ಮಿಂಚಿನಬಳ್ಳಿ ಸುರುವುತ್ತಾರೆ? ಕೂಲಿಕಾರರಿಗಾಗಿ ಯಾವ ಯಾವ ಅನುಕೂಲತೆಗಳು ಒದ ಗಿಸಲ್ಪಟ್ಟಿವೆ ? ಇವೆಲ್ಲವುಗಳನ್ನು ಪಟದ ಮೇಲೆ ತೋರಿಸಿದ್ದಲ್ಲದೆ ಸುಧಾರಿಸಿದ ಭಟ್ಟಿಗಳಿಂದ ಎಂತಹ ವಸ್ತುಗಳು ಹೊರಬೀಳುತ್ತವೆಂಬುದನ್ನೂ ಪ್ರತ್ಯಕ್ಷ ತೋರಿಸಲಾಯಿತು, ಈ ಚಿತ್ರಪಟವು ಜನಪ್ರಿಯವಾಯಿತು. ಪುಣೆ, ಸೊಲ್ಲಾಪುರ, ಉಮರಾವತಿ ಮೊದಲಾದ ಸ್ಥಳಗಳಲ್ಲಿಯ ಜನರಿಗೆ ತಮ್ಮ ಊರಲ್ಲಿಯೇ ಕಿರ್ಲೋಸ್ಕರವಾಡಿಯನ್ನು ನೋಡುವ ಲಾಭವು ದೊರೆಯಿತು. ಈ ಚಿತ್ರಪಟದಿಂದ ಅಪ್ರತ್ಯಕ್ಷವಾಗಿ ಎಷ್ಟು ಕಾರವಾಯಿತೆಂಬುದನ್ನು ತಿಳಿಯಲು ನನ್ನ ದೃಷ್ಟಿಯನ್ನು ಸ್ವಲ್ಪು ದೂರ ಚೆಲ್ಲಬೇಕು. ೧೯೨೭ ರಲ್ಲಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಔದ್ಯೋಗಿಕ ಪ್ರದರ್ಶ ನವು ನಡೆಯಿತು. ಕಿರ್ಲೋಸ್ಕರ ಹಾಗೂ ಓಗಲೇ ಬಂಧುಗಳು ಜೋಡಿ ಜೋಡಿಯಾಗಿ ಅಲ್ಲಿ ತಮ್ಮ ಮಳಿಗೆಗಳನ್ನು ಇಟ್ಟಿದ್ದರು. ಇಬ್ಬರ ವಸ್ತುಗಳಿಗೂ ಪ್ರದರ್ಶನದಲ್ಲಿ ಪದಕಗಳು ದೊರೆತವು. ಈ ಇನಾಮು ಸಮಾರಂಭದ ದಿವಸ ಸಾಯಂಕಾಲ ಕಿರ್ಲೋಸ್ಕರ ಕಾರಖಾನೆಯ ಚಿತ್ರಪಟವನ್ನು ತೋರಿಸಲಾ ಯಿತು, ಅದಕ್ಕೆ ಆ ಕಾಲದ ದಿವಾಣರಾದ ಸರ ಮಿರ್ಝಾ ಇಸ್ಮಾಯಿಲ್ ಮತ್ತು ಪ್ರಮುಖರಿಗೆ ಅನಂತ್ರಣವು ಕೊಡಲ್ಪಟ್ಟಿತು, ಆಗಿನ ಕಾಲದ ಚಿತ್ರ ಪಟಗಳು ಈಗಿನಂತೆ ಮಾತಾಡುತ್ತಿರಲಿಲ್ಲ. ಚಿತ್ರವನ್ನು ತೋರಿಸುವವರೊಬ್ಬರು ಅದನ್ನು ವಿವರಿಸುವವರೊಬ್ಬರು. ಹೀಗೆ ಸಾಗುತ್ತಿತ್ತು ಕಾರ ಕ್ರಮ. ಈ ಕಾಠ್ಯಕ್ರನು ನಡೆದ ಮರುದಿನ ಮಿರ್ಝಾರವರಿಂದ ಕಿರ್ಲೋಸ್ಕರ ಹಾಗೂ ಓಗಲೆಯ ಪ್ರತಿನಿಧಿಗಳಿಗೆ ಕರೆ ಬಂದಿತು. ಅವರು ದಿವಾಣರ ಬಂಗಲೆಗೆ ಹೋದರು. ಆ ಮಾತು ಈ ಮಾತು ಮುಗಿದ ನಂತರ ದಿವಾಣರು `ನಿಮ್ಮ. ಕಾರಖಾನೆಯ ಬಗ್ಗೆ ನಾನು ಕೇಳಿ ತಿಳಿದಿದ್ದೆನು. ಆದರೆ ನಿನ್ನೆ ನಡೆದ ಚಿತ್ರ ಪಟದಿಂದ ಅದರ ಬಗ್ಗೆ ಪೂರ್ಣ ಕಲ್ಪನೆ ಬಂದಿತು, ನಿಮ್ಮ ಕಾರಖಾನೆಗೆ ಔಂಧ ಸರಕಾರವು ಆಶ್ರಯವಿತ್ತುದು ಬಹಳ ಯೋಗ್ಯ, ನನ್ನು ಸಂಸ್ಥಾನವು ಕೂಡ ಉದ್ಯೋಗಗಳಿಗೆ ಯೋಗ್ಯ ಉತ್ತೇಜನ ಕೊಡುವ ಧೋರಣವನ್ನೇ ತಳೆದಿದೆ. ಇದರ ಬಗ್ಗೆ ನಿಮಗೆ ಹೆಚ್ಚಿಗೆ ವಿವರಿಸಬೇಕಾದ ಕಾರಣವಿಲ್ಲ, ನೀವು ನಿಮ್ಮ ಒಂದೊಂದು ಕಾರಖಾನೆಯನ್ನು ಮೈಸೂರಿನಲ್ಲಿ ತೆರೆದರೆ, ನಿಮಗೆ ಸಂಸ್ಥಾನದಿಂದ ಶಕ್ಯವಿದ್ದಷ್ಟು ಸಹಾಯವು ಮಾಡಲ್ಪಡುವದು, ಈ ಸೂಚ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೧೩
ಗೋಚರ