೧೦) ಮಿಂಚಿನಬಳ್ಳಿ ಅದು ನಮ್ಮಲ್ಲಿಯೇ ಇದೆ. ಈ ಕಬ್ಬಿಣ ಬಾಡಿಗಳು ಕಟ್ಟಿಗೆಗಳಿಗಿಂತಲೂ ಘಟ್ಟಿ ಎಂದು ಹೇಳಲಿಕ್ಕೇಬೇಡ, ಒಳ್ಳೆ ಅರಾಮವಾಗುವವಲ್ಲದೆ ನೋಡಲೂ ಬಹು ಅಂದವಾಗುವವು, ಅಲ್ಲದೆ ಭಾರದಲ್ಲಿ ಹಗುರಾಗುವವು. ಎಂದು ಪ್ರತಿ ಪಾದಿಸಿದರು. ಈ ಕಲ್ಪನೆಗೂ ಒಪ್ಪಿಗೆ ದೊರೆಯಿತು, ಆ ಭಾಗದ ಬಸ್ ಕಂಪನಿಗಳು ಕೂಡ ಅಂತಹ ಬಾಡಿಗಳನ್ನು ಕಟ್ಟಿಸಲು, ತಮ್ಮ ಗಾಡಿಗಳನ್ನು ಕಳಿಸಿಕೊಟ್ಟರು. ಆ ಕೆಲಸವೂ ಪ್ರಾರಂಭವಾಯಿತು. ಸರ್ವರೂ ಒಮ್ಮತದಿಂದ ಒಪ್ಪಿದ ಕಲ್ಪನೆಯೆಂದರೆ, ಕೈ ಪಂಪುಗಳನ್ನು ಸಿದ್ದ ಪಡಿಸುವದು, ಈ ಸಾಧನದ ಉಪಯೋಗವು ಬಹು ಬೆಳೆದಿತ್ತು. ಈ ಪಂಪುಗಳನ್ನು ಅಮೇರಿಕೆಯು ಪೂರೈಸುತ್ತಿತ್ತು, ಮಿ, ಕೆ, ಬಿ, ಜೋಶಿ ಮತ್ತು ಕಂಪನಿ ಎಂಬುವವರು ಅದರ ಮುಂಬಯಿಯ ಪ್ರತಿನಿಧಿಗಳಾಗಿದ್ದರು. ಕಂಪ ನಿಗೂ ಅವರಿಗೂ ಮತಭೇದವಾಗಿ ಜೋಶಿಯವರಿಂದ ಏಜನ್ಸಿಯನ್ನು ಕಿತ್ತು ಕೊಂಡು ಎರಡನೆಯವರಿಗೆ ಕೊಟ್ಟ ದರು, ಈ ಯೋಗಾಯೋಗದ ಲಾಭಪಡೆದು ಕಿರ್ಲೋಸ್ಕರವಾಡಿಯಲ್ಲಿ ೮-೧೦ ಬಗೆಯ ಅಮೇರಿಕೆಯ ಮಾದರಿಯ ಪಂಪು ಗಳನ್ನು ಸಿದ್ದಪಡಿಸಿ, ಶ್ರೀ ಕೆ, ಬಿ, ಜೋಶಿಯವರನ್ನೇ ಪ್ರಚಾರ ಮಾಡಲು ರಾಯರು ಹಚ್ಚಿದರು. ಕಿರ್ಲೋಸ್ಕರ ಪಂಪುಗಳ ಮುಂಬಯಿಯಲ್ಲಿಯ ಪ್ರದರ್ಶನಾಲಯದ ಉದ್ಘಾಟನೆಯು ದೇ, ತಾತ್ಯಾಸಾಹೇಬ ಕೇಳಕರರಿಂದ ೩-೮-೧೯೧೫ ನೇ ದಿವಸ ನಡೆಯಿತು, ಈ ಸಮಯದಲ್ಲಿ " ಪರದೇಶದ ಸಂಪುಗಳಿಗಾಗಿ ಭಾರತ ದಿಂದ ಹರಿಯುತ್ತಿದ್ದ ಹೊನ್ನಿನ ಹೊಳೆಗೆ, ಸ್ವದೇಶಿ ಸರ್ವೋತೃಷ್ಟ ಕಿರ್ಲೋಸ್ಕರ ಪಂಪುಗಳು ಒಡ್ಡು ಹಾಕಿದ್ದನ್ನು ಕಂಡು ಯಾರಿಗೆ ಆನಂದವಾಗಲಿಕ್ಕಿಲ್ಲ! ಕಬ್ಬಿಣದ ರಂಟೆಗಳಂತೆಯೇ ಈ ಕಿರ್ಲೋಸ್ಕರ ಸಂಪುಗಳ ಕೀರ್ತಿಯೂ ಹಬ್ಬು ವದರಲ್ಲಿ ಸಂಶಯವಿಲ್ಲ. ಕಿರ್ಲೋಸ್ಕರ ಲಕ್ಷಣರಾಯರು ನಮ್ಮ ನಾಡಿನ ಹೇನಿ ಫೋರ್ಡರು ಅವರು ಗಳಿಸಿದ ಯಶಸ್ಸಿಗಾಗಿ ನಿಮ್ಮೆಲ್ಲರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ?” ಎಂದು ಕೇಳಕರರು ಉದ್ಧಾರ ತೆಗೆದರು. ಈ ಉದ್ಧಾರಗಳು ಲಕ್ಷಣರಾಯರ ಬಗೆಗೆ ಇದ್ದ ಆದರವನ್ನೂ ರಾಷ್ಟ್ರಕ್ಕೆ ಅವರ ಅಗತ್ಯವನ್ನೂ ಸೂಚಿಸುವವು. ಫೋರ್ಡ ಕಾರಖಾನೆಯೆ ! ಕಿರ್ಲೋ ಸ್ಥರ ಕಾರವಾನೆಯೆ ! ಅಜ ಗಜಾಂತರ, ೬೦ದ ಮೇಲೆ ಅವರೊಡನೆ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೩೯
ಗೋಚರ