ಯಂತ್ರಯೋಗಿ' ಕಿರ್ಲೋಸ್ಕತ ಲಕ್ಷ್ಮಣರಾಯರು |
- 47
ಬಂದರೆ, ಅವರಿಗೆ ನೆರವಾಗುವ ಅಪೂರ್ವಸಂಧಿ ದೊರೆಯುವದೆಂದೂ ಅವರು ಭಾವಿಸಿದ್ದರು. - ಇದೇ ಸಮಯಕ್ಕೆ ಸಾಕಷ್ಟು ನೂಲನ್ನು ಉತ್ಪಾದಿಸುವ ಮನುಷ್ಯ ಶಕ್ತಿಯ ಮೇಲೆ ನಡೆಯುವ ಸರ್ವೊತ್ಯಷ್ಟ ರಾಟಿಯನ್ನು ಮಾಡುವ ಶೋಧ ಕರಿಗೆ ಒಂದು ಲಕ್ಷ ರೂಪಾಯಿಯ ಮೆಚ್ಚು ಕೊಡಲಾಗುವದೆಂದು ಅಖಿಲ ಭಾರತೀಯ ಸ್ಪಿನರ್ ಅಸೋಸಿಯೇಶನ್ ವು ಜಾಹೀರ ಮಾಡಿದೆ ಎಂದು ಲಕ್ಷ್ಮಣರಾಯರಿಗೆ ತಿಳಿದೊಡನೆಯೇ ಕಿರ್ಲೋಸ್ಕರ ಕಾರಖಾನೆಯಲ್ಲಿಯ ಚರಖಾ ಖಾತೆಗೆ ಹೊಸ ಜೀವನ ಬಂದಿತು. ಈ ಸ್ಪರ್ಧೆಯು ಕೆಳಗಿನಂತಿದ್ದಿತು, “ಒಬ್ಬ ಮನುಷ್ಯನು ಎಂಟು ತಾಸಿನಲ್ಲಿ ೪೦ ನಂಬರಿನ ೧೫ ಸಾವಿರ ಯಾ ರ್ಡ ನೂಲನ್ನು ಈ ಚರಖಾದಿಂದ ತೆಗೆಯಬೇಕು, ಆ ಚರಖಾ ಕೆಟ್ಟರೆ ರಿಯಲ್ಲಿಯೇ ಅದು ನೆಟ್ಟಗೆಮಾಡಲು ಬರುವಂತಿರಬೇಕು, ಅದಕ್ಕೆ ೨೫೦ ರೂಪಾಯಿಗಳಿಗಿಂತಲೂ ಹೆಚ್ಚು ಬೆಲೆ ಬೀಳಬಾರದು, ಪರೀಕ್ಷಕರು ಕೊಟ್ಟ ನಿರ್ಣಯವು ಮಾನ್ಯಮಾಡಲ್ಪಡಬೇಕು. ಪರೀಕ್ಷಕರಲ್ಲಿ ಮತಬೇಧವಾದಾಗಮಾತ್ರ ಗಾಂಧೀಜಿಯವರು ಕೊಟ್ಟ ನಿರ್ಣಯ ವನ್ನು ಎಲ್ಲರೂ ಒಪ್ಪಬೇಕು ” ಇವೇ ಆ ಸ್ಪರ್ಧೆಯ ನಿಯಮಗಳಿದ್ದವು. ಈ ಕರಾರುಗಳು ಸುಲಭವಿರಲಿಲ್ಲ. ಆದರೆ ಶ್ರೀ ಕಾಳೆಯವರಿಗೆ ತಮ್ಮಿಂದ ರಚಿತವಾದ ಚರಖವು ಸ್ಪರ್ಧೆಯ ಎಲ್ಲ ನಿಯಮಗಳನ್ನು ಪೂರ್ಣಮಾಡುವ ದೆಂದು ಆತ್ಮವಿಶ್ವಾಸವನ್ನುಂಟುಮಾಡಿತ್ತು. ಈ ಸ್ಪರ್ಧೆಯು ೧೯೩೧ನೇ ಎಪ್ರಿಲ್‌ದಲ್ಲಿ ಎಂದು ಸಾರಲ್ಪಟ್ಟಿತ್ತು. - ಹೀಗೆ ಸಾರಲ್ಪಟ್ಟ ಮಹತ್ವದ ಸ್ಪರ್ಧೆಯಲ್ಲಿ ಭಾಗವಹಿಸಲು ಅನೇಕ ಚರಖಗಳು ಬಂದವು. ಅದರಲ್ಲಿ ಕೆಲವು ಪರದೇಶಗಳಿಂದಲೂ ಬಂದಿದ್ದವು. ಆದರೆ ಅಸೋಸಿಯೇಶನ್ನದ ಪರೀಕ್ಷಾ ಮಂಡಲವು ನಿರೀಕ್ಷಿಸಿದ ನಂತರ ಅವರ ಒರೆಗೆ ಕಾಳೇಯವರ ಚರಖಾ ಒಂದೇ ಹತ್ತಿತು. ಇಷ್ಟರಿಂದಲೇ ಸ್ಪರ್ಧೆಯ ನಿರ್ಣಯವಾಗಬೇಕಿದ್ದಿತು, ಆದರೆ ಪರೀಕ್ಷಕರು ಕಾಳೇಯಪರ ಮಾದರಿಯಲ್ಲಿ ಕೆಲವು ಸುಧಾರಣೆಗಳನ್ನು ಸೂಚಿಸಿದ್ದರಿಂದ ಕಾಳೇಯವರು ಅವುಗಳನ್ನು ಪೂರ್ಣಮಾಡಲು ಕಿರ್ಲೋಸ್ಕರವಾಡಿಗೆ ಬಂದರು. ಅವಶ್ಯವಿರುವ ಸುಧಾರಣೆಗಳನ್ನು ಅತ್ಯಂತ ಲಕ್ಷಾಪೂರ್ವಕವಾಗಿ ಉತ್ಸಾಹದಿಂದ, ಪೂರ್ಣ ಮಾಡಿದರು, ಅದನ್ನು ಪ್ರತ್ಯಕ್ಷ ಅವಲೋಕಿಳಲು