ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ೧m ಆಗ ಲಕ್ಷಣರಾಯರು ನಿಮ್ಮ ಸೂಚನೆಯು ಯೋಗ್ಯವೆಂದು ನನಗೂ ಅನಿಸುತ್ತದೆ, ಆದರೆ ಒಂದು ಮಾತು ಮಾತ್ರ ನೆನಪಿಡಬೇಕು. ನಾನು ಈ ಯಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಅದು ಗ್ಯಾಸಿನಿಂದ ನಡೆಯು ವಂತೆ ಪ್ರಯೋಗ ಮಾಡುವವನಿರುವೆ.” ಹೀಗೆಯೇ ಚರ್ಚೆ ನಡೆದಿರುವಾಗ ಸೌ, ರಾಧಾಬಾಯಿಯವರು ಬಾಗಿ ಲಲ್ಲಿ ಬಂದು ನಿಂತು "ನಿಮ್ಮ ಮಾತು ಮುಗಿಯಿತೋ ಇಲ್ಲವೋ? ಅಡಿಗೆಯೆಲ್ಲ ಆರಿ ತಣ್ಣಗಾಯಿತು. ಈಗಲಾದರೂ ಏಳಿರಿ ” ಎಂದರು. ರಾಯರು ಹೊತ್ತು ನೋಡುತ್ತಾರೆ ! ಒಂದೂವರೆಯಾಗಿತ್ತು, ಎಲ್ಲರೂ ಎದ್ದು ಹೊರಟರು. ರಾಯರ ಹಿಂದೆ ರಾಧಾಬಾಯಿಯವರು ಸುಮ್ಮನೆ ಹೊರಟರು, ಬಾಯಿಯವರಿಗೆ ಇದು ನಿತ್ಯದ ಸಾವು, ಇಂದು ಅವರ ಪುಣ್ಯ. ಏಕೆಂದರೆ ಕರೆದೊಡನೆಯೇ ರಾಯರು ಹೊರಟರು. ಒಂದೊಂದು ದಿನ ಅವರು ಕೆಲಸದಲ್ಲಿ ಮಗ್ನರಾಗಿದ್ದಾಗ ಕರೆದರೆ ತೀರಿತು. ಕರೆದವರ ಅವಸ್ಥೆ. ಹುಲಿಯಂತೆ ಅವರ ಮೈ ಮೇಲೆ ಏರಿ ಹೋಗಿ ಊಟ ಉಡಿಗೆಯ ಹೊರತು ಜಗತ್ತಿನಲ್ಲಿ ನಿಮಗೆ ಮತ್ತೇನು ಕಾಣುವದಿಲ್ಲ. ಹೊರಡು ಇಲ್ಲಿಂದ' ಎಂದು ಗದ್ದರಿಸುತ್ತಿದ್ದರು. ಈ ಸಭೆಯಲ್ಲಿ ಗೊತ್ತಾದ ಇಂಜಿನಿನ ಚಿತ್ರವನ್ನು ತೆಗೆಯಲಾಯಿತು, ಬಿಚ್ಚಿದ ಇಂಜನಿನ ಬಿಡಿ ಭಾಗಗಳ ಅಳತೆಗಳನ್ನು ಬೇಗ ಬೇಗ ತೆಗೆದುಕೊಂಡರು. ಅದರ ಬ್ಲೂ ಪ್ರಿಂಟ್ಟುಗಳನ್ನು ತೆಗೆದುಕೊಂಡು ಬಡಿಗರು ಪ್ಯಾಟರ್ನ್ಸ ಹಾಗೂ ಕೋಅರ ಪೆಟ್ಟಿಗೆ ಮಾಡಲು ಪ್ರಾರಂಭಿಸಿದರು. ಈ ಕೆಲಸ ನಡೆದಾಗ ಲಕ್ಷ್ಮಣರಾಯರು ಆಯಾ ಕೆಲಸಗಾರರ ಮುಂದೆ ಧರಣಿ ಕೂಡುತ್ತಿದ್ದರು. ಅವರಿಗೆ ಎಲ್ಲಕಡೆಗೂ ಇಂಜಿನನ ಹೊರತು ಬೇರೆ ಏನೂ ಕಾಣುತ್ತಿಲ್ಲ. ಆದರೆ ಇಂಜಿನಿನ ಭಾಗಗಳನ್ನು ಎರಕ ಹೊಯ್ಯಬೇಕೆಂದು ಭಟ್ಟಿಯ ಕಡೆಗೆ ಹೋದಾಗ, ರೈತರಲ್ಲಿ ಪ್ರಚಾರ ಮಾಡುವ ದೃಷ್ಟಿಯಿಂದ ಈ ಇಂಜಿನು ಬಹಳ ದೊಡ್ಡದಾಗುವದೆಂದು ಎಲ್ಲರಿಗೂ ಅನಿಸಿತು, ಅದು ಕಾಯರಿಗೂ ಸತ್ಯ ವೆನಿಸಿತು. ಪುನಃ 0 ಅಶ್ವಶಕ್ತಿಯ ಇಂಜಿನದ ರಚನೆಯ ಪ್ರಯತ್ನ ನಡೆದು, ಅದು ಒಂದೊಂದು ಭಾಗಗಳು ಸಿದ್ಧವಾಗಿ ಹೊರಬಿದ್ದವು, ಅವೆಲ್ಲವುಗಳನ್ನು ಜೋಡಿ ಸಿದ ನಂತರ, ಚಿಕ್ಕ-ಪುಟ್ಟ ಬದಲಾವಣೆಗಳ ಅವಶ್ಯಕತೆಯು ತೋರಹತ್ತಿತು. ಇಲ್ಲದೇ ಹೊಸ ಕಲ್ಪನೆಯೇ ಮುಂದೆ ಬರುತ್ತಿತ್ತು, ಅದನ್ನು ಅಂತರ್ಭಾವ