ಪುಟ:ಕಾವ್ಯಸಾರಂ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿ & ಕೆ . ಅಭಿನವವಾದಿ ವಿದ್ಯಾನಂದನೆಂಬ ಜೈನಪಂಡಿತನು ಈ ಗ್ರಂಥವನ್ನು ಸಂಕಲಿ ಸಿದನು, ಈ ಗ್ರಂಥದಲ್ಲಿ ಕ್ರಿ. ೧೫ ನೆಯ ಶತಮಾನದ ಆದಿಭಾಗದಲ್ಲಿ ಬರೆದ ವಧು ರನ ಧರ್ಮನಾಥಪುರಾಣದಿಂದ ಪದ್ಯಗಳನ್ನು ಉದ್ಧರಿಸಿರುವದರಿಂದ ಮಧುರನಿಗಿಂತಲೂ ಈತನು ಈಚಿನವನೆಂದು ವ್ಯಕ್ತವಾಗುತ್ತದೆ. ಈತನ ದೇಶ ಗೊತ್ತಾಗಿಲ್ಲ ಆದರೆ ಗ್ರಂಧಾಂತ್ಯದಲ್ಲಿ ಮೂಲಪ್ರತಿಯಲ್ಲಿ ೧« ವಿಜಯಸಂವತ್ಸರದ ಭಾದ್ರಪದ ಬಹುಳ ಇಲ್ಲ ಶ್ರೀಮದಭಿನವ ವಾದಿವಿದ್ಯಾನಂದ ಸ್ವಾಮಿಗಳು + ಭಲ್ಲಾ ತಸೀಪುರವರಾಧೀಶರ ಬೈರಾ ಗಿಗೆ ಬರಸಿಕೊಟ್ಟ ಕಾವ್ಯಸಾರಕ್ಕೆ ಮಂಗಳಮಹಾ 1" ಎಂದಿದೆ ಈ ಭಲ್ಲಾ ತಕಿ ಪುರವು ವದೋ ಗೊತ್ತಿಲ್ಲ ಈ ಬೈರಾಗಿಲು ವಿಷಯವಾಗಿಯೂ ಏನೂ ತಿಳಿದಿಲ್ಲ. ಈ ಕಾವ್ಯಸಾರದಲ್ಲಿ ಇರುವ ಪದ್ಯಗಳು ಉದ್ಯಮಕವಿಗಳ ಗ್ರಂಥಗಳಿಂದ ತೆಗೆದಿರುವದರಿಂದಲೂ, ಕಾವ್ಯಗಳಲ್ಲಿ ವರ್ಣಿಸಲ್ಪಡುವ ಎಲ್ಲಾ ವಿಷಯಗಳನ್ನೂ ಒಳ ಕೊಂಡಿರುವದರಿಂದಲೂ, ಇದು ಕನ್ನಡ ಕವಿತೆಯ ಸ್ವರೂಪಾತ್ಮಷ್ಟತೆಗೆ ಕನ್ನಡಿ ದಾಗಿದೆ, ಇದರಲ್ಲಿ ೪೫ ಅಧ್ಯಾಯಗಳೂ, ೧೧೪೩ ಪದ್ಯಗಳೂ ಇವೆ. + ಮೇ || ರೈಸರವರು ಶಬ್ದುನುಶಾಸನದ ಪೀಠಿಕೆಯಲ್ಲಿ ಕೊಟ್ಟಿರುವ ಕವಿಚರಿ ತ್ರೆಯಲ್ಲಿ « ಎಲ್ಲಕಪುರವರಾಧೀಶರ ಬೈರಾಗಿ ?” ಎಂದಿದೆ.