ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು r4 ಯೋಜನೆಯ ವರ್ಣನೆಯ ತೀಖಗಳು ಪ್ರಕಟವಾಗುವಂತೆ ವ್ಯವಸ್ಥೆಯಾಗ ಬೇಕು, ಕಾರಖಾನೆದಾರರಿಂದ, ವ್ಯಾಪಾರಿಗಳಿಂದ, ಅದರಂತೆ ಈ ಯೋಜ ನೆಯ ಉಪಯೋಗವು ಹೆಚ್ಚಾಗಿ ಆಗುವ ರೈತರಿಂದ ಮತ್ತು ಕೋ-ಆಪರೇಟಿವ್ ಸಂಸ್ಥೆಗಳಿಂದ ಈ ಕಲ್ಪನೆಗೆ ಸರಕಾರವು ಕೂಡಲೇ ಮೂರ್ತಸ್ವರೂಪ ಕೊಡ ಬೇಕು, ಎಂಬ ಕೂಗನ್ನು ಎಷ್ಟು ಎಬ್ಬಿಸುವಿರೋ ಅಷ್ಟು ಬೇಗ ಈ ಕಾಠ್ಯವು ಸರಕಾರದಿಂದ ಆಗುವದೆಂದು ನಾನು ಭಾವಿಸುತ್ತೇನೆ, ಇದರಲ್ಲಿ ಕಾರಖಾನೆಗಳ ಸ್ವಾರ್ಥ ಪರಾರ್ಥಗಳೆರಡೂ ಇವೆ. ಈ ಎಲ್ಲ ಉಪಾಯಗಳನ್ನು ಯೋಜಿಸಿ ಕೊಯಿನಾ ಯೋಜನೆಯು ಜನರ ಮುಂದೆ ಬರುವಂತೆ ತಾವು ಸ್ವತಃ ಪ್ರಯತ್ನಿಸ ಬೇಕೆಂದು ನನ್ನ ಆಗ್ರಹದ ಬಿನ್ನಹವಿದೆ. ಈ ಕಲ್ಪನೆ ಹಳೆಯದು ಹುಡುಗಾಟಿಕೆ ಯದು ಎಂಬ ಭಾವನೆ ಬರಕೂಡದು, ಆದ್ದರಿಂದ ತಾವು ಈ ವಿಷಯದಲ್ಲಿ ಯಾವ ರೀತಿಯಿಂದ ಮುಂದುವರೆಯುವಿರಿ ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಕೊಟ್ಟರೆ ಉಪಕಾರನಾಗುವನು.”