೧೬» ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು (೨ಜಿ: ಮಹಾರಾಷ್ಟ್ರದಲ್ಲಿ ಅಥವಾ ಭಾರತದ ಔದ್ಯೋಗಿಕ ಕ್ಷೇತ್ರದಲ್ಲಿ ನಾಮದಾರ ಲಕ್ಷ್ಮಣರಾನ ಕಿರ್ಲೋಸ್ಕರ ಅವರು ಯಾವ ಕಾರ್ಯಗಳನ್ನು ಮಾಡಿದರೋ ಯಾನ ಯಶಸ್ಸನ್ನು ಅಥವಾ ಲೌಕಿಕವನ್ನು ದೊರಕಿಸಿದರೋ ಅದರಲ್ಲಿ ಅರ್ಧಕ್ಕಿಂತಲೂ ಅಧಿಕವಾಗಿ ಆ ಶ್ರೇಯಸ್ಸು, || ರಾಧಾಬಾಯಿಯವ ರಿಗೇ ನ್ಯಾಯವಾಗಿ ಸಲ್ಲತಕ್ಕದ್ದು. ಯಾಕಂದರೆ ಕಾರ್ಯಕ್ರಮ ಪುರುಷರಿಗೆ ಬೇಕಾಗುವಂಥ ಕೌಟುಂಬಿಕ ಶಾಂತಿ ಮತ್ತು ಅವರ ಕಾರ್ಯದಲ್ಲಿ ಪ್ರತಿ ಕ್ಷಣಕ್ಕೆ ಉತ್ಸಾಹಪೂರ್ವಕವಾದ ನೆರವು ಹಾಗೂ ಹುರುಪನ್ನು ನಾ|| ರಾಧಾಬಾಯಿಯ ವರಂತಹ ಗೃಹಣಿಯರಿಗೆ ಮಾತ್ರ ಕೊಡಲು ಸಾಧ್ಯ.” (ಆದುದರಿಂದ ನೌ! ರಾಧಾಬಾಯಿಯ ಸ್ಮಾರಕವು ಒಂದರ್ಥದಿಂದ ಕೌಟುಂಬಿಕ ಸಮಾರಂಭವಾಗಿದ್ದರೂ ಅವರು ಆರ್ಯ ಸ್ತ್ರೀಯರ ಮುಂದೆ ಇರಿ ಒದ ಗೃಹಿಣೀ ಸದದ ಆವರ್ಶವು, ಸರ್ವ ಭಗಿನಿಯರಿಗೆ ಅನುಕರಣೀಯವೆನಿಸು ವರು, ಮತ್ತು ಅದರಿಂದ ಈ ಪ್ರಸಂಗವು ಸಾರ್ವಜನಿಕ ದೃಷ್ಟಿಯಿಂದಲೂ ಅರ್ಜಿ ನಾಗಿದೆ." “ನಾನುದಾರ ಕಿರ್ಲೋಸ್ಕರರೇ , ಹಿಂದಿನ ನೆನಪಿನಿಂದ ತಮ್ಮ ಮನಸ್ಸು ಈ ಹೊತ್ತಿಗೆ ಶೋಕಾಕುಲವಾಗಿರಲಿಕ್ಕೆ ಸಾಕು ಎಂಬುದನ್ನು ನಾವು ಬಲ್ಲೆವು. ಈ ರಾಜನೂ ಸಹ ನಿಮ್ಮ ಈ ದುಃಖದಲ್ಲಿ ಸಮಭಾಗಿಯಾಗಿದ್ದಾನೆ - ಎಂಬು ನನ್ನ ಅಕ್ಷದಲ್ಲಿ ತಂದುಕೊಂಡರೆ ಸಾಕು, ನೀವು ನಿಮ್ಮ ಶೋಕಾವೇಗ ನನ್ನ ತಡೆಹಿಡಿಯಿರಿ. ಈ ಪ್ರಸಂಗದಲ್ಲಿ ನನ್ನ ಬಾಯಿಂದ ಹೆಚ್ಚಿಗೆ ಶಬ್ದಗಳು ಹೊರಡಲಾರವು. ಅದಕ್ಕಾಗಿ ಸರ್ವರೂ ಕ್ಷಮಿಸಬೇಕಾಗಿ ವಿನಂತಿ.” ಅಕ್ಷಣರಾಯರಿಗೆ ಈಗ ೬೪ ವರುಷಗಳಾಗಿ ಹೋಗಿದ್ದರೂ ಅವರ ಕರ್ತವ್ಯ ದಕ್ಷತೆಯ ದೊಡ್ಡ ಉತ್ಸಾಹವನ್ನು ನೋಡಿದರೆ, ಅವರಿಗೆ ಇನ್ನೊಂದು ವಯನ್ನು ಆಗಿರಬಹುದೆಂಬ ಕಲ್ಪನೆಯು ಯಾರಿಗೂ ಬರಲಾರದು. ಆದರೂ ಗ ಮಾತ್ರ ಅವರ ಮುಖಲಕ್ಷಣಗಳಲ್ಲಿ ಒಮ್ಮೆಲೇ ಕಳೆಯು ಬದಲಾಯಿತು. ರಾಧಾಬಾಯಿಯ ನಿಧನದ ನಂತರ, ಅವರು ೪-೫ ದಿನಗಳ ಮೇಲೆ ಕಾರಖಾನೆಗೆ ಬಂದು ಎಂದಿನಂತೆ ಕಾರ್ಯಾಸಕರಾದುದೇನೋ ನಿಜ, ಆದರೆ ಅವರು ಈ ಹೊತ್ತಿನಿಂದ ಹೆಚ್ಚು ಗಂಭೀರರಾಗಿ ಕಾಣಿಸತೊಡಗಿದರು, ಮತ್ತು ಅವರ ವೃತ್ತಿಯಲ್ಲಿ ಕೊನೆಯವರೆಗೂ ಯಾವ ಬದಲಾವಣೆಯೂ ಕಾಣಬರಲಿಲ್ಲ."
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧೪
ಗೋಚರ