ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಗುಡ್ಡದ ಕಡೆಗೆ ಹೊಗಕಡದೆಂದು ಡಾಕ್ಟರರು ಲಕ್ಷಣರಾಯರಿಗೆ ನಿರ್ಬಂಧಿ. ಸಿದರು, ಆದರೆ ಅವರ ಸಲಹೆಯಂತೆ ನಾಲ್ಕು ದಿನ ಮಾತ್ರ ನಡೆದುಕೊಂಡರು. ಮತ್ತೆ ಯಥಾಪ್ರಕಾರವಾಗಿ ತಮ್ಮ ರೀತಿಯನ್ನೇ ಅನುಸರಿಸಿದರು, ಮಾರ್ಗವು ಪೂರ್ತಿಗೊಂಡಿತು, ರಾಜೇಸಾಹೇಬರು ಅಗರ ಉದ್ಘಾಟನೆಯ ಸಮಾರಂಭ. ವನ್ನು ನೆರವೇರಿಸಿದರು. ಒಮ್ಮೆ ಗ್ರಾಮೋದ್ಧಾರದ ಕೆಲಸಕ್ಕೆ ಮನಸ್ಸು ಮಾಡಿದ ಮೇಲೆ ರೈತ ಬಾಂಧವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಯಾವ ಯಾವ ಉದ್ಯೋಗ ವ್ಯವಹಾರಗಳು ಉಪಯುಕ್ತವಾದವು ? ಎಂಬುದರ ಬಗ್ಗೆ ಲಕ್ಷ್ಮಣರಾಯರ ಪ್ರಯೋಗಗಳೂ ಅಭ್ಯಾಸವೂ ಆರಂಭವಾದವು, ಕೋಳಿ ಸಾಕುವ ಉದ್ಯೋ ಗವು ಅವರಿಗೆ ಒಳ್ಳೇದೆಂದೆನಿಸಿದ್ದರಿಂದ ಅವರು ಕಿರ್ಲೋಸ್ತರವಾಡಿಯಲ್ಲಿ ಒಂದು ಪೋ ಫಾರ್ಮನ್ನು (ಕೋಳಿ ಸಾಕುವದನ್ನು) ಆರಂಭ ಮಾಡಿದರು. ಈ ವಿಷಯದಲ್ಲಿ ತಜ್ಞರಾದ ಶ್ರೀ. ಡಿ. ಎ. ಲೋಟಲೀಕರ ಎಂಬವರ ಸಹಕಾರದ ಲಾಭವು ದೊರೆತದ್ದರಿಂದ ಈ ಫಾರ್ಮು ಒಳ್ಳೇ ರೀತಿಯಿಂದ ಬೆಳೆಯಿತು, ಈ ಫಾರ್ಮಿನಲ್ಲಿ ನಾಯಿಟ್ ಲೆಗ್ಹಾರ್ನ ಮತ್ತು ಹೋಡ, ಅಯಂಡ ರೆಡ ಎಂಬ ಜಾತಿಯ ಕೋಳಿಗಳ ಉತ್ಪತ್ತಿಯನ್ನೇ ವಿಶೇಷವಾಗಿ ಕೈಕೊಳ್ಳಲಾ ಯಿತು. ಇದಕ್ಕೆ ಬೇಕಾಗುವ ಉಪಕರಣಗಳನ್ನು ಮೊದ ಮೊದಲು ಹೊರ ಪೇಟೆಯಿಂದ ತರಿಸಲಾಯಿತು, ಮುಂದೆ ಅಂಥ ಉಪಕರಣಗಳನ್ನೆಲ್ಲ ಕಿರ್ಲೋಸ್ಕರವಾಡಿಯಲ್ಲಿಯೇ ಸಿದ್ಧಪಡಿಸುವ ಕಾರ್ಯವನ್ನು ಕೈಕೊಳ್ಳಲಾ ಯಿತು, ಇಲ್ಲಿ ಹುಟ್ಟುವ ತತ್ತಿಗಳ ಮಾರಾಟ ಹೇಗೆ ಮಾಡಬೇಕೆಂಬ ಪ್ರಶ್ನೆ ಬಂದಿತು, ಅಲ್ಲಿಯ ಸ್ಪಳಿಕ ಪೇಟೆಯಲ್ಲಿ ಇವು ಮಾರಾಟವಾಗುತ್ತಿದ್ದಿಲ್ಲ, ದೇಶೀ ಕೋಳಿಗಳ ತತ್ತಿಗಳು ಇದಕ್ಕಿಂತ ಚಿಕ್ಕನಿದ್ದರೆ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತಿ ದ್ರವು, ಈ ತೊಂದರೆಯ ಮೂಲಕ ಆ ತತ್ತಿಗಳ ಮಾರಾಟಕ್ಕೆ ಪೇಟೆಯನ್ನು ಹುಡುಕುವದಕ್ಕೆಂದು ಪುಣೆ, ಮಹಾಬಳೇಶ್ವರ, ಮುಂಬಯಿಗಳಲ್ಲಿ ವಾಸಿಸುವ ಐರೋಪ್ಯರ ಊಟದ-ಮನೆಗಳ ಸಂಪರ್ಕವನ್ನು ಲಕ್ಷ್ಮಣರಾಯರು ಬೆಳೆಯಿಸಿ ಕೊಳ ಬೇಕಾಯಿತು, ಈ ಮಾಲು ಸುರಕ್ಷಿತವಾಗಿ ಪರ-ಊರುಗಳಿಗೆ ತಲಪುವ ಸಲುವಾಗಿ ವಿಶಿಷ್ಟ ತರದ ಪೆಟ್ಟಿಗೆಗಳನ್ನು ತಯಾರಿಸಿದರು, ಇದೆಂಥ ಪ್ರಯತ್ನವು ! ಲಕ್ಷ್ಮಣರಾಯರ ಈ ತಳನುಳವನ್ನು ಕಂಡು ಭವಾನೀನಗರದ