ಪುಟ:ಕಾಮದ ಗುಟ್ಟು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಂಡಸಿಗೆ ೨೫, ಹೆಂಗಸಿಗೆ ೧೬ ವರ್ಷ ಇರಬೇಕೆಂದರ್ಥ. ಆದರೆ ಈಗಿನ ಶಾರೀರ ಶಾಸ್ತ್ರಜ್ಞರು ಹೆಂಗಸಿನ ಅಂಗಾಂಗಗಳೆಲ್ಲ ಪೂರ್ಣಾವಸ್ಥೆಗೆ ಮುಟ್ಟು ವದು ೧೮ ರಿಂದ ೨೧ ವರ್ಷಗಳವರೆಗೆ ಎಂದು ನಿರ್ಣಯಿಸಿದ್ದಾರೆ. ರಾಮಾ ಯಣದಲ್ಲಿ ಸೀತೆಯು ಹೇಳುವ ನುಡಿಯು ಇದಕ್ಕೆ ಒಳ್ಳೆ ಆಧಾರವನ್ನು ಕೊಡುತ್ತದೆ. * ಮಮ ಭರ್ತಾ ಮಹಾತೇಜಃ ವಯಸಾ ಪಂಚವಿಶಕಃ | ಅಷ್ಟಾದಶಹಿ ವರ್ಷಾಣಿ ಮನುಜನ್ಮ ನಿಗಣ್ಯತೆ ಎ೦ದು ರಾಮಾಯಣ ದಲ್ಲಿರುವದರಿಂದ ಆಗಿನ ಕಾಲದಲ್ಲಿಯೂ ಪ್ರೌಧವಿವಾಹವೇ ರೂಢಿಯಲ್ಲಿ ತೆಂದು ಊಹಿಸಬಹುದು. ಅದೇನೇ ಇರಲಿ, ರೂಢಿಗಿ೦ತ ವಿವೇಕಕ್ಕೆ ಬೆಲೆ ಯನ್ನು ಕೊಡುವದು ಬುದ್ದಿವಂತರ ಲಕ್ಷಣ. ಆದ್ದರಿಂದ ಕನಿಷ್ಠ ೧೮ ವರ್ಷ ಗಳವರೆಗಾದರೂ ಸಿಯು ಕಾಮವಿಲಾಸವನ್ನು ಕೈಕೊಳ್ಳಬಾರದು. ೩ನೇ ಪ್ರಶ್ನೆ :-ಕಾಮಜೀವನಕ್ಕೆ ಅವಶ್ಯವಾದ ಅಂಗಗಳಾ ನವು ? ಕಾಮವಿಲಾಸಕ್ಕೆ ಮೊದಲು ತಿಳಿಯಬೇಕಾದ ಸಂಗತಿ ಗಳಾವವು ? ಉತ್ತರ :-(೧) ಗಂಡಸು ಮತ್ತು ಹೆ೦ಗಸಿನಲ್ಲಿ ಕಾಮಾಂಗಗಳೆಲ್ಲ ಇರಬೇಕು. ಅಂದರೆ ಗಂಡಸಿನಲ್ಲಿ ಲಿಂಗ, ಅಂಡ, ಬೀಜ ಕೋಶ (Epidlydimis), garof Bos (Seminal vessicles) Preto ಗ್ರಂಥಿ ಇಷ್ಟೂ ಇರಬೇಕು. ಇವುಗಳಲ್ಲಿ, ಅಂಡ, ಬೀಜಕೋಶ, ವೀರ್ಯಾ ಶಯಗಳು ಎರಡೆರಡು ಇರುತ್ತವೆ. ಹೆಂಗಸಿನಲ್ಲಿ ಯೋನಿ, ಗರ್ಭಕೋಶ, ಡಿಂಭನಾಳಗಳು ೨ ( Falloppian tubes ), ಡಿಂಭಕೋಶಗಳು ೨ (Ovaries), ಚ೦ದ್ರನಾಡಿ (Clitoris) ಇಷ್ಟೂ ಇರಬೇಕು. ಗಂಡಸ ರಲ್ಲಿಯೂ ಹೆಂಗಸರಲ್ಲಿಯೂ ಇವು ಆರೋಗ್ಯ ಸ್ಥಿತಿಯಲ್ಲಿರಬೇಕಲ್ಲದೆ (೨) ಅವರಿಬ್ಬರಿಗೂ ತಕ್ಕಷ್ಟು ವಯಸ್ಸಾಗಿ ಆಯಾ ಅಂಗಗಳು ಬಲಗೊಂಡಿರ ಬೇಕು. (೩) ಅವುಗಳಲ್ಲಿ ಯಾವ ರೋಗವೂ ಇರಬಾರದು. ಅ೦ದರೆ ಗಂಡಸ ರಲ್ಲಿ ಮೇಹ-ಮೂತ್ರ ಸಂಬಂಧ ರೋಗಗಳೂ, ಹೆಂಗಸರಲ್ಲಿ ಪ್ರದರ ವಿಕಾರ ಗಳೂ, ಗರ್ಭಕೋಶದ ಸ್ನಾಯುಗಳ ದೌರ್ಬಲ್ಯವೂ, ಶ್ರೇಣಿಯ (Pelvis) ಅಸ್ಥಿಗಳ ಅಶಕ್ತಿಯೂ ಇರಬಾರದು. (೪) ದೇಹದ ಇತರ ಭಾಗಗಳಲ್ಲಿಯೂ