ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ ರ್ಕ ತನ್ನೂಳು ತಾವು ಮಾತನಾಡುತ್ತಿರಲು, ಆತನ ಮೇಲೆ ದೃಷ್ಟಿಯನ್ನಿಕ್ಕಿ ಚಿತ್ತಾರದ ಪ್ರತಿಮೆಗಳಂತೆ ನಿಶ್ಚಲಿತರಾಗಿ ಇದ್ದು ಕ್ಷಣಮಾತ್ರದಮೇಲೆ ತಮ್ಮ ಜಾಣಸಂರಕ್ಷಕನಾದ ಆತಂಗೆ ಎರೈ ಸ್ವಾಮಿ ! ಪ್ರೀತಿಸೂಕ್ಷಕ್ ವಾಗಿ ನೀನು ನಮ್ಮ ಕೇಳಿದೆಯಾಗಿ ನಮ್ಮ ವೃತ್ತಾಂತವ ಹೇಳುವೆನು, ಪರಾಕಿಲ್ಲದೆ ಕೇಳು! ನಮ್ಮ ರಕ್ಷಿಸೂಯಂದು ಆ ಸಖಿಯರೊಳು ಶಶಿರೇಖೆ ಇಂತೆಂದಳು, ಅಂದೆಂತೆಂದರೆ- ಈಕೆ ವಸುಭೂತಿಯಂಬ ಗಂಧರ್ವರಾ ಯನ ಮಗಳು ಸಕಲಗುಣರತ್ನಗಳಿಗೂ ಕಣಿಯಾದಂಥವಳು ರತ್ತಾವ ಆಯಂಬ ಹೆಸರುಳ್ಳವಳು, ನಾವು ಮೂವರೂ ಈಕೆಯ ಸಖಿಯರು, ಈ ರ ವಳಿಯು ಚಿಕ್ಕಂದು ಮೊದಲಾಗಿಯೂ ತಾಯಿತಂದೆಯ ಅಪ್ಪಣೆ ವಿಡಿದು ರತ್ನಶರನ ಸೇವೆಯಂಮಾಡುತ್ತಿರಲು, ರತ್ನಶೂರನು ಪ್ರಸನ್ನ ನಾಗಿ ಎಲೈ ರತ್ನಾವಳಿ ! ನಿನ್ನ ಸ್ಪಷ್ಟ ದಲ್ಲಿ ನಿನ್ನ ಹೆಸರಿಗೆ ಸಮಾನವಾದ ಹೆಸರುಳ್ಳದುರುವ ಬಂದು ಅನುಭವಿಸಿ ಆತನೇ ನಿನಗೆ ಪತಿಯಾದಾನೂ ಎಂದು ನಿರೂಪಿಸಲು, ಆ ರೀತಿಯಲ್ಲಿ ರತ್ನಾವಳಿ ತನ್ನಮ್ಮ ವಲ್ಲಿ ಬಂದಾ ತನಂ ಕಂಡು ವಿರಹತಾಸದಿಂದ ಇದ್ದಾಕೆಗೆ ನಾವು ಶೈತ್ಯೋಪಚಾರಂಗ ಛಂ ನಾಡಿ, ನಮ್ಮ ಪ್ರವೀಣತೆಯಿಂದ ಈ ರತಾವಳಿಯ ಅಪ್ಪಣೆವಿಡಿದು (ರ್ಗ ರ್ಮ, ಪಾತಾಳವಾಸಿಗಳಾದವರನ್ನು ಚಿತ್ರಪಟದಲ್ಲಿ ಬರೆದು ತೋರಿಸಲು, ಈ ರತ್ನಾವಳಿಯು ತನ್ನ ಸೃಷ್ಟದಲ್ಲಿ ಬಂದಾತನಂ ಕಂಡು ಮೂರ್ಛಿತೆಯಾಗಿ ಎದ್ದು, ರತ್ನಕರನ ಸೇವಿಸಿ ತಮ್ಮ ಮನೆಗೆ ಪೋಗು ತಿರಲು, ಆಕಸ್ಮಿಕದಲ್ಲಿ ಈ ರಾಕ್ಷಸನು ಬಂದು ನಮ್ಮನಾರನ್ನೂ ಅಪ ಹರಿಸಿಕೊಂಡು ಪಾತಾಳವಂ ಪೊಕ್ಕನು, ಅನಿತರೊಳು ಅಕಾರಣಬಂಧು ವಾಗಿ ಬಂದು ನೀನು ನಮ್ಮ ರಕ್ಷಿಸಿದೆ ಇದೀಗ ನಮ್ಮ ವೃತ್ತಾಂತವು, ನಾವು ಕಾಶೀವಟ್ಟಣಕ್ಕೆ ಪೋಪಂತೆ ಕೈವಶಮಾಡಬೇಕನನ್ನು ಕೇಳಿ ನಾಗಕು ಮಾರಕನಾದ 'ರತ್ನಚೂಡನು ಭಯಪಟ್ಟು ಇದ್ದಂತ ಆಸ್ತಿಯರಿಗೆ ಇಂತೆಂದನ್ನು- ಎಲೈ ೩ ಯದಿರಾ !*ನೀವು ಅಂಜದೆ ನನ್ನ ಸಂಗಡ ಬನ್ನಿರಿ, ನಿಮಗೆ ರತ್ನಶ್ಠನತೋರಿಸೇನು ಎಂದು ಅವರನ್ನು ಒಡಗೊಂಡು ಬಂದು ಕಾಪಟ್ಟಣದಲ್ಲಿ ರ್ಪ ಹುಭೋದಕವೆಂಬ ಕೊಳವಂ ತೋರಿಸಲು