ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ಮಿಂಚಿನಬಳ್ಳಿ 'ಗಾರಿಯನ್ನು ಹಿಡಿಯಬೇಕಾಯಿತು, ಇದರಿಂದ ಅವರ ಕಾರ್ಯ ಹಾಗು ಉತ್ಸಾಹಗಳಲ್ಲಿ ಏನೂ ಕಡಿಮೆಯಾಗಲಿಲ್ಲ. - ಲಕ್ಷ್ಮಣರಾಯರು ದಿವಾಣರಾಗುವ ಮೊದಲು ಶೇಣೇಲಿ ಮುತ್ತು ತಾಕಾರಿಗಳ ನಡುವೆ ಬಿಚದ ಎಂಬ ಹೆಸರಿನ ಹೊಸ ರೇಲ್ವೆ ನಿಲ್ದಾಣವನ್ನು ರೇಲ್ವೆಯವರು ತೆರೆದರು, ಈಗ ಅವಕ್ಕೆ ಭವಾನೀನಗರವೆಂದು ಹೆಸರನಿಟ್ಟರು. ವರು ಈ ಸ್ಥಳವು ಔಂಧ ಸಂಸ್ಥಾನದೊಳಗಿನದು, ಆದ್ದರಿಂದ ಈ ನಿಲ್ದಾಣದ ಸಮೀಪದಲ್ಲಿ ಒಂದು ಆಧುನಿಕ ವಸಾಹತನ್ನೂ ಪೇಟೆಯನ್ನೂ ತೆರೆದರೆ, ಅದೊಂದು ಮಹತ್ವದ ಪಟ್ಟಣವಾಗದಿರದೆಂದೂ ಅದರ ಸುತ್ತುಮುತ್ತಲಿನ ೨೫-೩೦ ಹಳ್ಳಿಗಳಿಗೆ ತುಂಬಾ ಲಾಭದಾಯಕವಾಗುವದೆಂದೂ ಲಕ್ಷಣ ರಾಯರ ಮನಸ್ಸಿನಲ್ಲಿ ಬಂದಿತು, ವಸಹಾತಿನ ನಕ್ಷೆಯೂ ಸಿದ್ಧವಾಯಿತು. ಪ್ಲಾಟುಗಳು ಸುಲಭ ಬೆಲೆಗೆ ದೊರೆಯಲೆಂಬ ಉದ್ದೇಶದಿಂದ ಎಕರಗೆ ೪೦೦ ರೂ. ಗಳನ್ನಿರಿಸಲಾಯಿತು, ಅದರಿಂದ ಪ್ಲಾಟುಗಳು ಬೇಗಬೇಗನೇ ಮಾರಾಟವಾದವು, ಸಣ್ಣ-ದೊಡ್ಡ ಮನೆಗಳು ಎದ್ದವು. ಈ ಹೊಸ ವಸಾಹತಿಗೆ ಕೃಷ್ಣಾ ನದೀತೀರದ ಹಳ್ಳಿಗಳಿಂದ ಮಾಲು ಬರಲು ಅನುಕೂಲ ನಾಗಿತ್ತು, ಆದರೆ ಪೂರ್ವದ ಕಡೆಯ ಗುಡ್ಡ ದವಾರಿಯಲ್ಲಿರುವ ದೇವರಾಷ್ಟ್ರ, ಸೋನಕಿರೆ, ಶಿರಸಗಾಂವ ಮೊದಲಾದ ಹಳ್ಳಿಗಳಿಂದ ಮಾಲು ಬರಲು ರಾಜ. ಮಾರ್ಗವಿಲ್ಲದ್ದರಿಂದ ಅಶಕ್ಯವಾಗಿತ್ತು. ಈ ಹಳ್ಳಿಗಳಿಗೆ ಸಾರಿಗೆ ಸಂಪರ್ಕವನ್ನು ಬೆಳೆಯಿಸಲು ಘಟ್ಟದಲ್ಲಿ ದಾರಿಯನ್ನು ಮಾಡುವ ಸಲುವಾಗಿ ಲಕ್ಷ್ಮಣರಾಯರು ಕಾಲ್ನಡಿಗೆಯಿಂದಲೇ ತಿರುಗಾಡಿ ಅದರ ರೂಪರೇಷೆಯನ್ನು ತಯಾರಿಸಿದರು; ಕಾಯದೆಮುಂಡಳದಿಂದ ಈ ಕೆಲಸಕ್ಕೆ ಅನುಮತಿಯನ್ನು ಪಡೆದರು, ಇದು ಸಾಧ್ಯವೇ ? ಎಂದು ಅನೇಕ ಜನರು ಸಂಶಯವನ್ನು ವ್ಯಕ್ತಗೊಳಿಸಿದರು, ಆದರೂ ಲಕ್ಷ್ಮಣ ರಾಯರು ತಮ್ಮ ವಿಶ್ವಾಸಿಕರಾದ ರಾಮಾ ವಡ್ಡರ ಹಾಗೂ ಅವನ ೩೦೦೪೦೦ ಜನರನ್ನು ಈ ಕೆಲಸದಲ್ಲಿ ತೊಡಗಿಸಿದರು, ಅವರ ಅವಿಶ್ರಾಂತ ದುಡಿಮೆಯಿಂದ ಮಾರ್ಗವು ಸಿದ್ದವಾಗತೊಡಗಿತ್ತು, ಬೇಸಿಗೆಯ ದಿವಸ; ಬಿಸಿಲಿನ ಟೊಪ್ಪಿಗೆ ಧರಿಸಿಕೊಂಡು ಲಕ್ಷಣರಾಯರು ಆಗಾಗ ಬಂದು ಕೆಲಸದ ಪ್ರಗತಿಯನ್ನು ನೋಡುತ್ತಲೇ ಇದ್ದರು. ಒಮ್ಮೆಯಂತೂ ಬಿಸಿಲಿನ ಸಾಹದಿಂದ ಅವರಿಗೆ ಮೂರ್ಛಿಯ ಪ್ರಸಂಗವೂ ಬಂದಿತು, ಮಧ್ಯಾನದಲ್ಲಿ