೧೦೭ ಯತ್ರ ಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಅಕ್ಷಣರಾಯರ ತುಲನೆ ಮಾಡುವದೆಂತು ? ಆದರೂ ಇಬ್ಬರೂ ಬಡತನ ದಿಂದ ತಮ್ಮ ಸ್ವಂತ ಪರಿಶ್ರಮದಿಂದ ತಮ್ಮ ಉತ್ಕರ್ಷವನ್ನು ಮಾಡಿ ಕೊಂಡವರು. ಒಬ್ಬರು, ಸಾಮಾನ್ಯ ವ್ಯಕ್ತಿಗೂ ಅಲ್ಪ ಬೆಲೆಯಲ್ಲಿ ಮೋಟಾರನ್ನು ಪೂರೈಸಿ ಪ್ರವಾಸವನ್ನು ಸುಲಭಗೊಳಿಸಿದ್ದರೆ, ಇನ್ನೊಬ್ಬರು, ಒಕ್ಕಲಿಗನಿಗೆ ಉಪಯುಕ್ತ ಸೊವಿ ರಂಟೆಗಳನ್ನು ಪೂರೈಸಿ, ಅವನ ಭೂಮಿಯು ಅವನಿಗೆ ಹೆಚ್ಚು ಫಲ ಕೊಡುವಂತೆ ಮಾಡಿದ್ದಾರೆ. ಇಷ್ಟರ ಮಟ್ಟಿಗೆ ಇಬ್ಬರ ತುಲನೆಯನ್ನು ಮಾಡ ಬಹುದು. ಇಳಿಕೆಯ ತೀವ್ರತೆಯನ್ನು ಕಡಿಮೆ ಮಾಡಲು ಇನ್ನೊಂದು ಉಪಾಯವು ಸೂಚಿಸಲ್ಪಟ್ಟಿತು, ಕಾರಖಾನೆಯಲ್ಲಿ ರಂಟೆ, ಗಾಣಗಳೊಡನೆ ಸೆಂಗಾ ಒಡೆ ಯುವ ಯಂತ್ರವೂ ಮಾಡಲ್ಪಡುತ್ತಿತ್ತು, ಅದರಲ್ಲಿ ಕಾಳುಗಳು ಪುಡಿ ಪುಡಿ ಯಾಗಿ ಕಡಿಮೆ ಬರುತ್ತಿದ್ದವು. ಈ ದೋಷಗಳನ್ನೆಲ್ಲ ತಿದ್ದಿ, ಹೊಸ ಯಂತ್ರ ವನ್ನು ರಚಿಸಬೇಕೆಂಬುದೇ ಸೂಚನೆ. ಅದರಂತೆ ನಿರ್ದುಷ್ಟವಾದ 'ಕಲ್ಯಾಣ' ಸೇಂಗಾ ಯಂತ್ರವು ಜನ್ಮ ತಾಳಿತು. ಇದರ ಲಾಭಾಂಶಗಳನ್ನು ಕಂಡು ಬೇಡಿಕೆಗಳಿಗೆ ಪೂರ ಬಂದಿತು. ಕಾರಖಾನೆಯಲ್ಲಿಯ ಚಕ್ರಗಳು ಸತತವಾಗಿ ತಿರುಗಬೇಕೆಂಬ ಉದ್ದೇಶ ದಿಂದಲೂ ಅದರಲ್ಲಿಯ ಆರು ನೂರು ಜನ ಕೆಲಸಗಾರರು ನಿರುದ್ಯೋಗಿಗಳಾಗ ಬಾರದೆಂಬ ದೃಷ್ಟಿಯಿಂದಲೂ ಲಕ್ಷ್ಮಣರಾಯರು ಮಾಡಿದ ಭಗೀರಥ ಪ್ರಯತ್ನದ ಕಲ್ಪನೆಯು ಇದರಿಂದ ಬರಬಹುದು, ಇಂತಹ ಜೀವನ-ಮರಣದ ಪರಿಸ್ಥಿತಿ ಯನ್ನು ಎದುರಿಸಲು ಇನ್ನೂ ಅನೇಕ ಸರಕುಗಳನ್ನು ರಾಯರು ನಿರ್ಮಿಸಿದರು. ವಿಸ್ತಾರ ಭಯದಿಂದ ಅವುಗಳ ಉಲ್ಲೇಖವನ್ನು ಮಾಡದಿರುವದೇ ಒಳ್ಳೆದು.. ಯಾವ ಉಪಕ್ರಮದಿಂದ ಲಾಭವು ಆಗದಿದ್ದರೂ ಕಾರಖಾನೆಯ ಧೋರಣೆಯಲ್ಲಿಯೇ ಕ್ರಾಂತಿಯಾಯಿತೋ ಅದನ್ನು ಮಾತ್ರ ಇಲ್ಲಿ ಉಲ್ಲೇಖಿಸು ತೇವೆ, ಇಲ್ಲಿಯವರೆಗೆ ಕಾರಖಾನೆಯ ಧೋರಣವು, ನಾವಾಯಿತು ನನ್ನ ಕೆಲಸ ನಾಯಿತು' ಎಂದು ಇದ್ದಿತು. ಹೊರಗಿನ ಚಳುವಳಿಯ ಸಂಬಂಧವು ಅಷ್ಟಕ್ಕಷ್ಟೆ. ಸಮಯ ಸಿಕ್ಕಾಗ ವರ್ತಮಾನ ಪತ್ರವನ್ನೋದಿ ಅದರ ಬಗ್ಗೆ ಚರ್ಚಿಸುವದಷ್ಟೇ ಕಿರ್ಲೋಸ್ಕರವಾಡಿಯ ರಾಜಕಾರಣವಾಗಿತ್ತು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೪೦
ಗೋಚರ