ಪುಟ:ಕಾಮದ ಗುಟ್ಟು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ ದುರಭ್ಯಾಸಗಳಿಂದ ಲಿಂಗದ ಆಕಾರವು ಚಿಕ್ಕದಾಗುವದಲ್ಲದೆ ಅದರಲ್ಲಿ ವಕ್ರತೆಯೂ ಉಂಟಾಗುವದು. ತೀರ ಚಿಕ್ಕಲಿಂಗವು ಸ್ತ್ರೀಗೆ ಸಂಭೋಗದಲ್ಲಿ ಆನಂದವನ್ನು ಕೊಡಲಾರದು. ಆದರೆ ಕನಿಷ್ಠ ೪|| ಯಿ೦ದ ೫ ಇಂಚಿನ ವರೆಗಾದರೂ ಇದ್ದರೆ ಚಿಂತಿಸುವ ಕಾರಣವಿಲ್ಲ. ಅದು ತಕ್ಕಮಟ್ಟಿಗೆ ಆನಂದ ವನ್ನು ಕೊಡಬಲ್ಲದು. ಆದರೆ ಮಿತಿಮೀರಿ ದೊಡ್ಡ ಲಿಂಗವಿರುವದೂ ಒಳ್ಳೆ ಯದಲ್ಲ. ಅದು ಸ್ತ್ರೀಗೆ ಆನಂದವನ್ನು ಕೊಡುವ ಬದಲು, ಯೋನಿಮೂಲದ ಅಪಾಯ, ಗರ್ಭಾಶಯದ ಸ್ಥಾನಪಲ್ಲಟ ಮೊದಲಾದ ರೋಗಗಳಿಗೆ ಕಾರಣ ವಾಗುವದು. ದೊಡ್ಡಲಿಂಗದವರಿಗಿಂತ ನಿರೋಗವಾದ ಚಿಕ್ಕ ಲಿಂಗದವರೇ ಗರ್ಭ ನಿಲ್ಲಿಸಲು ಹೆಚ್ಚು ಸಹಕಾರಿಯಾಗುವರು. ಆದ್ದರಿಂದ ಆರೋಗ್ಯ ದೃಷ್ಟಿಯಲ್ಲಿ ಯೋಗ್ಯವೆನಿಸುವಷ್ಟು ಚಿಕ್ಕ ಲಿಂಗವಿದ್ದರೆ ಅದನ್ನು ದೊಡ್ಡದಾ ಗಿಸುವ ಭ ಮೆಗೆ ಬೀಳಬಾರದು. ಸಂಭೋಗದಲ್ಲಿ ಸ್ತ್ರೀಯರಿಗಾಗುವ ಆನಂದವು ಲಿಂಗದ ಆಕಾರಕ್ಕಿ೦ತ, ಅವಳಲ್ಲಿ ಹುಟ್ಟುವ ಕಾಮವೇಗದ ಪರಿ ಮಾಣವನ್ನು ಹೆಚ್ಚಾಗಿ ಅವಲಂಬಿಸಿದೆ. ಆದ್ದರಿ೦ದ ಸ್ತ್ರೀಯನ್ನು ತೃಪ್ತಿ ಗೊಳಿಸಲೆತ್ನಿ ಸುವವರು ಲಿಂಗದ ಆಕಾರವನ್ನು ಹೆಚ್ಚಿಸುವ ಮಬ್ಬಿಗೆ ಬೀಳದೆ ಅವಳು ಪ್ರೇಮದಿಂದ ಸಂಭೋಗದಲ್ಲಿ ಆತುರಳಾಗುವಂತೆ ಶೃಂಗಾರಚೇಷ್ಟೆಗೆ ಳನ್ನು ಮಾಡುತ್ತಿರುವದು ಒಳ್ಳೇದು. ಅಸಭಚರಣೆಯಿಂದ ಲಿಂಗವು ಚಿಕ್ಕದಾಗಿದ್ದರೆ ಮಾತ್ರ ಹಿಂದೆ ಹೇಳಿದ ಪೌಷ್ಟಿಕ ಆಹಾರ ವಿಹಾರ ಔಷಧಗಳನ್ನು ಸ್ಪೀಕರಿಸುವದಲ್ಲದೆ, ಆ ಕೆಟ್ಟ ಚಾಳಿಯನ್ನು ಪೂರ್ಣ ನಿಲ್ಲಿಸಬೇಕು. ಮತ್ತ ಒಸಂಗವನ್ನು ಬಹು ದಿನದವರೆಗೆ ಬಿಡಬೇಕು. ಆ ಚಾಳಿ (Habit) ಯಿ೦ದ ಲಿಂಗವು ಬಹಳ ಸ್ವಲ್ಪ ಚಿಕ್ಕದಾಗಿದ್ದರೆ ಅಥವಾ ಬಹುಸ್ವಲ್ಪ ವಕ್ರವಾಗಿದ್ದರೆ ಬೆದರುವ ಕಾರಣ ವಿಲ್ಲ. ಅಂಥವರು ಸ್ತ್ರೀಸಂಗದಲ್ಲಿ ನಿಯಮಿತತೆಯಿಂದಿದ್ದು ಯೋಗ್ಯ ಆಹಾರ ವಿಹಾರಗಳನ್ನು ಅನುಸರಿಸಿದರೆ ತಾನೇ ಸರಿಹೋಗುವದು. ೧೮ನೇ ಪ್ರಶ್ನೆ :-ಲಿಂಗದ ಮುಂದೊಗಲು ಸಂಕುಚಿತವಿದ್ದರೆ ಅಪಾಯವಿದೆಯೇ ? ಉತ್ತರ:-ಮುಂದೊಗಲು (Prepulce) ಬಹಳ ಸಂಕುಚಿತವಿದ್ದರೆ (೧) ಮೂತ್ರವಿಸರ್ಜನೆಗೆ ತೊಂದರೆಯಾಗುವದು (೨) ಮಣಿ (Glans) ಯ