c ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಕೆಂದು ಸೂಚಿಸಿದರು. ಅವರ ಸೂಚನೆಯನ್ನು ಕುರಿತು ವಿಚಾರ-ವಿನಿಮಯ ನಡೆದನಂತರ, ಈ ಕೆಲಸಕ್ಕೆ ತರುಣ ಇಂಜಿನಿಯರರಾದ ಶ್ರೀ ಪಾದ್ರಿಯವರನ್ನು ನಿಯಮಿಸಲಾಯಿತು, ಅವರು ಮುಂಬಯಿ, ಬೆಂಗಳೂರ, ಸಾಂಗಲಿ ಮೊದ ಲಾದ ಪಟ್ಟಣಗಳಿಗೆ ಹೋಗಿ, ಅಲ್ಲಿಯ ಗಿರಣಿಗಳ ಚಾಲಕರೊಡನೆ ವಿಚಾರ ವಿನಿಮಯ ಮಾಡಿ, ಎಲ್ಲ ಕಡೆಗಳಲ್ಲಿಯೂ ಒಪ್ಪಿತವಾಗುವಂಥ ಮಗ್ಗದ ಮಾದರಿ ಯಾವುದು ? ಮತ್ತು ಅದರಲ್ಲಿ ಯಾವ ಸುಧಾರಣೆಯನ್ನು ಮಾಡಿದರೆ ಒಳ್ಳೆಯ ದಾಗುವದು ಎಂಬುದನ್ನು ತಿಳಿದುಕೊಂಡು ಶ್ರೀ ಪಾಧ್ಯೆಯವರು ಮರುಳಿ ಬಂದಮೇಲೆ, ಈ ಮಗ್ಗಗಳನ್ನು ಸಿದ್ಧಪಡಿಸುವ ಕೆಲಸವನ್ನು ಕೈಯಲ್ಲಿ ತೆಗೆದು ಕೊಳ್ಳಲಾಯಿತು. ೩೬ ಇಂಚಿನಿಂದ ೬೦ ಇಂಚು ಅಗಲವಾದ ಮಗ್ಗಗಳು ತಯಾರಾದ ನಂತರ, ಅವುಗಳು ಸಮಾಧಾನಕರವಾಗಿ ಕೆಲಸವನ್ನು ಕೊಡಬಲ್ಲವೆಂಬುದನ್ನು ಪ್ರಮಾಣಿಸಿ ನೋಡುವದಕ್ಕಾಗಿಯೂ ಮತ್ತು ಭಾವೀ ಗ್ರಾಹಕರಿಗೆ ಅದರ ಕಾರ್ಯವನ್ನು ಪ್ರತ್ಯಕ್ಷ ಕಣ್ಣಾರೆ ನೋಡಲು ಸಿಗಲೆಂದೂ ಕಿರ್ಲೋಸ್ಕರ ವಾಡಿಯಲ್ಲಿಯೇ “ರಾಧಾ ವೀನ್ಸಿಂಗ ಮಿಲ್” ಎಂಬ ಹೆಸರಿನ ಚಿಕ್ಕ ಕಾರಖಾನೆ ಯೊಂದನ್ನು ತೆರೆಯಲಾಯಿತು. ಈ ಉಪಕ್ರಮವು ಉತ್ಸಾಹವರ್ಧಕವೆಂದು ಕಂಡುಬಂದುದರಿಂದ (ಅಂಡರ ಸಿಕ್' ಮಾದರಿಯ ಮಗ್ಗ ವನ್ನೂ ಅದರಂತೆಯೇ ೨ ಮತ್ತು ೪ ಉಂಕಿಯ “ಡ್ರಾಪ್ ಬಾಕ್ಸಿಸ್” ಮಾಡುವ ಕೆಲಸವನ್ನೂ ಕೈಕೊಳ್ಳಲಾಯಿತು. (ಲೂಮ್ ಡಿಪಾರ್ಟಮೆಂಟ್” ಎಂಬುದೊಂದು ಹೊಸ ಖಾತೆಯನ್ನೇ ಕಾರ ಖಾನೆಗೆ ಜೋಡಿಸಲಾಯಿತು ಈ ಖಾತೆಯನ್ನು ಆರಂಭಿಸಿದ ಮೇಲೆ ಕಿರ್ಲೋಸ್ಕರ ಮಗ್ಗಗಳ ಮಾರಾಟವು ೧೫೦೦ ವರೆಗೆ ಏರಿತು, ಅದರ ಬೆಳವಣಿ ಗೆಯೂ ಕೂಡಲೇ ಆಗುವದೆಂದು ಕಂಡುಬಂದಿತು ಆಗ ರಾಯರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿ ಎಷ್ಟು ಎಂಬುದನ್ನು ವಿಚಾರ ಮಾಡಿ ಮಂದತೆಯೊ ಡನೆ ಹೋರಾಡಲೆಂದು ಪ್ರಾರಂಭಿಸಿದ ಮಗ್ಗಗಳನ್ನು ಮುಗ್ಗಟ್ಟು ಮುಗಿದೊಡ ನೆಯೇ ನಿಲ್ಲಿಸಿ, ವಿವಿಕ್ಸಿತ ಮಾಲಿನ ತಯಾರಿಕೆಯ ಕಡೆಗೆ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿದರು. ಇಲೆಕ್ಟಿಕ್ ಮೋಟಾರಗಳೇ ಈ ವಿವಿಕ್ಸಿತ ಮಾಲುಗಳು, ಇವುಗಳ ಸಿದ್ಧತೆಯ ಕಥೆಯೂ ಬಹಳ ಮನೋರಂಜಕ ಸಂಗತಿಯಾಗಿದೆ, ಈ ಮೊದಲು
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧೬
ಗೋಚರ