ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೫ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ೫ರಿಯರು ಣದ ಕಬ್ಬಿನ ಗಾಣಗಳೂ ಬೇಕಾಗಿದ್ದವು, ಬಾರಾಮತಿಯ ಭಾಗದಲ್ಲಿ ನೀರಾದ ಕಾಲುವೆಯು ಇದ್ದು, ಮುಖ್ಯ ಬೆಳೆಯೇ ಕಬ್ಬು ಇದ್ದುದರಿಂದ ಈ ಬೇಡಿಕೆಯು ಸ್ವಾಭಾವಿಕನಿದ್ದಿತು.
- ಈ ಕಬ್ಬಿನ ಗಾಣಕ್ಕೂ ಒಂದು ಇತಿಹಾಸವಿದೆ. ಮೊದಲಿನ ಕಾಲದಲ್ಲಿ ಕಟ್ಟಿಗೆಯ ನೇಗಿಲುಗಳಂತೆ ಕಟ್ಟಿಗೆಯ ಗಾಣಗಳೇ ಇದ್ದವು. ೧೮೮೦ ರಲ್ಲಿ ಪುಣೆಯ ರಾಮಚಂದ್ರ ರಘುನಾಥ ಬಾರಿ ಎಂಬುವವರು ಬೀಡಿನ ಗಾಣವನ್ನು ಮಾಡಿದೊಡನೆಯೆ ಕಟ್ಟಿಗೆಯ ಗಾಣಗಳು ಹಿಂದೆ ಬಿದ್ದವು. ಈ ಗಾಣವು ಸುಧಾರಿಸಿದ್ದು ಇದ್ದ ರೂ ಇದರಲ್ಲಿ ಅನೇಕ ದೋಷಗಳಿದ್ದವು, ಇದರಲ್ಲಿ ಕಬ್ಬನ್ನು ಎರಡುಸಲ ಹಾಕಬೇಕಾಗುತ್ತಿತ್ತಲ್ಲದೆ ರಸದ ಪ್ರಮಾಣವೂ ಕಡಿಮೆ ಇದ್ದಿತು. ಚಿಪ್ಪಾಡಿಯಲ್ಲಿ ರಸ ಉಳಿಯುತ್ತಿತ್ತು.
ಬಾರಾಮತಿಯ ರಾಮಚಂದ ಅಮಿಚಂದರಿಗೆ ಬೇಕಾದುದು ಇಂತಹ ಗಾಣಗಳೇ, ಈ ಗಾಣದ ದೋಷಗಳನ್ನರಿತ ರಾಯರು ಈ ದೊಡ್ಡ ಬೇಡಿಕೆ ಯನ್ನು ನಿರಾಕರಿಸಿದರು, ಕೆಲಸಗಾರರಿಗೆ ಆಶ್ಚರ್ಯವಾಯಿತು, ಆಗ ರಾಯರು ಸುಧಾರಿಸಿದ ರಂಟೆಗಳನ್ನು ಮಾಡಲು ಹೊರಟ ನೀವು ೫೦ ವರ್ಷದ ಹಿಂದಿನ ಅನೇಕ ದೋಷಗಳುಳ್ಳ ಗಾಣವನ್ನು ಹಣಕ್ಕಾಗಿ ಮಾಡುವದು ಯೋಗ್ಯವೇ ? ಅದರಿಂದ ನಿಮ್ಮ ಹೆಸರು ಕೆಟ್ಟಿತು ! ನೀವು ಗಾಣಗಳನ್ನು ಅವಶ್ಯ ಮಾಡಬಹುದು, ಆದರೆ ಅವು ಸುಧಾರಿಸಿದ ಹೊಸ ಸ್ವರೂಪವುಳ್ಳ ವಾಗಬೇಕು ಎಂಬುದನ್ನು ಲಕ್ಷದಲ್ಲಿಡಿರಿ ?” ಎಂದರು. “ ಇಂತಹ ಸುಧಾರಿಸಿದ ಗಾಣಗಳನ್ನು ಮಾಡಲು ೩-೪ ವರ್ಷಗಳಾ ದರೂ ಬೇಕು, ಅಲ್ಲಿಯ ವರೆಗೆ ತಾನಾಗಿಯೇ ಮನೆಯ ವರೆಗೆ ನಡೆದು ಬಂದ ಇಂತಹ ದೊಡ್ಡ ಬೇಡಿಕೆಯನ್ನು ನಿರಾಕರಿಸಬೇಕೇ ? ಅಕ್ಷಣರಾಯರು ಒಪ್ಪಿದರಲ್ಲವೇ ಮುಂದಿನ ಮಾತು ? ೨
- ಆಗ ಕೆಲಸಗಾರರೊಬ್ಬರು “ಈ ಗಾಣಗಳನ್ನು ನಮ್ಮವೇ ಎಂದು ಪೇಟೆ ಯಲ್ಲಿ ಮಾರಿರಿ ಬೇಕಾದರೆ ಬಿಡಿರಿ, ಅವುಗಳ ಮೇಲೆ ನನ್ನ ಹೆಸರನ್ನು ಹಾಕದಿದ್ದರೆ ತೀರಿತು, ನಾವು ಯಾರಾದರೂ ತಂದ ವಸ್ತುಗಳನ್ನು ಅದ ರಂತೆಯೇ ಎರಕ ಹೊಯ್ತು ಕೊಡುವದಿಲ್ಲವೇ ? ಹಾಗೆಯೇ ಇದೂ ಒಂದು ಕೆಲಸವೆಂದು ಏಕೆ ತಿಳಿಯಬಾರದು ? ಅವರಿಗೆ ನಾವು ಇಲ್ಲವೆಂದು ಹೇಳ ಬಹುದು. - ಆದರೆ ಇದರಿಂದ ಜನರ ತೊಂದರೆಯು ದೂರವಾಗುವ ಬಗೆ