೧೨ ಕಬ್ಬಿಣ ಹಾಗೂ ವಿದ್ಯುತ್ತಿನ ಶೋಧ ಯುದ್ಧದ ಸಮಯದಲ್ಲಿ ಬೀಡು ಹಾಗು ಕಬ್ಬಿಣಗಳು ದುರ್ಮಿಳವಾಗಿ ಕಾರಖಾನೆಯ ನಾಡಿಗಳೇ ನಿಂತಾಗ ರಾಯರು ಎಷ್ಟು ಪರಿಶ್ರಮ ಪಟ್ಟರೆಂಬ ಕಥೆ ಹಿಂದೆ ಬಂದಿದೆ. ಇದರಿಂದ ರಾಯರ ವೃಷ್ಟಿಯು ಕಬ್ಬಿಣದ ಪೂರೈಕೆಯ ಕಡೆಗೆ ಹೊರಳಿತು, ಹೊರಗಿನಿಂದ ಕಬ್ಬಿಣವು ದೊರೆಯದಿದ್ದರೆ ಏನು ಮಾಡ ಬೇಕು ? ಪರತಂತ್ರರಾಗಿ ಕೈ ಮುಚ್ಚಿಕೊಂಡು ಕೂಡಬೇಕೇ ? ನಾವೇ ಕಬ್ಬಿಣ ವನ್ನು ಏಕೆ ಹುಟ್ಟಿಸಬಾರದು ? ಎಂದು ರಾಯರು ವಿಚಾರ ಮಾಡಹತ್ತಿದರು. ಕಬ್ಬಿಣವನ್ನು ಹುಟ್ಟಿಸುವದು ಹುಡಗಾಟಿಕೆಯಲ್ಲ, ಅದೊಂದು ಸ್ವತಂತ್ರ ದೊಡ್ಡ ಉದ್ಯೋಗ, ಟಾಟಾರೆಂಥ ಅಪ್ಪಿ ಪುತ್ರರಿಗೇ ಸಾಧ್ಯ. ನಾವು ಇದಕ್ಕೆ ಕೈ ಹಾಕಬಹುದೇ ! ಎಂಒ ವಿಚಾರ ತರಂಗಗಳು ರಾಯರ ತಲೆಯಲ್ಲಿ ಸುಳಿದವು, ಈ ತೊಂದರೆಗಳ ಅರಿವು ಅವರಿಗಿದ್ದಿತು, ಆದರೆ ತೊಂದರೆಗಳಿಗೆ ಶರಣು ಹೋಗದೇ ಅವುಗಳನ್ನು ಎದುರಿಸಲು ಶಕ್ತಿ ಮೀರಿ ಯತ್ನಿಸಬೇಕೆಂಬುದೇ ರಾಯರ ತತ, 'ನಾವು ಸಾಯುವದೇ ಇದ್ದರೆ ಕೈಕಾಲ ಅಲ್ಲಾಡಿಸಿ ಸಾಯೋಣ' ಎನ್ನುತ್ತಿದ್ದರು. ಅವರ ಈ ನಿರ್ಧಾರವು ಎಲ್ಲರಿಗೂ ಹುರುವು ಕೊಡುತ್ತಿತ್ತು. ತಮ್ಮ ಸಹಕಾರಿಗಳನ್ನು ಕುರಿತು “ನನಗೆ ಬೇಕಾಗುವ ಕಬ್ಬಿಣವನ್ನು ನಮ್ಮ ಭಟ್ಟಿಯಲ್ಲಿಯೇ ನಿರ್ಮಿಸುವದು ಕಷ್ಟವೆಂಬುದನ್ನು ನಾನು ಬಲ್ಲೆ ! ಆದರೆ ನಾವು ಪ್ರಯತ್ನಿಸಿ ನೋಡೋಣ, ಯುದ್ದ ಕಾಲದಲ್ಲಿ ಕಬ್ಬಿಣದ ಬರ ಬಿದ್ದಾಗ ನಾವು ಪ್ರಯತ್ನ ಪಟ್ಟು ನಮ್ಮ ತಾರ್ತಿಕ ಹಸಿವೆ ಆರಿಸಿಕೊಳ್ಳ ಲಿಲ್ಲವೇ . ಈ ಉದ್ಯೋಗ ವಿರಾಟ ಸ್ವರೂಪದ್ದಿದೆ ಎಂಬುದನ್ನು ನಾನು ಬಲ್ಲೆ, ಆದರೆ ನಮ್ಮ ಕಂಬಾರರು ಚಿಕ್ಕ ಭಟ್ಟಿಗಳನ್ನು ಹಾಕಿ ಸಣ್ಣ ಪ್ರಮಾಣದಲ್ಲಿ ಕಬ್ಬಿಣವನ್ನು ಮಾಡುವದಿಲ್ಲವೇ ? ಅಂದಮೇಲೆ ನಾವು ಸುಧಾರಿಸಿದ ಭಟ್ಟ ಯಿಂದ ನಮಗೆ ಅವಶ್ಯವಿರುವಷ್ಟನ್ನು ನಾವು ಸಿದ್ದಪಡಿಸಿಕೊಳ್ಳಲಾರೆವೇ ? ನಮ್ಮ ಪ್ರಯತ್ನ ವಿಫಲವಾದರೂ ನಷ್ಟವೇನು ? ಅದರ ಅನುಭವವಾದರೂ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೧೫
ಗೋಚರ