44 ಬpಚಿನಬಳ್ಳಿ ಲೋಕಮಾನ್ಯರ ಈ ಕರೆಗೆ ನಾವು ಓಗೊಟ್ಟು ದೇಶಸೇವೆಗೆ ಅಣಿಯಾಗಬೇ ಕಂದು ಕಿ, ವಾಡಿಯ ತರುಣರು ನಿಶ್ಚಯಿಸಿಕೊಂಡರು, ಆದರೆ ಕಾರಖಾನೆಯ ವ್ಯವಸ್ಥೆ ಏನು ? ಎಂಬ ಪ್ರಶ್ನೆಯು ಅವರನ್ನು ಎದುರಿಸಿತು, ಲಕ್ಷ್ಮಣರಾಯರ ಎದುರಿಗೆ ಈ ಪ್ರಶ್ನೆಯನ್ನು ಇಡಲು, ಅವರು ನಿಮ್ಮ ಕಲ್ಪನೆಯು ಯೋಗ್ಯ ವಿದೆ, ನಮ್ಮ ಅನಕೂಲತೆ, ಅನಾನುಕೂಲತೆಗಳನ್ನು ನೋಡುತ್ತ ಕೂಡುವ ಸಮಯವಿದಲ್ಲ. ನೀವೆಲ್ಲರೂ ಹೋದರೂ ಅಡ್ಡಿ ಇಲ್ಲ, ನೀವು ಮರಳಿ ಬರುವ ವರೆಗೆ ನಿಮ್ಮಲ್ಲರ ಕೆಲಸವನ್ನು ನಾನು ನೋಡಿಕೊಳ್ಳುವೆ. ಸಂತೋಷದಿಂದ ಹೊರಡಿರಿ” ಎಂದರು. - ಘೋರ್ಪಡೆಯಲ್ಲಿಯ ಸೈನಿಕ ಶಿಕ್ಷಣ ಶಿಬಿರಕ್ಕೆ ಶಂಭುರಾವ, ಜಾಂಭೇ ಕರ, ಶಂಕರರಾವ ಕಿರ್ಲೋಸ್ಕರ, ಅನಂತರಾವ ಫಳನೀಕರ, ಮಂಗೇಶರಾವ ರೇ, ಅನಂತರಾವ ಕರಜಗಿ, ಗಜಾನನ ಮಾಡೂರಕರ, ಮತ್ತು ಸಾಗೇ ಅವರೆಲ್ಲರೂ ತೆರಳಿದರು. ಅವರು ಬರುವ ವರೆಗೆ ಶಿಕ್ಷಣರಾಯರೇ ಅವರ ಕೆಲಸವನ್ನು ನೋಡಿಕೊಂಡರು. - ಮನುಷ್ಯನಿಗೆ ಸಂಸಾರದಲ್ಲಿ ಅನೇಕ ಸಂಕಟಗಳನ್ನು ಎದುರಿಸಬೇಕಾಗುವ ದೆಂಬುದರಲ್ಲಿ ಸಂದೇಹವಿಲ್ಲ. ಈ ಸಂಕಟಗಳು ಅವನ ಪರೀಕ್ಷೆಯನ್ನೇ ಮಾಡು ಇವೆ, ಇವುಗಳ ಪರೀಕ್ಷೆಯಲ್ಲಿ ಉತ್ತೀಣ್ಣನಾದರೆ ಅವನಿಗೆ ಅದರ ಫಲವು ಸಿಗದೇ ಹೊಗುವದಿಲ್ಲ. ಮಹಾಯುದ್ಧದ ಕಾಲದಲ್ಲಿ ಕಾರಖಾನೆಯು ಒಂದು ದಿವ್ಯ ದಿಂದ ಹೊರಬಂದಿತು, ಅದಕ್ಕೆ ತಕ್ಕ ಪ್ರತಿಫಲವೂ ದೊರೆಯಿತು. ೧೯೧೮ ರಲ್ಲಿ ಯುದ್ಧವು ಕೊನೆಗೊಂಡಿತು, ಕಬ್ಬಿಣ ಮೊದಲಾದ ವಸ್ತುಗಳು ಮೆಲ್ಲಗೆ ಸಿಗಹತ್ತಿದವು. ರಾಯರ ವಸ್ತುಗಳ ಬೇಡಿಕೆಯೂ ಬೆಳೆಯ ಹತ್ತಿತು, ಆದರೆ ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಯುದ್ದದ ಈ ನಾಲ್ಕು ವಕ್ಷಗಳಲ್ಲಿ ಪರದೇಶದಿಂದ ಬರುವ ಅದರಲ್ಲಿಯೂ ಇಂಗ್ಲಂಡದಿಂದ ಬರುವ ಕಬ್ಬಿಣ ರಂಟೆಗಳ ಆಯಾತವು ಪೂರ್ಣವಾಗಿ ನಿಂತಿತು. ಈ ಕಾಲದಲ್ಲಿ ಕಿರ್ಲೋಸ್ಕರರ ರಂಟೆಗಳು ಪೇಟೆಯನ್ನೆಲ್ಲ ಆಕ್ರಮಿಸಿದವು, ಒಮ್ಮೆ ಕಾಲ್ಗೆಗೆದ ವಿಲಾಯತಿಯ ರಂಟೆಗಳು ತಿರುಗಿ ಮರುಳಲಿಲ್ಲ. ಕಿರ್ಲೋಸ್ಕರರ ರಂಟೆಗಳಿಗೆ ನಿರ್ವಿಲ್ಯ ಮುರ್ವಿತಲಂ ಎಂಬಂತಾಯಿತು. ಈಗ ಈ ಮಾಲುಗಳ ಪ್ರಸಾರಕ್ಕೆ ಯಾವ ತೊಂದರೆಗಳೂ ಉಳಿಯಲಿಲ್ಲ. ಇದರಿಂದ ಸಹಜವಾಗಿಯೇ ಲಕ್ಷಣರಾಯರ ಆಶ-ಆಕಾಂಕ್ಷೆಗಳಿಗೆ ಚಿಗುರೊಡೆದವು, ಈಗಿದ್ದ ಕಾರಖಾನೆಯನ್ನು ಕನಿಷ್ಠ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೦೩
ಗೋಚರ