ಪುಟ:ಕಾಮದ ಗುಟ್ಟು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ವದರಿಂದ ಲಿಂಗವು ಯೋನಿಯೊಡನೆ ಸಾಕಷ್ಟು ಬಲವಾಗಿ ಘರ್ಷಿಸುವದಿಲ್ಲ, ಆದ್ದರಿಂದ ಅವನಿಗೆ ಸ್ವಲನವಾಗಲು ಸ್ವಲ್ಪ ತಡವಾಗುವದು. ಆದರೆ ಈ ಅಲ್ಪಾನಂದಕ್ಕಾಗಿ ಅವನು ಈ ತರದ ಔಷಧಗಳನ್ನು ಆಗಿಂದಾಗ್ಗೆ ಸೇವಿಸು ತಿದ್ದರೆ ಅವನ ಸಂವೇದನೆಗಳ ಶಕ್ತಿಯೇ ಕುಂದಿ ಅದೇ ಒಂದು ರೋಗವಾಗ ಬಹುದು. ಅಲ್ಲದೆ ಇ೦ಥ ಔಷಧಗಳು ಹೆಚ್ಚಾಗಿ ಮಲಬದ್ಧತೆಯನ್ನು ಉಂಟುಮಾಡುತ್ತವೆ. ಅದೂ ಒಂದು ಸಂತತ ರೋಗವಾಗಿಬಿಡಬಹುದು.

  • ವಾಜೀಕರಣದ ಔಷಧಗಳು ಹೆಚ್ಚಾಗಿ ಹೃದಯವನ್ನೂ, ನರಗ ಳನ್ನೂ ಉತ್ತೇಜನಗೊಳಿಸುವವು. ಆದರೆ ಹೃದಯಕ್ಕೆ ಮೇಲಿಂದ ಮೇಲೆ ಕೊಡುವ ಕೃತ್ರಿಮ ಉತ್ತೇಜನವನ್ನೇ ಯಾವಾಗಲೂ ಅಪೇಕ್ಷಿಸುವಂತೆ ಮಾಡುತ್ತದೆ. ಪ್ರಾರಂಭದಲ್ಲಿ ಆ ಔಷಧಗಳಿಂದ ಶಕ್ತಿಯೂ ಉಲ್ಲಾಸವೂ ಬಂದಂತಾಗಬಹುದು. ಆದರೆ ಮುಂದೆ ಆ ಔಷಧವನ್ನು ಕೊಡದಿದ್ದರೆ ಹೃದ ಯವು ದುರ್ಬಲವಾಗಹತ್ತುವದು. ಯಾವಾಗಲೂ ಆ ಔಷಧಗಳನ್ನು ನುಂಗು ತಿದ್ದರೆ ಆ ಔಷಧ ದ್ರವ್ಯಗಳಿಂದಲೇ ಬೇರೆಯೊಂದು ವಿನಾಶ ಕಪರಿಣಾಮ ವಾಗಬಹುದು. ಆದ್ದರಿಂದ ಮೇಲಿನ ಎರಡು ವಿಧದ ಔಷಧಗಳೂ ಆರೋಗ್ಯ ವುಳ್ಳವರಿಗೆ ಸರ್ವಥಾ ಯೋಗ್ಯವಲ್ಲ, ಇಡೀ ದೇಹಕ್ಕೆ ಬಲಬರುವಂತೆ ಯೋಗ್ಯವಾದ ಆಹಾರ, ವಿಹಾರ, ವ್ಯಾಯಾಮಗಳನ್ನು ಸೇವಿಸುತ್ತಿದ್ದರೆ, ಸಂಭೋಗಶಕ್ತಿಯೂ ಹೆಚ್ಚುವದರಲ್ಲಿ ಸಂಶಯವಿಲ್ಲ. ಆದರೆ ಶೀಘ್ರ ಸ್ಕಲನ, ನಪುಂಸಕತೆ ಮೊದಲಾದ ರೋಗಗಳಿದ್ದವರು ಅ೦ಥ ಔಷಧಗಳನ್ನು ಒಳ್ಳೆ ವೈದ್ಯರಿಂದ ಸ್ವೀಕರಿಸಿ ಕೆಲವುದಿನ ಮಿತಿಯಿಂದ ಸೇವಿಸಬಹುದು. ಆ ಸಮಯದಲ್ಲಿ ಯೋಗ್ಯವಾದ ಪಥ್ಯ ಮತ್ತು ಆಹಾರ ನಿಯಮಗಳನ್ನು ಪಾಲಿಸಬೇಕು.

- (೩) ಸಂಭೋಗ ಸೌಖ್ಯವನ್ನು ಹೆಚ್ಚಿಸುವದಕ್ಕೆ ಔಷಧವಿಲ್ಲದ ಉಪಾಯ:- ಸಾಮಾನ್ಯವಾಗಿ ಸಂಭೋಗದಲ್ಲಿ ಸ್ತ್ರೀಯು ಎಷ್ಟೆಷ್ಟು ಪ್ರೇಮ

  • ವಾಜೀಕರಣವೆಂದರೆ ಕಾಮವನ್ನು ವಿಪರೀತ ಹೆಚ್ಚಿಸಿ, ಲಿ೦ಗವನ್ನು ದೊಡ್ಡದಾಗಿಸುವ ಔಷಧ, ಮಾಜಿ ಯೆ೦ದರೆ ಕುದುರೆಯ೦ತೆ ಕಾಮಶಕ್ತಿಯನ್ನು ಕಡುವದು ಎ೦ದು ಶಬ್ದಾರ್ಥ,

= =