ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿಸಬಳ್ಳಿ ಬಾಯಿಯವರೇ ಅಧ್ಯಕ್ಷಿಣಿಯರು, ಕಿರ್ಲೋಸ್ಕರವಾಡಿಯ ಆರೋಗ್ಯದಾಯಕ ವಾತಾವರಣದಲ್ಲಿ ಬೆಳೆದ ಬಾಲಕ-ಬಾಲಕಿಯರೆಲ್ಲ ಮೈ ತುಂಬಿಕೊಂಡು ನಗು ಮುಖವುಳ್ಳವರಾಗಿದ್ದರು. ಪರೀಕ್ಷಕರು ಬಹುಮಾನಗಳನ್ನು ಸಾರಿದರು. ರಾಧಾಬಾಯಿಯವರು ಅಂದಿನ ಪ್ರಸಂಗವನ್ನೆತ್ತಿ ಒಂದು ಚಿಕ್ಕ ಭಾಷಣವನ್ನು ಮಾಡಿದರು. ಆನಂತರ ಅವರ ಅಮೃತಹಸ್ತದಿಂದ ಬಹುಮಾನಗಳನ್ನು ಹಂಚಲಾಯಿತು. ಅಂದು ಭಾವ-ಬಿದಿಗೆಯಾದ್ದರಿಂದ ಲಕ್ಷ್ಮಣರಾಯರು ಬಟುಆಕ್ಕನ ಕಡೆಗೆ ಹೋಗಿ ಆಕೆಗೆ ನಮಸ್ಕರಿಸಿ ಬಂದರು, ರಾತ್ರಿಯಲ್ಲಿ ಚಂದ್ರ ಜ್ಯೋತಿ, ಬಾಣ, ಹೂಬಾಣ, ಕುಳ್ಳಿ ಮೊದಲಾದ ಮನೋಹರ ಮದ್ದಿನ ಗರ್ಜನೆಯಿಂದ ಇಡೀ ಕಿರ್ಲೋಸ್ಕರನಾಡಿಯು ಶೋಭಿಸಿತು. - ಮಾರನೆಯದಿನ ಬೆಳಗಿನ ಗಂಟೆ ಬಾರಿಸಿತು, ಹೊಸ ಹುರುಪಿನಿಂದ ಕೆಲಸಗಾರರು ಕಾರಖಾನೆಯನ್ನು ಪ್ರವೇಶಿಸಿ ಕೆಲಸದಲ್ಲಿ ತೊಡಗಿದರು. ಲಕ್ಷ್ಮಣರಾಯರು ಡಾಕ್ಟರರನ್ನು ಕರೆದುಕೊಂಡು ರಾಮಪುರದ ಜನರಿಗೆ ಪ್ಲೇಗ ಮೈಲಿಯನ್ನು ಚುಚ್ಚಿಸುವದಕ್ಕಾಗಿ ತೆರಳಿದರು. ನಿನ್ನಿನ ಶ್ರಮದಿಂದ ರಾಧಾಬಾಯಿಯವರಿಗೆ ಹೆಚ್ಚು ನಿದ್ದೆ ಹತ್ತಿರಬೇಕೆಂದು ಅವರ ಕೋಣೆಗೆ ಹೋಗಿ ಯಾರೂ ಅವರನ್ನು ಎಬ್ಬಿಸಲಿಲ್ಲ, ಅಂದೇ ಬಡೋದೆಯ ಡಾಕ್ಟರ ಪಂಡಿತರೆಂಬವರು ಅತಿಥಿಗಳಾಗಿ ಆಗಮಿಸಿದ್ದರು. ಅವರ ಲಕ್ಷವು ಅಕ ಸ್ಮಾತಾಗಿ ಆ ಕೋಣೆಯ ಕಡೆಗೆ ಹೋದುದರಿಂದ ಅವರಿಗೆ ಸಂದೇಹವು ಬಂದು ಪಕ್ಕದಲ್ಲಿ ನಿಂತಿದ್ದ ಪ್ರಭಾಕರಸಂತನನ್ನು ಕರೆದು ನಿಮ್ಮ ಮಾತೋಶ್ರೀಯವ ರನ್ನು ಎಬ್ಬಿಸು ಎಂದು ಹೇಳಿದರು. ಪ್ರಭಾಕರಸಂತರು ತಾಯಿಯ ಮಂಚದ ಹತ್ತಿರ ಹೋಗಿ ನೋಡುತ್ತಾರೆ, ರಾಧಾಬಾಯಿಯವರ ಆತ್ಮವು ಅವರ ಶರೀರವನ್ನು ಬಿಟ್ಟು ಯಾವಾಗಲೋ ಹೊರಟುಹೋಗಿತ್ತು. ಕಾರಖಾನೆ ೯ ಗಂಟೆಯು ಗಣ ಗಣ ಬಾರಿಸತೊಡಗಿತು, ಕೂಡಲೆ ಸಾವರಹೌಸ ಬಂದಾಯಿತು, ಎಲ್ಲರೂ ಏನಾಯಿತೆಂಬ ಗೊಂದಲದಲ್ಲಿ ಬಿದ್ದರು. ಅಷ್ಟರಲ್ಲಿ ಮಮ್ಮಾ ಸ್ವರ್ಗಸ್ಥರಾದರೆಂಬ ಸುದ್ದಿಯು ಬಂದಿತು, ಆದರೆ ಜನರು ಅದನ್ನು ನಂಬದೇ ಹೋದರು, ನಿನ್ನೆ ಸಾಯಂಕಾಲ ಬಾಲಕರ ಪ್ರದರ್ಶನದ ಅಧ್ಯಕ್ಷಿಣಿಯರಾಗಿದ್ದರು, ಎಲ್ಲರೊಡನೆ ಮಾತು-ಕತೆಯಾಡಿದ್ದರು. ಅಂಥ ವರು ಇಂದು ಒಮ್ಮಿಂದೊಮ್ಮೆಲೆ ಹೇಗೆ ಸ್ವರ್ಗಸ್ಥರಾದರು ? ಅವರ ಪ್ರಕೃತಿಯ