ಪುಟ:ಕಾಮದ ಗುಟ್ಟು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭ ಹೀಗೆ ಕಾರಣಗಳು ಏನೇ ಇರಲಿ, ಎಷ್ಮೆ ಇರಲಿ ದಂಪತಿಗಳಿಗೆ ತಮ್ಮ ಜೀವನದಲ್ಲಿ ಎಷ್ಟೋಸಲ, ಸಮಾಜದ ಹಿತಕ್ಕಾಗಿಯೂ, ಕನಿಷ್ಠ ತಮ್ಮ ಹಿತಕ್ಕಾಗಿಯಾದರೂ ಸಂತಾನನಿರೋಧದ ಅಗತ್ಯವು ಕಂಡುಬರು ವುದು. ಆದರೆ ರೂಢಿಯಲ್ಲಿರುವ ಎಷ್ಟೋ ಸಂತಾನನಿರೋಧದ ಔಷಧಗಳು ಹೆಂಗಸರ ಮುಟ್ಟನ್ನು ನಿಲ್ಲಿಸಿಬಿಟ್ಟು ಮಹಾರೋಗಗಳಿಗೆ ತುತ್ತಾಗಿರುವದನ್ನು ನಾವು ನೋಡಿದ್ದೇವೆ. ಬುದ್ಧಿವಂತರಿಗೆ ಯೋಗ್ಯವಾದ ಮಾರ್ಗವಿದಲ್ಲ. ಬುದ್ಧಿವಂತರು ಅನ್ಯರು ಅಜ್ಞಾನದಿಂದ ಕಷ್ಟ ಪಡುತ್ತಿರುವದನ್ನು ನೋಡು ಇರುವದು ಒಳ್ಳೇದಲ್ಲ. ಇದರಲ್ಲಿ ನಾಚಿಕೆ ಪಟ್ಟು ಏನೂ ಪ್ರಯೋಜನವಿಲ್ಲ. ಸಂತಾನನಿರೋಧಕ್ಕೆ 'ಪೊರೇಸ್ ಚೆಕ್ ಪೆಸರಿ' ಎಂಬ ಪ್ರತಿಬಂಧಕ ಸಂಪುಟಗಳು, ಇಷ್ಟರವರೆಗಿನ ಉಪಾಯಗಳಲ್ಲಿ ಹೆಚ್ಚು ಆರೋಗ್ಯಶಾಸ್ತ್ರ ಸಮ್ಮತವಾಗಿವೆ. ಅವುಗಳು ಪ್ರೇಮಾಯತನದಲ್ಲಿ ಕ್ರಯಕ್ಕೆ ದೊರಕು ಇವೆ. ಅವುಗಳ ಉಪಯೋಗಕ್ರಮವನ್ನು ಓದಿ ತಿಳಿದು ಕೊಳ್ಳುವುದಕ್ಕಿಂತ, ಆಶ್ರಮಕ್ಕೆ ಸ್ವತಃ ಬಂದು ಪ್ರತ್ಯಕ್ಷವಾಗಿ ಅರಿತುಕೊಂಡು ಹೋಗುವದು ಮೇಲು. ಹೆಂಗಸರಿಗೆ ವೈದ್ಯರೇ ಯೋಗ್ಯವಾದ ಶಿಕ್ಷಣವನ್ನು ಕೊಡ ಲಿಕ್ಕೆ ಆಶ್ರಮದಲ್ಲಿದ್ದಾರೆ. ವಿಶೇಷ ಸಂಗತಿಗಳಿಗಾಗಿ ೦-೧-೩ ಆಣೆಯ ಸ್ಟಾಂಪು ಇಟ್ಟು ಕಾಗದ ಬರೆದರೆ ವಿವರವಾಗಿ ಉತ್ತರ ಕೊಡುವರು. (ಕಾರ್ಯದರ್ಶಿ, ಪ್ರೇಮ ಚಿಕಿತ್ಸಾ ಸೇವೆ, ಪೋಸ್ಟ್ ತುಂಗಭದ್ರಾ) ೨೫ ನೇ ಪ್ರಶ್ನೆ:-ಕೆಲವು ವಿಶಿಷ್ಟ ತಿಥಿ ವಾರಗಳಲ್ಲಿ ಸಂಭೋ ಗಿಸಬಾರದೆಂದು ಹೇಳುವದರಲ್ಲಿ ಏನಾದರೂ ತಥ್ಯವಿದೆಯೇ? ಉತ್ತರ:-ಯಾವದೊಂದು ವಿಷಯದ ನಿಜತ್ವವನ್ನು ತಿಳಿಯಬೇಕಾ ದರೆ ೩ ಸಾಧನಗಳಿವೆ. (೧) ಸ್ವತಃ ಅನುಭವ, (೨) ನಂಬಬಹುದಾದವರು ಹೇಳಿದ ಅನುಭವ. (೩) ವಿವೇಕದ ಸಿದ್ಧಾಂತ. ಈ ಮೂರರಲ್ಲಿ ಯಾವದ

  • ಬಳ್ಳಾರಿಯಲ್ಲಿಯೂ ಸ೦ತಾನಸ೦ಯಮದ ಯೋಗ್ಯ ಉಪಾಯಗಳನ್ನು ಕಲಿಸಲಾಗುವದು, ತಿಳಿಯಲಿಚ್ಛಿಸುವ ಹೆಂಗಸರು ಭಿಸಗ್ರ ಕೃಷ್ಣವೇಣಿಯವ ರನ್ನು ಅಲ್ಲಿಯ “ಪ್ರೇಮ ಚಿಕಿತ್ಸಾಲಯದಲ್ಲಿ ಕಾಣಬೇಕು. (ಮು೦ಜಾನೆ ೬ ರಿ೦ದ ೧೦ ರೊಳಗೆ)