ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧S ಯಂತ್ರಯೋಗಿ ಕಿರ್ಲೊರ ಲಕ್ಷಣರಾಯರು - “ಒಡೆಯರಾದ ಲಕ್ಷಣರಾಯರು ಪ್ರತಿ ರವಿವಾರಕೊಮ್ಮೆ ಮುಂಜಾನೆ' ೮ ಗಂಟೆಗೆ ರಾಮಾಪುರಕ್ಕೆ ಬರುತ್ತಿದ್ದರು; ಕೆಲಸ ತೀರಿದ ಮೇಲೆ ತಿರುಗಿ ಹೋಗುತ್ತಿದ್ದರು, ಅವರು ಸಾಮುದಾಯಿಕ ಒಕ್ಕಲುತನದ ಕಲ್ಪನೆಯನ್ನು ನಮಗೆ ಹೇಳಿಕೊಟ್ಟಿದ್ದರಿಂದಲೇ ನಾವು ಆ ಕೆಲಸವನ್ನು ಆರಂಭಿಸಿದೆವು, ಈ ಸಾಮುದಾಯಿಕ ಒಕ್ಕಲುತನದ ಉಪದೇಶದೊಂದಿಗೆ ಅವರು ನಮಗೆ ಜೋಳ, ಶೇಂಗಾಗಳ ಬೆಳೆಯನ್ನು ಬೆಳೆಸುವ ಪದ್ದತಿಯನ್ನು ತಿಳುಹಿಸಿಕೊಟ್ಟರು. ಅದರಂತೆ ೨೭ ಇಂಚಿನ ಚೌಕಟ್ಟಿನಿಂದ ಸಮಾಂತರ ಚೌಕಗಳನ್ನು ಗುದ್ದಲಿ ಯಿಂದ ಒಗಿದು ಸಾಲುಗಳನ್ನು ಮಾಡಲಾಯಿತು, ಆದರೆ ಸಾಕಷ್ಟು, ಹಸಿಯಿಲ ದ್ದರಿಂದ ಕೊಡಗಳಿಂದ ನೀರನ್ನು ತಂದು ಸುರುವುತ್ತಿದ್ದೆವು, ಅಷ್ಟರಲ್ಲಿ ಒಡೆಯರು ಅಲ್ಲಿಗೆ ದಯಮಾಡಿಸಿದರು. ನೀರು ಹೊತ್ತು ತರುವಂಥವರ ಬೆನ್ನುಮೇಲೆ ಕೈಯ್ಯಾಡಿಸಿ 'ತಡೆಯಿರಿ, ಸುಮ್ಮನೆ ಏಕೆ ಶ್ರಮಪಡುವಿರಿ ? ನನ್ನ ಮೋಟಾರ ತೆಗೆದುಕೊಳ್ಳಿರಿ, ಅದರಿಂದ ನೀರುತೆಗೆದುಕೊಂಡು ಬನ್ನಿರಿ' ಎಂದು ಹೇಳಿದರು. ಆಮೇಲೆ ಕೇಳುವದೇನು ? ನಿರೇ ನಿರಾಯಿತು. ಸಸಿಗಳನ್ನು ನೆಡುವ ಕೆಲಸವು ಕೂಡಲೆ ಪೊರೈಸಿತು.” “ಅಷ್ಟರಲ್ಲಿ ಮಧ್ಯಾಹ್ನವಾಯಿತು. ಜಾಜೂವು ಹಾಸಿಕೊಂಡು ಎಲ್ಲರೂ ಊಟಕ್ಕೆ ಕುಳಿತೆವು, ಒಡೆಯರು ಮೊಸರನ್ನ, ಗೋದಿರೊಟ್ಟಿ, ಪಲ್ಯ ಮೊದಲಾದವುಗಳ ಒಂದು ಡಬ್ಬಿಯನ್ನೇ ತಂದಿದ್ದರು, ಅವರು ಎಲ್ಲರಿಗೂ ತಮ್ಮ ಬುತ್ತಿಯನ್ನು ಹಂಚಿಹಾಕಿದರು. ಒಡೆಯರೂ ನಮ್ಮ ಪಂಕ್ತಿಯಲ್ಲಿಯೇ ಊಟಕ್ಕೆ ಕುಳಿತರು. ಇನ್ನು 'ಪುಂಡಲೀಕವರದ' ಎಂದೆನ್ನುವಷ್ಟರಲ್ಲಿ 'ನಾನು ನಿಮಗೆ ನನ್ನ ಬುತ್ತಿರೊಟ್ಟಿಯನ್ನು ಹಾಕಿದ್ದೇನೆ, ನೀವೆಲ್ಲರೂ ನಿಮ್ಮ ಬುತ್ತಿ ಯನ್ನು ಒಂದು ಸ್ವಲ್ಪ ಸ್ವಲ್ಪ ಹಾಕಿರಿ' ಎಂದಂದರು. ಆಗ ನಾವು ಅವರಿಗೆ ಕುದಿಸಿದ ಗೆಣಸು, ಝುಣಕ, ಪುಂಡಿಯಪಲ್ಯ, ಉದ್ದಿನಹಿಟ್ಟು, ಖಾರಬ್ಯಾಳಿ ಮೊದಲಾದ ನಮ್ಮ ಬುತ್ತಿಯನ್ನು ಅವರಿಗೆ ಬಡಿಸಿದೆವು. ನಗುತ್ತ, ಕೆಲೆಯುತ್ತ ಊಟಮಾಡಿ ನಮ್ಮ ನಮ್ಮ ಮನೆಗೆ ತೆರಳಿದೆವು, ನಮ್ಮ ಒಡೆಯರು ಕೃಷ್ಣ. ನೆಂದಾದರೆ ನಾವೆಲ್ಲರೂ ಗೋಪಾಲಕರಾದೆವು.” “ನನ್ನ ಊರಿನ ಸಲುವಾಗಿ ಅವರು ಏನೇನು ಮಾಡಿದರೆಂಬ ಹಟ್ಟಿ. ಯನ್ನು ಕೊಟ್ಟರೆ ಮುಗಿಯುವದೇ ಇಲ್ಲ, ಅವರು ನೆರೆಹೊರೆಯ ಸೋನ. ಹಿರೆಗೆ ಕಾಂಕ್ರೀಟದ ಒಡನ್ನು ಕಟ್ಟಿ ೬೦ ಯಕರೆಗೆ ನೀರು ದೊರೆಯುವಂತೆ