2ಅ ಮಿಂಚಿನಬಳ್ಳಿ ಅವರಿಗೆ ಅನಿಸಹತು, ಅಲ್ಲದೆ ಯುದ್ಧೋತ್ತರ ಕಾಲದಲ್ಲಿ ಭಾರತದಲ್ಲಿಯ ಉದ್ಯೋಗಗಳಿಗೆ ಕಳೆ ಏರುವ ಲಕ್ಷಣಗಳು ಸ್ಪಷ್ಟವಾಗಿದ್ದವು. ಈ ನಡುವಿನ ನಾಲ್ಕು ವರ್ಷಗಳಲ್ಲಿ ಕಲ್ಪಕ ತರುಣರಿಗೆ ವಿವಿಧ ವಸ್ತುಗಳ ಕಾರಖಾನೆಗಳನ್ನು ಪ್ರಾರಂಭಿಸಲು ಒಳ್ಳೆ ಸಂಧಿಯು ದೊರೆತಿತ್ತು. ಪರದೇಶೀ ವಸ್ತುಗಳ ಆಯಾತವು ನಿಂತಾಗ ಸ್ವದೇಶೀ ಕಾರಖಾನೆದಾರರು ಈ ಸಂಧಿಯ ಸದುಪ ಯೋಗ ಮಾಡಿಕೊಳ್ಳದೆ ಬಿಡುವದುಂಟೆ ? ೧೯೧೯ ರ ಸುಮಾರಿಗೆ ಇಂತಹ ಕಂಪನಿಗಳಿಗೆ ಉಕ್ಕು ಬಂದಿತು. ಭಾರತದಲ್ಲಿ ಹೊಸ ಔದ್ಯೋಗಿಕ ಯುಗವೇ ಪ್ರಾರಂಭವಾದ ಲಕ್ಷಣಗಳು ಕಾಣಹತ್ತಿದವು. ಲಕ್ಷ್ಮಣರಾಯರ ಈ ಕಲ್ಪನೆಗೆ ರಾಜಾಸಾಹೇಬರು ಆನಂದದಿಂದ ಅನುಮತಿಯನ್ನಿತ್ತರು. ಅಲ್ಲದೆ ಹೊಸ ಕಂಪನಿಯ ಅನೇಕ ಸೇರುಗಳನ್ನು ಕೊಳ್ಳಲೂ ಆಶ್ವಾಸನ ಕೊಟ್ಟರು. ಇಂತಹ ಕಂಪನಿಗಳನ್ನು ಸ್ಥಾಪಿಸಲು ಕಾಯದೇ ಪಂಡಿತರ ಅವಶ್ಯವಿದ್ದಿ ತು, ಸಾತಾರೆಯ ಪ್ರಸಿದ್ದ ಕಾಯದೆಯ ತಜ್ಞರಾದ ರಾವಬಹಾದ್ದೂರ ಕಾಳೆಯವರಿಂದ ಈ ಸಹಾಯವು ದೊರೆಯಿತು. ಡಾ|! ವಾಸುದೇವರಾವ ಕಿರ್ಲೋಸ್ಕರ, ರಾವಬಹಾದ್ದೂರ ಕಾಳೆ, ಗೋಪಾಳ ರಾವ ಜೋಗ, ಭಾಸ್ಕರರಾವ ಜಾಧವ, ಕಾಶೀನಾಥಪಂತ ದಾಂಡೇಕರರಂಥ ತಜ್ಞ ಹಾಗೂ ಪ್ರತಿಷ್ಠಿತರು ಬೋರ್ಡ ಆಫ್ ಡಾಯರೇಕ್ಟರರಾಗಿ ಬೆಂಬಲ ವಿತ್ತರು, ಚೇರಮನ್ನರ ಸ್ಥಳವು ಔಂಧದ ರಾಜಾಸಾಹೇಬರಿಗೆ ಕೊಡಲ್ಪಟ್ಟಿತು. ಕಂಪನಿಯ ಲೆಖ್ಯ ಪರೀಕ್ಷಕರೆಂದು ಶ್ರೀ ಜೀವಾಜಿ ಕೃಷ್ಣ ಪರೂಳೇಕರರು ನೇಮಿಸಲ್ಪಟ್ಟರು, ಮತ್ತು ರಾವಬಹಾದ್ದೂರ ಕಾಳೆ ಹಾಗೂ ದ್ವಿ, ಜಿ. ಚರಮುಲೆಯವರು ಕಾಯಿದೆಯ ಸಲಹೆಗಾರರಾದರು. ಕಿರ್ಲೋಸ್ಕರ ಸನ್ನ ಮತ್ತು ಕಂಪನಿಯು ಮ್ಯಾನೇಜಿಂಗ ಏಜೆಂಟ್ಟರಾದರು, ಇದರಲ್ಲಿ ಲಕ್ಷಣ ರಾಯರು ತಮ್ಮೊಡನೆ ಶ್ರೀ ಶಂಭೂರಾವ ಜಾಂಭೀಕರ, ಶಂತನುರಾವ ಕಿರ್ಲೊ ಸ್ವರ, ಶಂಕರರಾವ ಕಿರ್ಲೋಸ್ಕರ, ಅನಂತರಾವ ಫಳನೀಕರ ಇವರನ್ನು ಸೇರಿಸಿಕೊಂಡರು. ಕಿರ್ಲೋಸ್ಕರ ಬ್ರದರ್ ಲಿಮಿಟೆಡ್ ಕಂಪನಿಯು ಪ್ರಾರಂಭಕ್ಕೆ ತನ್ನ ಭಂಡವಲು ಹನ್ನೆರಡು ಲಕ್ಷವೆಂದೂ ೨೫ ರೂಪಾಯಿಗಳು ಒಂದು ಸೇರಿನ ಬೆಲೆ ಎಂದೂ ಸಾರಿತು,
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೦೫
ಗೋಚರ