ಪುಟ:ಕಾಮದ ಗುಟ್ಟು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(Convulsions), ಬಾಲಗ್ರಹ, ಕಡಿಮೆ ನೆನಪಿನಕ, ಅಳುಬ ರುಕು ಶನ, ಮೊದಲಾದವು ವಿಷಮಸಂಯೋಗವನೆ ಹೆಚ್ಚಾಗಿ ಸೂಚಿಸುತ್ತವೆಂದು ವೈಜ್ಞಾನಿಕರು ನಿಶ್ಚಯಿಸಿದ್ದಾರೆ. ಆದ್ದರಿಂದ ಮನಸ್ಸಿಲ್ಲದ ವ್ಯಕ್ತಿಯೊಡನೆ ಒತ್ತಾಯದಿಂದ ಭೋಗಿಸಿದರೆ ಒಳ್ಳೆ ಸಂತಾನವು ಹ.ಟ್ಟಲಾರದು.) (೨) ತೃಪ್ತಿಯಿರುವದು ಮನಸ್ಸಿನಲ್ಲಿ, ದೇಹವು ತೃಪ್ತವಾಗದಿದ್ದರೂ ಮನವು ತೃಪ್ತವಾಗಿರಬಲ್ಲದು. ಆದರೆ ಮನಸ್ಸಿನ ತೃಪ್ತಿಯನ್ನು ದುರ್ಲಕ್ಷಿಸಿ ದೇಹವನ್ನು ತೃಪ್ತಿ ಪಡಿಸಲಾಗದು. ಕಾಮವು ದೇಹಕ್ಕಿ೦ತ ಮನಸ್ಸಿಗೆ ಹೆಚ್ಚು ಸಂಬಂಧಪಟ್ಟಿದೆ. ಮನವು ತೃಪ್ತವಾಗಲಿಕ್ಕೆ ಅದಕ್ಕೆ ಬೇಕಾದ ವಸ್ತುವನ್ನೇ ಕೊಡಬೇಕಾಗುತ್ತದೆ. ಗೋಧಿಯನ್ನೇ ಆಹಾರವಾಗಿಟ್ಟುಕೊಂಡವರಿಗೆ ಅಕ್ಕಿಯ ಅನ್ನದಿಂದ ತೃಪ್ತಿಯಾಗಲಾರದು. ( ಹಾಗೆಯೆ.: ತಾನು ಒ೦ದು ವ್ಯಕ್ತಿಯ ಗುಣಸೌಂದರ್ಯಗಳಿಗೆ ಮರುಳಾಗಿ ತನ್ನ ಸರ್ವಸ್ವವನ್ನು ಆ ವ್ಯಕ್ತಿಗೆ ಅರ್ಪಿಸಲು ತಯಾರಾದಾಗ, ಕಾವವು ಹಟ್ಟಿದರೆ, ಆ ವ್ಯಕ್ತಿಯ ಸಂಭೋಗದಿಂದಲೇ ಅಲ್ಲದೆ ಬೇರೆ ಯಾರಿಂದಲೂ ಮನವು ಸೃಸ್ವವಾಗಲಾ ರದು.) ದುರ್ದೈವದಿಂದ (ಅರ್ಥಾತ್ರ ಸಮಾಜದ ಕಟ್ಟ ಕಳೆಗಳಿಂದ) ಪರಸ್ಪರ ವಿರುದ್ದ ಮನಸ್ಸುಳ್ಳವರು ಮದುವೆಯಾಗಿದ್ದರೆ ಅವರ ಸಂಭೋಗ ದಿಂದ ದಾಂಪತ್ಯಪ್ರೇಮವೂ ಬೆಳೆಯಲಾರದು. ಆದ್ದರಿಂದ ಒತ್ತಾಯದ ಭೋಗದಿಂದ ಸಂಭೋಗದ ೫ ದೇಶಗಳೆರಡೂ ಕೈಗೂಡುವುದಿಲ್ಲ, ಅಲ್ಲದೆ ಅದರ ಪರಿಣಾಮವು ಮನದಮೇಲೆ ಬಹಳ ಶೋಚನೀಯವಾಗಿ ಆಗುವದು. ಗಂಡಸಾದರೆ ಸೂಳೆಯರ ಸಹವಾಸ, ಮಾದಕದ್ರವ್ಯಗಳ ಚಟದಲ್ಲಿ ಬೀಳುವನು. ಹೆಂಗಸಾದರೆ ಅವುಗಳಿಗೆ ಸಮಾಜದಲ್ಲಿ ಅವಕಾಶಸಿಕ್ಕದೆ ಮನವು ಇನ್ನೂ ಉದ್ರೇಜಿ ತವಾಗಿ ಹುಚ್ಚು, ಮೂರ್ಚ್ಛಾರೋಗ, ಭೂತೋನ್ಮಾದ (Hysteria) ಮೊದಲಾದ ರೋಗ ಗಳಿಗೆ ತುತ್ತಾಗುವಳು. ಗಾಢ೦ ಕೃತೇಚ ಮನಸಿ ಪ್ರಿಯ ಯಾರಿರ೦ಗೊ 8 ಜಾಯೇತ ಚೋತ್ಕಟತಮೋ ನನಸೋನಿಕಾರಃ |