ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು 44 ಯಿದ್ದರೂ ತಂದೆಯ ಗುಣಗಳೆಲ್ಲ ಮಗನಲ್ಲಿ ಬರುತ್ತವೆಂಬ ನಿಯಮವಿಲ್ಲ. ಆದರೆ ರಾಯರು ಸುದೈವಿಗಳೆಂದು ಹೇಳಬೇಕು, ಏಕೆಂದರೆ ಅವರ ಕಲ್ಪಕತೆ, ಯಾಂತ್ರಿಕ ದೃಷ್ಟಿ, ಉದ್ಯೋಗ ಪ್ರಿಯತೆ, ಕಾರ್ಯಕ್ಷಮತೆಗಳು ಮಗನಲ್ಲಿಯೂ ಪೂರ್ಣವಾಗಿ ಇಳಿದು ಬಂದಿದ್ದವು. ಯಂತ್ರದೇವತೆಯು ಈ ಮಗುವಿನ ಮೇಲೆ ಹುಟ್ಟಿದೊಡನೆಯೇ ವರದಹಸ್ತ ವನ್ನಿಟ್ಟಿದ್ದಳೆಂದು ಹೇಳಬಹುದು, ಆದ್ದರಿಂದಲೇ ಕಿರಲೋಸ್ಕರ ಕಾರಖಾನೆಯ ಪ್ರಗತಿಗಾಗಿ ತಂದೆಯ ಕಾರ್ಯದಲ್ಲಿ ಮಗನು ಬಹಳ ನೆರವಾದನು. ಇಷ್ಟೇ ಅಲ್ಲದೆ ಕಿರ್ಲೋಸ್ಕರನಾಡಿಗಿಂತಲೂ ಒಂದು ತೂಕ ಹೆಚ್ಚು ಯೋಗ್ಯತೆಯುಳ್ಳ ಹರಿಹರ, ಬೆಂಗಳೂರ ಹಾಗೂ ಪ್ರಣೆಗಳಲ್ಲಿ ಕಾರಖಾನೆಗಳನ್ನು ತೆಗೆದು ತಂದೆಯ ಉಜ್ವಲ ಪರಂಪರೆಯನ್ನು ಆದರ್ಶ ರೀತಿಯಿಂದ ಮುಂದೆ ನಡೆಯಿಸಿರುವನು.
- ಮಾಧವನು ಅಕ್ಷಣರಾಯರ ಅಣ್ಣನ ಮಗನು. ಡಾll ವಾಸುದೇವ ರಾಯರ ಮೂರನೇ ಮಗ, ಚಿಕ್ಕಂದಿನಿಂದಲೂ ಮಾಧವನು ಲಕ್ಷಣರಾಯರ ಹಾಗೂ ರಾಧಾಬಾಯಿಯವರ ಅಚ್ಛೆಯ ಕೂಸು. ರಾಧಾಬಾಯಿಯವರಿಗೆ ಬಹುದಿನ ಮಕ್ಕಳಾಗದ್ದರಿಂದ ಮಾಧವನನ್ನು ಕರೆತಂದು ಮಗನಂತೆ ಜೋಕೆ ಮಾಡುತ್ತಿದ್ದಳು. ಮಾಧವನ ಕಾಲಗುಣ ಬಹಳ ಒಳ್ಳೆಯದು. ಅವನು ಮನೆಗೆ ಬಂದೊಡನೆಯೆ ರಾಧಾಬಾಯಿಯವರ ಮನೆಯಲ್ಲಿ ತೊಟ್ಟಿಲ ತೂಗ ಹತ್ತಿತು. ಮಾಧವನು ಮರುಳಿ ಸೊಲ್ಲಾಪುರಕ್ಕೆ ಹೋದರೂ ಈ ದಂಪತಿಗಳ ಪ್ರೇಮವು ಕಡಿಮೆಯಾಗಲಿಲ್ಲ. ಅವನನ್ನು ಶಾಲೆಯ ಬಿಡುವಿನಲ್ಲಿ ಕರೆಯಿಸಿ ಕೊಳ್ಳುತ್ತಿದ್ದರು. ಮಾಧವನು ಬಹು ಬುದ್ದಿವಂತ, ಅವನು ಕಾಲೇಜಿನಲ್ಲಿ ರುವಾಗಲೇ ವಿದ್ಯುತ್ತಿನ ಚಿಕ್ಕ-ಪುಟ್ಟ ಯಂತ್ರಗಳನ್ನು ನಿರ್ಮಿಸುತ್ತಿದ್ದನು. ಕಿರ್ಲೋಸ್ಕರವಾಡಿಯಲ್ಲಿ ಕೂಡಿಸಿದ ಮೊದಲನೆಯ ಟೆಲಿಫೋನ ಯಂತ್ರವನ್ನು ಆತನೇ ಸಿದ್ಧಪಡಿಸಿದ್ದ. ಅವನು ಬಿ. ಎಸ್‌ಸಿ, ಆದೊಡನೆ ಅಮೇರಿಕೆಗೆ ಕಳಿಸಿ, ಅವನನ್ನು ಇಲೆಕ್ಟಿಕ್ ಇಂಜಿನಿಯರನನ್ನು ಮಾಡುವ ಸಂಕಲ್ಪವನ್ನು ಲಕ್ಷ್ಮಣರಾಯರು ಮೊದಲೇ ಮಾಡಿದ್ದರು.
ಬೀಳ್ಕೊಡುವ ದೊಡ್ಡ ಸಮಾರಂಭವನ್ನು ಏರ್ಪಡಿಸಿ, ಮಾಧವ ಹಾಗೂ ಶಂತನುರಿಗೆ ಆಶೀದಿಸಿ ಅಮೇರಿಕೆಗೆ ರಾಯರು ಕಳಿಸಿಕೊಟ್ಟರು. MIT ಧಲ್ಲಿಯ ಅಭ್ಯಾಸವನ್ನು ಉತೃಷ್ಟ ರೀತಿಯಿಂದ ಮುಗಿಸಿದ ನಂತರ ಅಲ್ಲಿಯ ವೆಸ್ಬಿಂಗ ಹೌಸದಂಥ ಕಾರಖಾನೆಯಲ್ಲಿ ಪ್ರತ್ಯಕ್ಷ ಕೆಲಸ ಮಾಡಿ ಅವಶ್ಯವಿದ್ದ ಅನುಭವವ