೯1 ಯಂತ್ರಯೋಗಿ ಕಿರ್ಲೋಸ್ಕಗೆ ಲಕ್ಷ್ಮಣರಾಯರು | ಈ ಉತ್ತೇಜನವು ಕಾರಖಾನೆಗೆ ಹೊಸ ಜೀವ ಕೊಟ್ಟಿತು, ಮುಂದೆಯೂ ಕೂಡ ಭದ್ರಾವತಿಯ ಸಾವಿರಾರು ಟನ್ನು ಬೀಡನ್ನು ಕೊಂಡು, ಆ ಕಾರ ಖಾನೆಯು ಮುಂದೆ ಬರುವಂತೆ ರಾಯರು ಬಹಳ ಸಹಾಯ ಮಾಡಿದರು. ಭದ್ರಾವತಿ ಕಾರಖಾನೆಯ ಜನರಲ್ ಮ್ಯಾನೇಜರರಾದ ಶ್ರೀ ವೆಂಕಟ ನಾರಾಯಣಪ್ಪನವರು ಬಹು ಬುದ್ದಿವಂತರೂ ಅನುಭವಿಗಳೂ ಕರ್ತವ್ಯದಕ್ಷರೂ ಇದ್ದರು. ಲಕ್ಷ್ಮಣರಾಯರಿಂದ ದೊರೆತ ಈ ನೆರವನ್ನು ಅವರು ಎಂದೂ ಮರೆಯಲಿಲ್ಲ. ಅವರು ಕಿರ್ಲೋಸ್ಕರ ಕಾರಖಾನೆಯ ಹಿತಚಿಂತಕರೂ ಸ್ನೇಹಿತರೂ ಆದರು. ಮುಂದೆ ಹರಿಹರದಲ್ಲಿ ಮಶಿನ್ ಟೂಲ್ಸಿನ ಹೊಸ ಕಾರಖಾನೆಯನ್ನು ತೆರೆಯಬೇಕೆಂಬ ವಿಚಾರಬಂದಾಗ ಶ್ರೀ ವೆಂಕಟನಾರಾಯಣಪ್ಪನವರು ರಾಯರಿಗೆ ಸೂಕ್ತ ನೆರವಾಗಿ ಹಿಂದಿನ ಋಣ ತೀರಿಸಿದರು, ಆದರೆ ಕಾರಖಾನೆಯ ಪ್ರಾರಂಭೋತ್ಸವಕ್ಕೆ ಅವರು ಬದುಕಿರಲಿಲ್ಲ. - ಹೀಗೆ ಕಬ್ಬಿಣದ ಪ್ರಶ್ನೆಯು ಬಿಟ್ಟಿದ್ದರಿಂದ ಗೋವೆಯಿಂದ ತಂದ ಕಲ್ಲುಗಳ ಪುಡಿಮಾಡಿ ಅದರ ಅಯರ್ನ ಆಹ್ವಾಯಿಡ ಮಾಡುವ ಬದಲು ಪಡಿಯಚ್ಚು ಗಳನ್ನು ಮಾಡುವ ವಿಭಾಗದಲ್ಲಿ ಅದರ ಉಪಯೋಗವನ್ನು ಮಾಡಿಕೊಂಡರು. - ರಾಯರು ಕಬ್ಬಿಣದ ಶೋಧಾರ್ಥವಾಗಿ ಸಂಚರಿಸುವಾಗ, ಟಾಟಾರವರು ಕೊಯಿನಾ ನದಿಗೆ ಒಡ್ಡು ಹಾಕಿ ವಿದ್ಯುತ್ತು ನಿರ್ಮಿಸುವ ಯೋಜನೆಯಲ್ಲಿರುವ ರೆಂಬುದು, ಆ ನದಿಯ ದಂಡೆಯ ಮೇಲೆ ಕೆಲಸ ನಡೆಯಿಸಿದ್ದ ಇಂಜನೀಯರಿಂದ ತಿಳಿಯಿತು, ಮಹಾರಾಷ್ಟ್ರಕ್ಕಾಗಿ ವಿದ್ಯುತ್ ಕೇಂದ್ರ ನಿರ್ಮಾಣವಾಗಲಿರುವ ದೆಂದು ಕೇಳಿ ಬಹಳ ಆನಂದವಾಯಿತು, ಈ ಯೋಜನೆ ಮುಗಿದನಂತರ ಅದು ತಮ್ಮ ಕಾರಖಾನೆಗೂ ವಿದ್ಯುತ್ತನ್ನು ಪೂರೈಸಬಹುದೆಂಬ ಸುಖಸ್ವಪ್ಪ ಗಳನ್ನು ಅವರು ಕಾಣದೆ ಇರಲಿಲ್ಲ. ಮುಳಸಿ ಆಣೆಕಟ್ಟು ಮುಗಿದ ನಂತರ ಟಾಟಾರವರು ಇದಕ್ಕೆ ಕೈ ಹಾಕುವವರಿದ್ದರು. ಈ ಆಣೆಕಟ್ಟಿನಿಂದ ಕೆಲವು ಭೂಮಿಯು ಮುಳುಗುವದು ಸ್ವಾಭಾವಿಕವಿದ್ದಿತು. ಅದಕ್ಕಾಗಿ ಅಲ್ಲಿ ಸತ್ಯಾ. ಗ್ರಹವು ಪ್ರಾರಂಭವಾಯಿತು. ರಾಷ್ಟ್ರ ಹಿತದ ದೃಷ್ಟಿಯಿಂದ ಇಂತಹ ಕಾರ್ಯ ಗಳು ಎಷ್ಟು ಅವಶ್ಯವೆಂಬ ಸಾದಾ ವಿಚಾರವೂ ಕೂಡ ಇಂತಹ ಸಮಯದಲ್ಲಿ ಉಳಿಯುವದಿಲ್ಲ, ಮುಳಸಿ ಆಣೆಕಟ್ಟು ಅನೇಕ ಅಡೆತಡೆಗಳಿಂದ ಹೇಗೋ ಮುಗಿಯಿತು, ಇದರ ಕಟು ಅನುಭವಗಳಮೂಲಕ ಟಾಟಾರವರು ಕೋಯಿನಾ ಯೋಜನೆಯ ಕೈ ಬಿಟ್ಟರು. ಅದರಿಂದ ದೇಶಕ್ಕೆ ಹಾನಿ ಆಯಿತು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೨೨
ಗೋಚರ