ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಅಣ ಸುಧಾರಣೆಗಳನ್ನು ಮಾಡುತ್ತಿರಬೇಕು, ಅಲ್ಲದೆ ದೇಶದ ಭಾವೀ ಅವಶ್ಯಕತೆ ಗಳನ್ನು ಕಂಡುಹಿಡಿದು ಹೊಸ ಹೊಸ ಯಂತ್ರಗಳನ್ನೂ ಹಾಗು ವಸ್ತು ಗಳನ್ನೂ ನಿರ್ಮಿಸಲು ಪ್ರಾರಂಭಿಸಬೇಕು. ಆದುದರಿಂದ ಇನ್ನು ಮುಂದೆ ಆಯಿಲ್ ಇಂಜೀನುಗಳನ್ನು ಮತ್ತು ಮಶೀನ ಟೂಲ್ಪ ಮೊದಲಾದ ಮಹತ್ವದ ಯಂತ್ರಗಳನ್ನೂ ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಬೇಕು” ಎಂದರು. ಲಕ್ಷ್ಮಣರಾಯರ ಬಾಯಿಯಿಂದ ಈ ವಾಕ್ಯಗಳು ಹೊರಬಿದ್ದೊಡನೆಯೇ ಕೆಲವರು ಆಶ್ಚರಚಕಿತ ಮುದ್ರೆಯಿಂದ ಅವರ ಕಡೆಗೆ ನೋಡಹತ್ತಿದರು. ಇದು ಹೇಗೆ ಶಕ್ಯವೆಂಬುದೇ ಅವರ ನೋಟದ ಅರ್ಥ. ಲಕ್ಷ್ಮಣರಾಯರು ಅದನ್ನು ಅರಿತು “ನನ್ನ ಮಾತಿನ ಮೇಲೆ ನಿಮಗೆ ವಿಶ್ವಾಸವಿದ್ದಂತಿಲ್ಲ. ಆದರೆ ನನ್ನ ಕಣ್ಣಮುಂದೆ ೧೯೫೦ ರ ಕಿರ್ಲೋಸ್ಕರ ವಾಡಿಯ ಚಿತ್ರವು ಕಾಣುತ್ತದೆ. ಆ ಕಾಲಕ್ಕೆ ಕಾರಖಾನೆಯು ಭವ್ಯರೂಪ ಇತ .. ಆ ಕಾಲಕ್ಕೆ ಕಾರಖಾನೆಯು ಭವರೂಪ ವನ್ನು ತಾಳಿ, ಕಾರಖಾನೆಯಲ್ಲಿ ಆಯಲ್ ಇಂಜನ್ನ, ಮಶಿನ್ ಟೂಲ್ಸ, ಸಂಪಗಳು ಹಾಗು ಎಲೆಟ್ರಿಕ್ ಮೋಟಾರ್ ಕೂಡ ಸಿದ್ಧವಾಗುತ್ತಿರುವದನ್ನು ನೀವು ಕಾಣಬಹುದು, ಆ ಭವಿಷ್ಯವನ್ನು ನಾನು ಮೊದಲೇ ಹೇಳಿಬಿಡುತ್ತೇನೆ ಎಂದರು. ಆಗ ಕೇಳುವವರ ಮುಖದಲ್ಲಿ ಆಶಾ ಕಿರಣಗಳು ಮೂಡಿದವು, ಆದರೂ ಅವರಲ್ಲಿ ಒಬ್ಬನು “ತಾವು ಸೂಚಿಸಿದ ಯಂತ್ರಗಳನ್ನು ನಿರ್ಮಿಸುವದೇನೂ ಅಶಕ್ಯವಲ್ಲ, ಆದರೆ ಅದಕ್ಕಾಗಿ ನಮ್ಮಲ್ಲಿ ದೊಡ್ಡ ಯಂತ್ರಗಳು ಬೇಡವೇ ? ಫ್ಲಾಯಮ್ಪಿಲ್ಲ ಹೇಗೆ ಮಣಿಸಬೇಕು ? ಅದಕ್ಕೆ ವೃರ್ಟಿಕಲ್ ಬೋರಿಂಗ ಮಶಿನ್ ಬೇಕಲ್ಲವೇ ? ಅದರಂತೆಯೇ ಇಂಜಿನಿನ ಬೆಡ", ಅದನ್ನು ಸರಿಮಾಡಲು ದೊಡ್ಡ ಪ್ಲೇನಿಂಗ ಮಶಿನ ಅವಶ್ಯಕತೆಯಿದೆ, ನಮ್ಮಲ್ಲಿ ಈ ಯಂತ್ರಗಳೆಲ್ಲಿವೆ? ಎಂದರು. ಆಗ ಲಕ್ಷಣರಾಯರು “ಈ ತೊಂದರೆಗಳು ಇರುವದು ನಿಜ, ನಮ್ಮ ಶಂಭೂರಾಯರು ೩೫೦ ಅಶ್ವ ಶಕ್ತಿಯುಳ್ಳ « ದೊಡ್ಡ ಗ್ಯಾಸ ಇಂಜೀನವನ್ನು ತರಲು ಅಮೇರಿಕೆಗೆ ಹೊರಟಿರುವರು. ಅವರಿಗೆ ಈ ಯಂತ್ರಗಳ ಬಗ್ಗೆಯೂ ವಿಚಾರ ಮಾಡಲು ಹೇಳೋಣ ಹೊಂದಿದರೆ ಅವುಗಳನ್ನೂ ತರಿಸೋಣ. ಅಂದರೆ ತಾವು ದೊಡ್ಡ ಯಂತ್ರಗಳನ್ನು ನಿರ್ಮಿಸಲು ಸಿದ್ಧರಲ್ಲವೇ ?” ಎಂದು ಪ್ರಶ್ನಿಸಿದರು.