ಕುಂತ್ರಯೋಗಿ ಕಿರ್ತಕ್ಕರ ಲಕ್ಷಣd ಚುರು ಆದರೆ ಕಿರ್ಲೋಸ್ಕರ ಕಾರಖಾನೆಯಲ್ಲಿಯೇ ಈ ಮಾಲನ್ನು ಸಿದ್ದ ಮಾಡುವದ 5ಂದ ಪಾರತಂತ್ರವು ತಪ್ಪಿ ಪರದೇಶಕ್ಕೆ ಹೊಗುವ ಅಪಾರ ಹಣವು ಆಳಿ ತಾಯವಾಗಿ ಕಾರಖಾನೆಯ ಒಂದು ಹೆಜ್ಜೆಯು ಮುಂದೆ ಬಿದ್ದಂತಾಗುತ್ತಿತ್ತು, ಆದರೂ ಈ ಯೋಜನೆಯು ತ್ವರಿತಗತಿಯಿಂದ ಸಾಗಲಿಲ್ಲ. ಯಾಕಂದರೆ, ಈ ಸುಮಾರಿಗೆ ಯುರೋಪದಲ್ಲಿ ಎರಡನೆಯ ಮಹಾ ಯುದ್ದವು ಮೊಳಕು, ಇಡೀ ಜಗತ್ತಿನ ಶಾಂತಿ, ಸುವ್ಯವಸ್ಥೆಗಳು ಕದಡಿದವು. ದೇಶ ದೇಶಗಳ ನಡು ವಿನ ಸಂಪರ್ಕವು ಕತ್ತರಿಸಿತು. ವಿಲಾಯತಿಯಿಂದ ಹೊಸ ಯಂತ್ರಗಳು ದೊರಕುವದು ಕಠಿಣವಾಯಿತು, ಅದರಿಂದ ಕಿರ್ಲೋಸ್ಕರವಾಡಿಯಲ್ಲಿಯೇ ಇಲೆಕ್ನಿಕ್ ಮೋಟಾರಿನ ಖಾತೆಯನ್ನು ಆರಂಭಿಸಲು ೧೯೪೦ ರ ವರೆಗೆ ದಾರಿ ಯನ್ನು ಕಾಯಲೇಬೇಕಾಯಿತು. ಇದೇ ವರುಷ ರವೀಂದ್ರನು ಅಮೇರಿಕೆ ಯಿಂದ ಮರುಳಿದನು. ಅವನ ನೇತೃತ್ವದಲ್ಲಿ ೧೯೪೮ ರ ವರೆಗೆ ಈ ಖಾತೆಯು ಕಿರ್ಲೋಸ್ಕರವಾಡಿಯಲ್ಲಿಯೇ ಬೆಳೆಯಿತು. ಅದಕ್ಕೆ ಒಂದು ಸ್ವತಂತ್ರ ಕಾರ ಖಾನೆಯ ಸ್ವರೂಪ ಕೊಡುವ ನಿಶ್ಚಯವನ್ನು ಮಾಡಿ “ಕಿರ್ಲೋಸ್ಕರ ಇಲೆ. ಕಿಕ್ ಕಂಪನಿ ಲಿಮಿಟೆಡ್” ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ೧೯೪೮ ರಲ್ಲಿ ಪಿಸಿದರು, ಇಂದು ಅದರ ವಿಶಾಲ ಸ್ವರೂಪವನ್ನು ನೋಡಿದರೆ, ಅದು ೧೦ ವರ್ಷಗಳಲ್ಲಿ ಎಷ್ಟು ಬೆಳೆದಿದೆ ಎಂಬುದರ ಕಲ್ಪನೆ ಬರುವದು. ಈ ಎಲ್ಲ ಪ್ರಯತ್ನಗಳಲ್ಲಿ ಲಕ್ಷ್ಮಣರಾಯರು ಸೂಕ್ಷ್ಮವಾಗಿ ಶಿಕ್ಷೆ ವನ್ನು ಹಾಕಬೇಕಾಯಿತು, ಅವರ ಸಹಾಯಕರೆಲ್ಲರೂ ತಮ್ಮ ತಮ್ಮ ಹೊಣೆ ಗಾರಿಕೆಯನ್ನು ನಿರ್ವಹಿಸುವದರಲ್ಲಿ ತರಬೇತಿ ಹೊಂದಿದವರಾಗಿದ್ದರು. ಆದರೂ ಪ್ರತಿಯೊಂದು ಸಣ್ಣ-ಪುಟ್ಟ ಕೆಲಸವೂ ಕೂಡ ಸರಿಯಾಗಿ ಆಯಿತೋ ಇಲ್ಲವೋ ಎಂಬುದನ್ನು ನಿರೀಕ್ಷಿಸುವದು ಲಕ್ಷಣರಾಯರ ಸ್ವಭಾವವೇ ಆಗಿತ್ತು, ಅವ ೨ಗೆ ಕಾರಖಾನೆಯ ಕೆಲಸವನ್ನೇನೂ ಮಾಡಬೇಕಾಗಿರಲಿಲ್ಲ. ಪ್ರತ್ಯಕ್ಷ ಕಾರ ಖಾನೆಯ ಉತ್ಪಾದನಕ್ಕೆ ಸಂಬಂಧವಿಲ್ಲದಿದ್ದರೂ ತಮ್ಮ ಇಡೀ ಉದ್ಯೋಗದ ಮೇಲೆ, ವಸಹಾತಿನ ಮೇಲೆ, ದೇಶದ ದೃಷ್ಟಿಯಿಂದ ಮಹತ್ವದ ಪರಿಣಾಮ ವನ್ನುಂಟು ಮಾಡುವಂತಹ ಪ್ರಸಂಗಗಳು ಬಂದು, ಅದರಲ್ಲಿ ಲಕ್ಷ್ಮಣರಾಯರ ಯಾಂತ್ರಿಕ ತಜ್ಞತೆಗಿಂತ ಉಳಿದ ಗುಣಗಳ ಪರೀಕ್ಷೆಯೇ ಆಗುತ್ತಿತ್ತು. ಆದರೆ ಅವರು ಇಂತಹ ಪ್ರಸಂಗದಲ್ಲಿಯೂ ಪಾರಾಗುತ್ತಿದ್ದರು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧೮
ಗೋಚರ