ಪುಟ:ಕಾಮದ ಗುಟ್ಟು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'ಯೋನಿಭಿತ್ತಿಯಲ್ಲಿರುವ ಮೆತ್ತಗಿನ ಗುಳ್ಳಿ (Vaginal Nodules) ಗಳೊಡನೆ ಕೋಮಲವಾಗಿ ಘರ್ಷಿತವಾಗಬೇಕು. (೪) ವೀಯಸ್ಸಲನ ವಾಗುವವರೆಗೆ ತನ್ನ ಪ್ರಿಯವ್ಯಕ್ತಿಯ ಸಾನ್ನಿಧ್ಯವೂ ಸ್ಪರ್ಶ ನಾಲಿ೦ಗಗಳೂ ಮನಸ್ಸಿಗೆ ಉಲ್ಲಾಸವನ್ನು ಹುಟ್ಟಿಸುತ್ತಿರಬೇಕು. (ಸ್ತ್ರೀಯರಿಗೂ ಚಂದ್ರ ನಾಡಿಯು ಉದ್ರಿಕ್ತವಾಗಿ ಲಿ೦ಗದೊಂದಿಗೆ ಘರ್ಷಿತವಾಗಿ ರತಿಯ ಅಂತ್ಯದಲ್ಲಿ ಗಂಡಸಿನ ವೀರ್ಯದಂತಹದೇ ಒಂದು ವಿಧದ ಶೈತ್ಮದ್ರವವು ಗರ್ಭಾಶಯ ದಿಂದ ವಿಸರ್ಜಿತವಾಗುವದು. ಅದರಲ್ಲಿಯೇ ಸ್ತ್ರೀಯು ಕಾಮಲೀಲೆಯಲ್ಲಿ ಪೂರ್ಣಾನಂದವನ್ನು ಪಡೆಯುವದು), (೫) ಮಧ್ಯದಲ್ಲಿಯೇ ಲಿಂಗಯೋನಿ ಗಳಿಗೆ ಹೊರಗಿನ ಚಳಿಗಾಳಿಗಳು ತಾಗಬಾರದು. ಇಷ್ಟೆಲ್ಲ ಅನುಕೂಲತೆ ಯಿದ್ದರೆ ಅದು ಸಹಜ ಮೈಥುನವಾಯಿತು ; ಇಲ್ಲದಿದ್ದರೆ ಕೃತ್ರಿಮ ಮೈಥುನ ವಾಯಿತು. ಇನ್ನು ಸಾಮಾನ್ಯವಾಗಿ ಸ್ತ್ರೀ ಪುರುಷರಲ್ಲಿ ಪ್ರೇಮಾನುಮೋದನ ಗಳಿಲ್ಲದೆ ಸಂಭೋಗವಾಗಲಾರದು. ಪ್ರೇಮಿಯಾದ ಒಂದು ವ್ಯಕ್ತಿಯನ್ನು ನೋಡಿದರೆ ಸಾಕು, ನಮ್ಮಲ್ಲಿ ಆನಂದದ ವಿದ್ಯುತ್ಸ೦ಚಾರವಾಗುವದು. ಅ೦ದ ಮೇಲೆ ಅಂಥ ಪ್ರೇಮವುಳ್ಳ ಪತಿಪತ್ನಿಯರು ಒಂದೆಡೆಗೆ ಸೇರಿ ಪರಸ್ಪರಾನು ಮೋದನದಿಂದಲೇ ಚು೦ಬನಸ್ಪರ್ಶನಾಲಿಂಗಗಳನ್ನು ಮಾಡಿಕೊಂಡರೆ ಅವರಲ್ಲಿ ಆತ್ಮವಿಸ್ಮರಣೀಯ ಆನಂದವಾಗುವದರಲ್ಲಿ ಸಂದೇಹವೇ ಇಲ್ಲ. ಆನಂದವು ಸೃಷ್ಟಿಶಕ್ತಿಯುಳ್ಳದ್ದು (Creative), ಅದು ಮನಸ್ಸಿಗೆ ತಾನು ಕೈಕೊಂಡ ಕಾರ್ಯದಲ್ಲಿ ತೃಪ್ತಿಯನ್ನು ಕೊಡುವದಲ್ಲದೆ, ದೇಹ ನಿರ್ಮಾಣ ಸಾಮಗ್ರಿಗಳ “ಪುನರುಜ್ಜಿವನವನ್ನು ಉಂಟುಮಾಡುವದು. ಆದ್ದರಿಂದ ಸಂಭೋಗದಿಂದ ವೀರ್ಯಸ್ಕಲನವಾಗಿ, ಅಷ್ಟರಮಟ್ಟಿಗೆ ದೇಹವು ಕ್ಷಯಸಿದ್ದು ನಿಜವಾ ಗಿದ್ದರೂ, ಮಿತಿಯನ್ನು ಮಿಾರದಿದ್ದರೆ, ಅದರಿಂದುಂಟಾದ ಆನಂದತೃಪ್ತಿಗಳು, ಆ ಹಾನಿಯನ್ನು ತುಂಬಿ, ಇನ್ನೂ ಹೆಚ್ಚಾಗಿ ದೇಹಪೋಷಣೆಗೇ ಸಹಾಯಕ ವಾಗುವದು. ತನ್ನ ಹೃದಯದ ಪ್ರತಿಬಿಂಬದಂತಿರುವ ಪ್ರೇಮದ ಗೆಳೆಯ ಅಥವಾ ಗೆಳತಿಯನ್ನು ಇಂದುಹೊಂದಿದೆನೆಂದೂ, ಯಥೇಚ್ಛೆಯಾಗಿ ತೃಪ್ತಿ ಪಡಿಸಿದನೆಂದೂ ಮನಕ್ಕೆ ಉಲ್ಲಾಸವಿರುವದು. ಅಲ್ಲದೆ ಸಂಭೋಗ ಕಾಲ ದಲ್ಲಿ ಅವರಿಬ್ಬರಲ್ಲಿ ಒಂದು ವಿಧದ ಆಕರ್ಷಣವು (Magnetic Current)