೧೦೩ ಯಂತ್ರಯೋಗಿ ಕಿರ್ಲೋ ಅಕ್ಕರ ಲಕ್ಷಣರಾಯರು ರಾಯರು ಸಾಧಿಸಿದ ಎರಡನೆಯ ಮಹತ್ವದ ಕಾರ್ಯವೆಂದರೆ, ಶಕ್ಯ ವಿದ್ದಷ್ಟು ಹೆಚ್ಚು ಜನರನ್ನು ಕಾರ್ಯದಲ್ಲಿ ತೊಡಗಿಸುವದು, ದೊಡ್ಡ ದೊಡ್ಡ ಕಾರ್ಯಗಳು ಒಬ್ಬರಿಂದಲೇ ಆಗುವದಿಲ್ಲವೆಂಬುದನ್ನು ಅರಿತ ಅವರು, ತಮ್ಮ ಕಾರ್ಯದಲ್ಲಿ ಈ ತಂತ್ರವನ್ನು ಉಪಯೋಗಿಸುತ್ತಿದ್ದರು. ಮೂರನೆಯ ಮಾತೆಂದರೆ, ತಮ್ಮ ಶರೀರದ ಬಗ್ಗೆ ಯೋಗ್ಯ ಲಕ್ಷವೀಯು ವದು. 'ಶರೀರಮಾದ್ಯಂ ಖಲು ಧರ್ಮಸಾಧನಂ' ಎಂಬುದೇ ಅವರ ಮಂತ್ರ. ಆಹಾರ ವಿಹಾರಗಳಲ್ಲಿ ಮಿತಿ, ಬೆಳಿಗ್ಗೆ ಏಳುವದು, ಕಾರಣವಿಲ್ಲದೆ ನಿದ್ದೆಗೆಡ ದಿರುವದು, ಇದರಿಂದ ಬೇನೆಗಳು ಇವರ ಸಮೀಪಕ್ಕೆ ಕೂಡ ಸುಳಿಯುತ್ತಿಲ್ಲ. ಆದ್ದರಿಂದಲೇ ಅವರಿಗೆ ೮೫ ವರ್ಷಗಳಾಗಿದ್ದರೂ ಅವರ ಯಾವ ವ್ಯಾಪಾರಗಳೂ ನಿಂತಿರಲಿಲ್ಲ. ನಾವು ಈಗ ಅವರ ಮಧ್ಯಮ ವಯಸ್ಸಿನವರೆಗೆ ಬಂದಿದ್ದೇವೆ. ಇನ್ನು ಮುಂದೆಯೂ ಅವರ ಪ್ರಚಂಡ ಕಾರ್ಯದ ದರ್ಶನವು ನಮಗಾಗುವ ದಿದೆ. ಆದುದರಿಂದ ಇಷ್ಟೆಲ್ಲ ವಿವೇಚನೆ ಮಾಡುವ ಕಾರ್ಯಕ್ಕೆ ಕೈ ಹಾಕಿ ದೇವೆ. ಇರಲಿ. ಇನ್ನು ಲಕ್ಷ್ಮಣರಾಯರ ಮುಂದಿನ ಚರಿತ್ರೆಯ ಕಡೆಗೆ ಹೊರಳೋಣ. : ಕಂಪನಿಯು ಸ್ಥಾಪನೆಯಾಗಿ ಅದರ ಕಾರವು ಭರದಿಂದ ಸಾಗಿದ್ದನ್ನು ನಾವು ಹಿಂದೆ ತಿಳಿದಿದ್ದೇವೆ. ಚಿಂತೆಯ ದಿನಗಳು ಮುಗಿದವು, ಎಂದು ಚಾಲಕರು ಸುಖ ಸ್ವಪ್ನಗಳನ್ನು ಕಾಣಹತ್ತಿದರು, ಆದರೆ ಮಾನವನ ಎಣಿಕೆ ಎಲ್ಲಿ ನಡೆಯುವದು? ಯುದ್ದದಿಂದ ಸರ್ವ ಉದ್ಯೋಗಗಳು ಕಳೆಕಟ್ಟಿ ಯುದ್ಧಾನಂತರ ಮೆಲ್ಲನೆ ಕಳಿ ಗುಂದುವವು. ಮಂದತೆಯ ನೆರಳು ಎಲ್ಲ ಕಡೆಗೂ ವ್ಯಾಪಿಸುವದೆಂಬುದು ಅನುಭವದ ಮಾತು, - ೧೯೨೫ ನೆಯ ಇಸ್ವಿಯಲ್ಲಿ ದೇಶದ ಎಲ್ಲ ಉದ್ಯೋಗಗಳಿಗೆ ಮಂದಿಯ ಗ್ರಹಣ ಹಿಡಿಯಿತು. ಆ ವರ್ಷ ಹಂಗಾಮಿಗೆಂದು ೨೦-೨೫ ಸಾವಿರ ಕಬ್ಬಿಣ ರಂಟೆಗಳನ್ನು ಸಿದ್ದಪಡಿಸಲಾಗಿತ್ತು. ಆದರೆ ಈ ಸೈನ್ಯವು ವಾಡಿಯನ್ನು ಬಿಟ್ಟು ಹೊರಬೀಳಲೇ ಇಲ್ಲ, ಅದರಿಂದ ವಿಪರೀತ ಪರಿಣಾಮ ಉಂಟಾಯಿತು, ಈ ಇಳಿಕೆಯು ಕಾರಖಾನೆಯನ್ನು ೮-೧೦ ವರ್ಷ ಬಳಲಿಸಿತು. ಕಂಪನಿಯ ಕಾರಭಾರವು ಸುರುವಾದ ಮೊದಲನೆಯ ವರ್ಷವೇ ೬ ರಂತೆ ಡೆವಿಡೆಂಡು ಹಂಚಲಾಯಿತು, ಆದರೆ ಅದರ ಮುಂದಿನ ವರ್ಷ ಹಾನಿಯಾದ ಮೂಲಕ ಡೆವಿಡೆಂಡು ನಿಂತಿತು. ಜನ ಗುಜುಗುಜು ಮಾತನಾಡಹತ್ತಿದರು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೩೬
ಗೋಚರ