ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಮಿಂಚಿನಬಳ್ಳಿ ಈ ಪ್ರದರ್ಶನದಲ್ಲಿ ಕಿರ್ಲೋಸ್ಕರ ಮಾಲುಗಳಿಗೆ ಒಂದು ಸುವರ್ಣ ಪದಕ ಮತ್ತು ೪ ಇತರ ಸದಕಗಳು ದೊರೆತವು. ಲಕ್ಷ್ಮಣರಾಯರ ಮಕ್ಕಳಾದ ಶಂತನುರಾಯರು ತಮ್ಮ ನಾಲ್ಕು ವರ್ಷದ ಅಭ್ಯಾಸವನ್ನು ಮುಗಿಸಿಕೊಂಡು, ಅಮೇರಿಕೆಯಿಂದ ಮರುಳಿ ಸ್ವದೇಶಕ್ಕೆ ಇದೇ ಸಮಯಕ್ಕೆ ಬಂದುದರಿಂದ ಎಲ್ಲರ ಆನಂದವು ಉಕ್ಕೇರಿತು. ಅಲ್ಲಿಯ ಮಾಸ ಚೂಸೆಟ್ಸ್ ಇನ್ಸ್ಟಿಟ್ಯೂಟ ಆಫ್ ಟೆಕ್ನಾಲಜಿ ಎಂಬ ವಿಖ್ಯಾತ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಯಂತ್ರ ಶಾಸ್ತ್ರದಲ್ಲಿಯ ಉಚ್ಚ ಪದವಿಯನ್ನು ಪಡೆದು, ಅನೇಕ ಕಾರಖಾನೆಗಳಲ್ಲಿ ಸ್ವತಃ ದುಡಿದು ಅನುಭವವನ್ನೂ ಸಂಪಾದಿ ಸಿದ್ದರು. ಅವರು ಬಂದುದರಿಂದ ಕಾರಖಾನೆಯ ಗಾಡಿಗೆ ಒಂದು ಹೊಸ ಶಕ್ತಿಯ ಇಂಜಿನ ಹಚ್ಚಿದಂತಾಯಿತು. ಲಕ್ಷ್ಮಣರಾಯರಂತ, ಶಂತನು ಕೂಡ ಹುಟ್ಟಾ ಯಂತ್ರ ನಿಪುಣ. ಮಕ್ಕಳ ಗುಣ ಎಳೆತನದಲ್ಲಿಯೇ ಕಾಣುವದು, ೧ ವರ್ಷದ ವಯಸ್ಸಿನವ ನಿರುವಾಗಲೇ ಅವನು ತೆಗೆದ ಆಯಿಲ್ ಇಂಜಿನದ ರೇಖಾಚಿತ್ರವು ಅವನ ಯಂತ್ರಜ್ಞತೆಯನ್ನು ಸೂಚಿಸುತ್ತದೆ. ಅದನ್ನು ಕೆಳಗೆ ಕೊಡಲಾಗಿದೆ. ಜ ಸಿV LKTRLOPKAR `37