ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೊ ಸ್ಟರ ಲಕ್ಷ್ಮಣರಾಯರು ೧೫೫ ರಾಧಾಬಾಯಿಯವರು ಶಸ್ತ್ರಕ್ರಿಯೆಯಿಂದ ಸುಧಾರಿಸಿ ತಿರುಗಾಡು. ತಿರುವದನ್ನು ಕಂಡು ಎಲ್ಲರಿಗೂ ಸಂತೋಷವಾಯಿತು, ಕಿರ್ಲೋಸ್ಕರನಾಡಿಗೇ ಅವರು • ಮನ್ನಾ ? ಆಗಿದ್ದರು, ಎಲ್ಲರೂ ಅವರನ್ನು ತಾಯಿಯಂತೆ ಪ್ರೀತಿ. ಸುತ್ತಿದ್ದರು. ಈ ಆನಂದದ ನಿಮಿತ್ತವಾಗಿ ಈ ದೀಪಾವಳಿಯನ್ನು ಬಹು ಸಂಭ್ರಮದಿಂದ ಜರುಗಿಸಬೇಕೆಂದು ಎಲ್ಲರೂ ನಿರ್ಣಯಿಸಿದರು. ಈ ವರ್ಷದ ಲಕ್ಷ್ಮೀ ಪೂಜೆಯನ್ನು ಲಕ್ಷಣರಾಯರೂ ರಾಧಾಬಾಯಿ, ಯವರೂ ಕೂಡಿಯೇ ಮಾಡಬೇಕೆಂಬ ಯೋಜನೆಗೆ ಅವರಿಬ್ಬರ ಅನುಮತಿಯು ದೊರೆತಾಕ್ಷಣವೇ ಸಮಾರಂಭದ ಸಂಭ್ರಮದಸಿದ್ಧತೆ ನಡೆಯಿತು ಸಮಾಜ ಮಂದಿರವು ಸಿಂಗರಿಸಲ್ಪಟ್ಟಿತು, ಚಿತ್ರಕಾರನು ಲಕ್ಷ್ಮಿಯ ಪೂರ್ಣಾಕಾರದ ಸುಂದರ ಮೂರ್ತಿಯನ್ನು ಚಿತ್ರಿಸಿದನು, ಆಕೆಯ ಎದುರಿನಲ್ಲಿ ಕಾರಖಾನೆ. ಯಲ್ಲಿ ತಯಾರಾಗುವ ರಂಟೆ, ಚರಖ, ಪಂಪು ಇವೇ ಮೊದಲಾದ ಸಾಮಾನುಗಳನ್ನು ಚಿತ್ತಾಕರ್ಷಕವಾಗುವಂತೆ ಮಂಡಿಸಿ, ಲಕ್ಷ್ಮಿಯು ತನ್ನ ಕರಕಮಲಗಳಿಂದ ಅವುಗಳನ್ನೆತ್ತಿ ಹಿಡಿದಿರುವಂತೆ ತೋರಿಸಲಾಗಿತ್ತು. ಈ ಎಲ್ಲ ಸಾಧನ ಗಳ ಫಲವಾಗಿ ಒಕ್ಕಲಿಗರ ಮನೆಗಳಲ್ಲಿ ಧನಧಾನ್ಯ ಸಮೃದ್ದಿಯು ಹೇಗೆ ಆಗುತ್ತಿದೆ ಎಂಬುದನ್ನೂ ಈ ಭವ್ಯ ನೋಟದಲ್ಲಿ ಚಿತ್ರಿಸಲಾಗಿತ್ತು. ಈ ದೃಶ್ಯವು ಇನ್ನಿಷ್ಟು ಸುಂದರವಾಗಿ ಕಾಣಲು ಅಲ್ಲಿ ಬಣ್ಣ ಬಣ್ಣದ ದೀಪಗಳನ್ನಿಡಲಾಗಿತ್ತು. ಸನಾಯಿ ವಾದ್ಯದ ಸುಸ್ವರವು ನಾಯಂಕಾಲದ ೫ ಗಂಟೆಗೆ ಕೇಳಬರಹತ್ತಿತು, ನಾಡಿಯ ನಾಗರಿಕರಿಂದ ಸಮಾಜಮಂದಿರವು ಕಿಕ್ಕಿರಿದು ತುಂಬಿತು. ಅಷ್ಟರಲ್ಲಿ ಬಾಗಿಲಲ್ಲಿ ಮೋಟಾರ ಬಂದಿತು. ಲಕ್ಷ್ಮಣರಾವ ದಂಪತಿಗಳು ಒಳಗೆ ಪ್ರವೇಶಿಸಿದರು. ಜನರು ಚಪ್ಪಾಳೆಯಿಕ್ಕಿ ಸ್ವಾಗತಿಸಿದರು ಲಕ್ಷ್ಮಣ ರಾಯರು ಬಿಳಿದಾದ ಖಾದಿ ಬಟ್ಟೆಯನ್ನು ಧರಿಸಿದ್ದರು. ರಾಧಾಬಾಯಿಯವರು ಅಂಜೂರಿಬಣ್ಣದ ಅಂಚಿನ ಸೀರೆಯನ್ನುಟ್ಟಿದ್ದರು. ಮೂಗಿನಲ್ಲಿ ನತ್ತು ಮತ್ತು ಮೈ ಮೇಲೆ ಕೆಲವು ಮುಖ್ಯ ಆಭರಣಗಳನ್ನು ಹಾಕಿಕೊಂಡಿ ದ್ದರು. ಇಂದು ಶಾಸ್ತ್ರಿಗಳು ಪೂಜೆಮಾಡಿಸುವ ರೀತಿಯೇ ಬೇರೆ ವಿಧವಾಗಿತ್ತು. ಆರತಿ, ಮಂತ್ರಪ್ರಷ್ಟ, ಪ್ರಸಾದ ಮೊದಲಾದವುಗಳು ಮುಗಿದ ಮೇಲೆ ನೆರೆದ ಜನಸಮುದಾಯವು ಆನಂದದಿಂದ ತಮ್ಮ ತಮ್ಮ ಮನೆಗೆ ತೆರಳಿತು. ಎರಡನೆಯ ದಿನ ಕಿರ್ಲೋಸ್ಕರವಾಡಿಯಲ್ಲಿ ನಡೆದ ಇನ್ನೊಂದು ಉತ್ಸಾಹ ಜನಕ ಕಾರ್ಯಕ್ರಮವೆಂದರೆ, ಬಾಲಕರ ಪ್ರದರ್ಶನ, ಆದಕ್ಕೂ ರಾಧಾ