ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು | 013 ಯಲ್ಲಿ ಗವರ್ನರರ ಭಟ್ಟಿಯು ಸ್ವಾಗತಾರ್ಹವೂ ಶ್ರೇಯಸ್ಕರವೂ ಆದೀತೇ ? , ಇತ್ತ ಗಾಂಧಿಯವರನ್ನು ಸರಕಾರವು ಸೆರೆಮನೆಯಲ್ಲಿ ಹಾಕಿದ್ದರಿಂದಂತೂ ಅದರ ಪ್ರತಿನಿಧಿಯನ್ನು ಸ್ವಾಗತಿಸಲು ಕಾರಖಾನೆಯು ಮುಂದೆ ಬರುವದೆಂದರೆ, ಎಷ್ಟೋ ಜನರಿಗೆ ಅದು ಅನುಚಿತವೆಂದು ಕಾಣಿಸುವ ಸಂಭವವಿತ್ತು, ಈ ಎಲ್ಲ ವಿಚಾರಗಳನ್ನು ಬದಿಗಿರಿಸಿ, ಗವರ್ನರರಿಗೆ 'ಮಹಾಸ್ವಾಮಿಗಳೇ ಬರ ಬೇಕು' ಎಂದು ತಿಳಿಸಿದರೆ, ಅವರು ಬಂದ ಕಾಲಕ್ಕೆ ತಲೆತಿರುಕನೊಬ್ಬನು ಈ ಸಮಾರಂಭಕ್ಕೆ ನ್ಯೂನ್ಯತೆಯುಂಟಾಗುವ ಪ್ರಸಂಗ ತಂದೊಡ್ಡಿದರೆ ಹೇಗೆ ಮಾಡ ಬೇಕು ! ಭಿಕ್ಷೆ ಬೇಡ ನಾಯಿಯನ್ನು ಕರೆದುಕೋ ಎಂಬಂತಾಗುವದೋ ಏನೋ ? ಆದರೆ ಪತ್ರಕ್ಕೆ ಉತ್ತರವನ್ನು ಏನೆಂದು ಕಳಿಸಬೇಕು ? ಮಾರ್ಕಾಂಡೇ ಯನಿಗೆ ಸಂಕಟ ಬಂದರೆ ಶಿವನ ಸಿಂಡಿಕೆಯನ್ನು ಅಪ್ಪಿಕೊಂಡಂತೆ, ಕಿರ್ಲೋಸ್ಕರ ವಾಡಿಗೆ ಚಿಂತೆ ಆವರಿಸಿತೆಂದರೆ ಲಕ್ಷ್ಮಣರಾಯರು ರಾಜೇಸಾಹೇಬರ ಸಹಾಯ ಕ್ಯಾಗಿ ಔಂಧಕ್ಕೆ ಹೊರಟರೇ.
- ಅವರು ರಾಜೇಸಾಹೇಬರಿಗೆ ಪರಿಸ್ಥಿತಿಯನ್ನು ತಿಳಿಸಿ ಹೇಳಿ ಅದನ್ನು ಸ್ಥಗಿತಗೊಳಿಸುವದಕ್ಕಾಗಿ ಯಾವ ಉಪಾಯವನ್ನು ಕೈಕೊಳ್ಳಬೇಕು ? ಎಂಬು ದರ ಬಗ್ಗೆ ಅವರೊಡನೆ ವಿಚಾರ-ವಿನಿಮಯ ಮಾಡಿದರು. ರಾಜೇಸಾಹೇಬ ರಿಗೆ ಲಕ್ಷಣರಾಯರ ಅಭಿಪ್ರಾಯವು ಯೋಗ್ಯವೆನಿಸಿದರೂ ಇಂಥ ಸೂಕ್ಷ ನಿಷಯದಲ್ಲಿ ಅವರು ಯಾವ ಸಲಹೆ ಕೊಡಬಲ್ಲರು ?
ಗವರ್ನರರು ಬರುವ ವಿಚಾರ ಮಾಡಿರದಿದ್ದರೆ, ಯಾರೂ ಅವರಿಗೆ ಅಮಂತ್ರಿಸಿ ಆಗ್ರಹಪಡಿಸುತ್ತಿರಲಿಲ್ಲ, ಆದರೆ ಅವರಾಗಿಯೇ ಸ್ವತಃ ಬರುತ್ತೇನೆ ಎಂದು ತಿಳಿಸಿದಾಗ ಅವರಿಗೆ ಬರಬೇಡಿರೆಂದು ಹೇಳುವದು ಹೇಗೆ ? ಹಾಗೆ ಹೇಳುವದೆಂದರೆ ಬ್ರಿಟಿಶ್ ಸಾಮ್ರಾಜ್ಯದ ಅಪಮಾನ ಮಾಡಿದಂತಾಗುವದು. ಸರಕಾರವು ಅದನ್ನು ಹೇಗೆ ಸಹಿಸೀತು ? ರಾಜೇಸಾಹೇಬರು' “ನಾನಾದರೂ ನಿಮಗೆ ಏನು ಹೇಳಲಿ. ಆದರೆ ಇಬ್ಬರಿಗೂ ಕಾಯದೆ ಸಲಹೆಗಾರರಾದ ರಾ. ಬ, ಕಾಳೆಯವರು ಏನಾದರೂ ಮಾರ್ಗವನ್ನು ಸೂಚಿಸುವರೋ ಹೇಗೆ ? ಕೇಳಿ ನೋಡಿರಿ” ಎಂದರು. ಕಿರ್ಲೋಸ್ಕರವಾಡಿಯ ಮೋಟಾರು ಸಾತಾರೆಯ ದಾರಿ ಹಿಡಿಯಿತು. ಲಕ್ಷಣರಾಯರು ಆ ರಾತ್ರಿ' ರಾ. ಬಿ. ಕಾಳೆಯವರ ಮುಂದೆ ಈ ಪ್ರಶ್ನೆಯಿ'