ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಅಷ್ಟು ಕೆಟ್ಟಿದ್ದರೆ, ಶಂತನುರಾವ, ರಾಜಾರಾಮರಾಯರು ಕೆಲಸಕ್ಕೇಕೆ ಬಂದರು ? ಒಡೆಯರು ರಾಮಪುರಕ್ಕೇಕೆ ಹೋದರು ? ಛೇ ! ಈ ಸುದ್ದಿ ಸುಳ್ಳಿರಬೇಕು! ಆದರೆ ಇಂಥ ಅಶುಭವಾರ್ತೆಗಳು ಎಂದಿಗೂ ಸುಳ್ಳಾಗುವದಿಲ್ಲ. ಈ ವಾರ್ತೆಯು ನಿಜವೆಂದು ಕಂಡುಬಂದಾಗ ಇಡೀ ವಾಡಿಯೇ ಶೋಕಸಾಗರದಲ್ಲಿ ಮುಳುಗಿ, ಕೆಲಸಗಾರರೆಲ್ಲರೂ ಅಂತ್ಯದರ್ಶನಕ್ಕೆಂದು ಅವರ ಮನೆಯ ಕಡೆಗೆ ತೆರಳಿದರು. ಅನಂತರಾವ ಫಣೀಕರರು ರಾಮಪುರದಿಂದ ಲಕ್ಷಣರಾಯರನ್ನು ಕರೆದುಕೊಂಡು ಬಂದರು. ಅವರು ರಾಧಾಬಾಯಿಯ ಪಾರ್ಥಿವ ದೇಹದ ಕಡೆಗೆ ನೆಟ್ಟನೋಟದಿಂದ ನೋಡುತ್ತ ಸ್ವಲ್ಪು ಸುಮ್ಮನೆ ನಿಂತುಕೊಂಡು “ನಿಜ. ನಾಗಿಯೂ ನೀನು ನನ್ನನ್ನು ಬಿಟ್ಟು ದೇವರ ಮನೆಗೆ ಹೋದೆಯಾ ?” ಎಂದಂದು ಕಣ್ಣು ಗಳನ್ನೊರಿಸಿಕೊಂಡರು, ಆಸ್ತೇಷ್ಟರ ಆಕ್ರೋಶದಿಂದ ಅಲ್ಲಿಯ ವಾತಾವರಣವು ತುಂಬಿಹೋಯಿತು, ರಾಧಾಬಾಯಿಯವರ ಜಡಶರೀರವನ್ನು ಕಿರ್ಲೋಸ್ಕರವಾಡಿಯ ಪ್ರವೇಶದ್ವಾರದ ಸಮೀಪದಲ್ಲಿರುವ ಬಯಲು ಸ್ಪಳದಲ್ಲಿ ಅಗ್ನಿನಾರಾಯಣನಿಗೆ ಅರ್ಪಿಸಲಾಯಿತು. ಮರಣ ಸಮಯಕ್ಕೆ ರಾಧಾಬಾಯಿಯವರಿಗೆ ೫೫ ವರುರ್ಷಗಳಾಗಿದ್ದವು. ಅವರು ಕೊಂಕಣದಲ್ಲಿಯ ಧೋಪೇಶ್ವರ ಎಂಬ ಹಳ್ಳಿಯಲ್ಲಿ ಹುಟ್ಟಿದರು. ಅವರು ತೀರ ಚಿಕ್ಕವರಿರುವಾಗಲೇ ಅವರ ತಂದೆ ತೀರಿಕೊಂಡರು, ಆಗ ಅವರ ತಾಯಿ, ತಮ್ಮ ಎರಡೂ ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಕುಂದಗೋಳದಲ್ಲಿ 'ತಮ್ಮ ತಂದೆಯವರಾದ ದಾಮೋದರಪಂತ ಟೇ೦ಬೆಯವರ ಮನೆಯಲ್ಲಿ ಬಂದು ನಿಂತರು, ಮುಂದೆ ೧೦ ವರುಷಗಳ ನಂತರ ರಾಧಾಬಾಯಿಯ ವಿವಾಹವು ಆಸೋಗೆ ಎಂಬಲ್ಲಿ ಲಕ್ಷ್ಮಣರಾಯರೊಡನೆ ಆಯಿತು. ಆವರು ಮದುವೆಯಾಗಿ ಲಕ್ಷ್ಮಣರಾಯರೊಡನೆ ೪೨ ವರ್ಷ ಸಂಸಾರ ಮಾಡಿದರು, ಅವರು ತಮ್ಮ ಪತಿಯ ವೈಭವದ ಪಾಲುಗಾರರಾಗಿ ಬಾಳಿದರು. ಅವರು ದೊಡ್ಡ ಕಾರಖಾನೆದಾರರ ಹೆಂಡತಿಯಾದಮೇಲೆ ಅವರಿಗೆ ಯಾವುದರ ಕೊರತೆಯೆನಿಸಬೇಕು? ಆಭರಣ, ಬಟ್ಟೆ-ಬರೆ, ಆಳು-ಹೋಳು, ಎದ್ದರೆ-ನಿಂತರೆ ಮೋಟಾರ-- ಎಲ್ಲ ತರದ ವೈಭವವು ಅವರಿಗೆ ದೊರೆಯಿತು. ಆದರೆ ಅವರಿಗೆ