಯಾಲೆ ಒಂದ್ ದಮ್ಡಿ ಹೆಚ್ಗೆ ಕೊಡಲ್ಲಾ' ಎಂದು ಹೇಳಿ ಹೋಗಿದ್ದನಾದ್ದರಿಂದ ಅಷ್ಟೇನೂ ಬೇಸರ ಹಾಗಲಿಲ್ಲ ಈರಿಗೆ.