ಇ೫ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು - ಪುಣೆಯ ಪ್ರದರ್ಶನ ಮುಗಿದಮೇಲೆ, ಕಾರಖಾನೆಯಲ್ಲಿ ಆಯಿಲ್ ಮತ್ತು ಗ್ಯಾಸ್ ಇಂಜಿನುಗಳ ಉತ್ಪಾದನೆಯನ್ನು ಶಾಸ್ತ್ರೀಯವಾಗಿ ಹೇಗೆ ಪ್ರಾರಂಭಿಸ ಬೇಕೆಂಬ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಲಕ್ಷ್ಮಣರಾಯರಿಗೆ, ಶಂತನು ರಾಯನಂಥ ತಜ್ಞ ಇಂಜಿನೀಯರನು ಈಗ ಸಹಾಯಕ್ಕೆ ದೊರೆತುದರಿಂದ ಕೆಲಸವನ್ನು ಪ್ರಾರಂಭಿಸಲು ಅವರಿಗೆ ಎಷ್ಟು ಅಭಿಮಾನ, ಹಾಗು ಆನಂದಗಳು ಆಗಿರಬೇಕೆಂಬುದನ್ನು ಕಲ್ಪಿಸುವದೇ ಒಳಿತು, ಒಮ್ಮೆ ಪಿತಾ-ಪುತ್ರರು ಮುಂದಿನ ಯೋಜನೆಯನ್ನು ಮಾಡಲು ಕುಳಿತಾಗ ಇಬ್ಬರಲ್ಲಿಯೂ ಮಹತ್ವದ ವಿಷಯದ ಬಗ್ಗೆ ಒಮ್ಮತವಾಗದೇ ಹೋಯಿತ , "ಹಿರಿಯರೆ, ತಾವು ಮಾಡಿದ ಈ ಇಂಜಿನು ಒಳ್ಳೆ ರೀತಿಯಿಂದ ಕೆಲಸ ವನ್ನು ಕೊಡಬಹುದು, ಆದರೂ ಮಂದಗತಿಯ ಅಡ್ಡ ಇಂಜಿನುಗಳು ಈಗ ಹಿಂದೆ ಬೀಳುತ್ತ ನಡೆದಿದ್ದು, ತೀವ್ರಗತಿಯ ಮತ್ತು ಎದ್ದು ನಿಂತ ಇಂಜಿನುಗಳು ಮೆಲ್ಲನೆ ಪ್ರಚಾರದಲ್ಲಿ ಬರುತ್ತಲಿವೆ. ವಿಮಾನಗಳಿಗಾಗಿ ನಿರ್ಮಿಸುವ ಇಂಜಿನು ಗಳ ತೂಕ ಹಾಗೂ ಆಕಾರಗಳು ಕಡಿಮೆ ಇದ್ದು, ಹೆಚ್ಚು ಶಕ್ತಿಯನ್ನು ಅವು | ಗಳಲ್ಲಿ ಹೇಗೆ ಉತ್ಪಾದಿಸಬೇಕೆಂಬುದನ್ನೇ ಮುಖ್ಯವಾಗಿ ನೋಡಬೇಕಾಗುತ್ತದೆ. ಈ ವಿಷಯದಲ್ಲಿ ಅಮೇರಿಕೆ ಹಾಗೂ ಯುರೋಪದಲ್ಲಿ ತೀವ್ರತೆಯಿಂದ ಈ ಬಗ್ಗೆ ಅಭ್ಯಾಸ ನಡೆದಿದ್ದು, ಇಂಜಿನಿನ ರಚನೆಯಲ್ಲಿ ಬಹು ದೊಡ್ಡ ಕ್ರಾಂತಿ ಯಾಗಹತ್ತಿದೆ. ಈಗ ಡೀಲ್ ಮಾದರಿಯ ಇಂಜಿನುಗಳ ಯುಗವು ಪ್ರಾರಂಭವಾಗಿದೆ. ಆದುದರಿಂದ ನಾವು ಸಾವಕಾಶವಾಗಿ ನಡೆಯುವ ಹಳೆಯ ಅಡ್ಡ ರಚನೆಯ ಇಂಜನುಗಳನ್ನು ಮಾಡುವದಕ್ಕಿಂತ ಆಧುನಿಕ, ರೀತಿ ಯು ಎದ್ದು ನಿಂತ ಇಂಜನುಗಳನ್ನು ಸಿದ್ಧಪಡಿಸಬೇಕೆಂದು ನನಗೆ ಅನಿಸುತ್ತಿದೆ' ಎಂದು ಶಂತನುರಾಯನು ತಮ್ಮ ಅಭಿಪ್ರಾಯವನ್ನು ಹೇಳಿದನು. ಆಗ ಲಕ್ಷಣರಾಯರು “ಈ ಹೊಸ ಇಂಜನುಗಳ ಲಾಭವು ನನಗೆ. ಗೊತ್ತಿದೆ. ಆದರೆ ಅವುಗಳ ವೇಗವು ನಮ್ಮ ಒಕ್ಕಲಿಗರಿಗೆ ಹಿಡಿಯಬಹುದೆ ? ಮಿನೀಟಿಗೆ ೧೪೦೦ ರಿಂದ ೧೫೦೦ ರ ಸುತ್ತಿನವರೆಗೆ ವೇಗವುಳ್ಳ ಇಂಜನುಗಳಿ ಗಿಂತಲೂ ೫೦೦-೬೦೦ ಸುತ್ತುಗಳಿಂದ ನಡೆಯುವ ಇಂಜನುಗಳನ್ನು ಅವರು ವಿಶೇಷವಾಗಿ ಮನ್ನಿಸುವರೆಂದು ನನಗೆ ಅನಿಸುತ್ತಿದೆ' ಎಂದರು. ' (ಆ ಮಾತು ನಿಜ, ಆದರೆ ವೇಗವು ಕೂಡ ಮೆಲ್ಲ ಮೆಲ್ಲನೆ ಮುಸುಷ್ಯ ನಿಗೆ ರೂಢಿಯಾಗುತ್ತ ಹೋಗುತ್ತದೆ. ಮೊದಲು ರೈಲುಗಳು ತಾಸಿಗೆ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೫೨
ಗೋಚರ