(೪ - ಮಿಂಚಿನಬಳ್ಳಿ | ಹಳ್ಳಿಗಳ ಸಲುವಾಗಿ ಅನೇಕ ಸಂಘಗಳನ್ನು ಸ್ಥಾಪಿಸಿದರು, ಈ ಎಲ್ಲ ಸಂಘಗಳ ಕಾರ್ಯಪ್ರವೃತಿ, ಕಾಗೂ ಪ್ರಗತಿಯನ್ನು ಕಂಡು, ದಿ ಬಾಂಬೆ ಹಾನಿಯಲ್ ಕೊ-ಆಪರೇಟಿವ ಬ್ಯಾಂಕಿನ ಡಾಯರೇಕ್ಟರ ಬೋರ್ಡಿನಲ್ಲಿ ಲಕ್ಷ್ಮಣರಾಯರು ಒಮ್ಮತದಿಂದ ಆಯ್ಕೆ ಹೊಂದಿದರು, ಮತ್ತು ಅಲ್ಲಿಯ ಕೆಲಸವನ್ನು ಒಳ್ಳೆ ದಕ್ಷತೆಯಿಂದಲೂ ಚಾಣಾಕ್ಷತನದಿಂದಲೂ ಪಾರುಗಾಣಿಸಿದರು. - ಮುಂದೆ ೧೨೩ ರಲ್ಲಿ ಶ್ರೀಮಂತ ಬಾಳಾಸಾಹೇಬರ ಹಿರಿಯ ಮಗನಾದ ರಾಜೇಸಾಹೇಬರು ವಿಲಾಯಿತಿಯಿಂದ ಬ್ಯಾರಿಷ್ಟರರಾಗಿ ಬಂದ ಮೇಲೆ ಅವರ ವಿಚಾರ ಪ್ರಚೋದನೆಯಿಂದ ಔಂಧ ಸಂಸ್ಥಾನದಲ್ಲಿ ಒಂದು ಪ್ರಾತಿನಿಧಿಕ ಸಭೆ. ಯನ್ನು ಸ್ಥಾಪಿಸಲಾಯಿತು. ಈ ಸಭೆಯಲ್ಲಿ ೨೦ ಜನರ ಒಂದು ಕಾಯದೆ ಮಂಡಳವು ಇದ್ದು, ಅದರಲ್ಲಿ ಅರ್ಧಜನರು ಸರಕಾರಿ ನಿಯುಕ್ತರೂ ಇನ್ನರ್ಧಜನರು ಲೋಕನಿಡುಕರೂ ಇದ್ದರು, ಲಕ್ಷ್ಮಣರಾಯರು ಲೋಕನಿಯುಕ್ತ ಸಭಾಸದರಾದರು. ಈ ರೀತಿಯಾಗಿ ಲಕ್ಷ್ಮಣರಾಯರ ಔಂಧ ಸಂಸ್ಥಾನದ ಕಾಯದೆ ಮುಂಡಳದಲ್ಲಿ ಪ್ರವೇಶಿಸಿದ ಮೇಲೆ ೧೯೨೯ರಲ್ಲಿ ಔಂಧ ಸ್ಟೇಟ್ ಬ್ಯಾಂಕ ಸ್ಥಾಪಿಸಿ ಮೊದಲನೆಯ ಮಹತ್ವದ ಕೆಲಸವನ್ನು ಸಾಧಿಸಿದರು. ಇದಕ್ಕೂ ಮೊದಲು ' ವ್ಯಾಪಾರೀಖಾನೆ ' ಎಂಬ ಹೆಸರಿನ ಟ್ರಝರಿ ಆಫೀಸರನ ನೇತೃತ್ವದಲ್ಲಿ ಒಂದು ಖಾತೆಯಿತ್ತು, ಅದರಿಂದ ಜನರಿಗೆ ಹಣ ದೊರಕುವ ಸೌಲಭ್ಯವಿತ್ತು. ಆಗಲೆ ಈ ವ್ಯವಸ್ಥೆಯ ಕಾರ್ಯಕ್ರಮವೂ ನಿಷ್ಪಕ್ಷಪಾತವೂ ಆಗಿರಲಿಲ್ಲ. ಆದ ಕಾರಣ ಲಕ್ಷಣರಾಯರು ತಜ್ಞರೊಬ್ಬರ ಸಹಾಯದಿಂದ ಈ ಬ್ಯಾಂಕಿನ ಘಟನೆಯನ್ನ ಸಿದ್ಧಪಡಿಸಿಕೊಂಡು, ಈ ಕೆಲಸದಲ್ಲಿ ಅವರಿಗೆ ಶ್ರೀ, ವಾಮನ. ರಾವ ಕಾಳೆ, ಜ. ಸ, ಮರಾಠ ಮತ್ತು ಎಂ ಆರ್, ಗಾಳೆ ಮೊದಲಾದವರ ನೆರವು ದೊರೆಯಿತು, ಈ ಬ್ಯಾಂಕಿನ ಬೋರ್ಡ ಆಫ್ ಡೈರೆಕ್ಟರರ ಅಧ್ಯಕ್ಷ ಸೀತದ ಮೇಲೆ ಅಣರಾದರು ನಿಯಮಿಸಲ್ಪಟ್ಟರು, ಅಕ್ಷಣರಾಯರ ದಕ್ಷ ಆಡಳಿತೆಯಲ್ಲಿ ಈ ಬ್ಯಾಂಕು ಭರದಿಂದ ಸಾಗಿತು, ಅದರ ಈ ಪ್ರಗತಿಯ ಮೂಲಕ ಆಟಪಾಡೀ, ಕುಂಡಲ, ಗುಣದಾಳ, ದಿಧಂಚಿ, ಜ.ಗಲೇವಾಡಿ ಮತ್ತು ಬಚೂದಗಳಲ್ಲಿ ಇದರ ಶಾಖೆಗಳು ತೆರೆಯಲ್ಪಟ್ಟವು. ಔಂಧ ಹಾಗೂ ಭವಾನೀನಗರ ( ಬಿಚದ } ಗಳಲ್ಲಿ ಬ್ಯಾಂಕಿನ ಸ್ವತಂತ್ರ ಕಟ್ಟಡಗಳು “ನಿರ್ಮಾಣವಾಗ, ಈ ಬ್ಯಾಂಕಿನಿಂದ ಸಂಸ್ಥಾನದೊಳಗಿನ ರೈತ, ವ್ಯಾಪಾರಿ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೮೭
ಗೋಚರ