G13 ಒಳಸುಬಳ್ಳಿ ದ್ವಿಟ್ಟರು. ಅವರಿಗೂ ಸಹ ನಿರ್ಣಾಯಕ ಮತವನ್ನು ಕೊಡುವದಾಗಲಿಲ್ಲ. ಇಶ್ನ ಬಾವಿ, ಅತ್ತ ಕೆರೆ, ಇದರಲ್ಲಿ ಮಾರ್ಗವು ಹೇಗೆ ಸಿಗಬೇಕು. ಎರಡನೆಯ ದಿವಸ ಕಾಳೆಯವರು ಮತ್ತು ರಾಯರೂ ಕೂಡಿ ಔಂಧಕ್ಕೆ ಬಂದರು, ರಾಜೇಸಾಹೇಬರೊಡನೆ ಚರ್ಚಿಸಿ, ಕೊನೆಗೆ ಪೋಲಿಟಿಕಲ್ ಏಜೆಂಟ ಸಾಹೇಬರ ವಿಚಾರದಂತೆ ಹೆಜ್ಜೆ ಹಾಕುವದು ಸುರಕ್ಷಿತವೂ ಯೋಗ್ಯವೂ ಎಂದು ಅವರು ನಿರ್ಣಯಿಸಿದರು. ರೆಸಿಡೆಂಟ ಅಂದರೆ ಕಲೆಕ್ಟರಸಾಹೇಬರು. ಪುನಃ ಸಾತಾರೆಗೆ ಆಗಮಿಸಿದರು, ಕಲೆಕ್ಟರರು (ನಿಮ್ಮ ಇಚ್ಛೆಯಿಲ್ಲ ದಿದ್ದರೆ, ಗವರ್ನರಸಾಹೇಬರು ತಮ್ಮ ಹಂಚಿಕೆಯನ್ನು ನಿಲ್ಲಿಸಬಹುದು, ಅವ ರಾದರೂ ನಿಮ್ಮನ್ನು ದುರ್ಘಟ ಪರಿಸ್ಥಿತಿಗೆ ನೂಕಬೇಕೆಂದು ಯಾಕೆ ಇಚ್ಛಿಸಿ ಯಾರು ? ಈ ತೆರದ ಆಶೆಯುಳ್ಳ ಒಂದು ಪತ್ರವನ್ನು ಆವರಿಗೆ ಬರೆದುಬಿಟ್ಟ ರಾಯಿತು.” ಎಂದು ಹೇಳಿದರು, ಲಕ್ಷ್ಮಣರಾಯರು ಕಲೆಕ್ಟರರ ಸೂಚನೆ ಯನ್ನು ರಾಜೇಸಾಹೇಬರ ಕಿವಿಯ ಮೇಲೆ ಹಾಕಿದನಂತರ ಆ ಪ್ರಕಾರ ಪತ್ರ ವನ್ನು ಬರೆದು ಕಳಿಸಲಾಯಿತು, ಅದರ ಪರಿಣಾಮವೇನಾಯಿತು ? ಕಲೆಕ್ಟರರ ಕೈಗೆ ಕೊಳ್ಳಿ ಕೊಡಲು ಒಂದು ಕೋಲನ್ನೇ ಕೊಟ್ಟಂತಾಯಿತು. ಈ ಪತ್ರ ವೆಂದರೆ, ಒಂದು ತರಹದ ರಾಜದ್ರೋಹವೇ ಎಂದು ಅವನು ಅದನ್ನು ಟೀಕಿಸಿ ದ್ದನು. ಅಷ್ಟಕ್ಕಾಗಿ ಮೂರು ಸಲ ಸಿಮ್ಯಾಕ್ಕೆ ಎಡತಾಕಿ ರಾಜೇಸಾಹೇಬರು ಪ್ಲಾಯಿಸ್‌ರಾಯರವರ ಮನಸ್ಸಿನಲ್ಲಿಯ ಕಿಲ್ಮಷವನ್ನು ತೆಗೆದುಹಾಕಬೇಕಾ ಯಿತು. ರಾವಬಹಾದ್ದೂರರು ಮಾತ್ರ ಮಂತ್ರಿಯಾಗುವ ಯೋಗವನ್ನು ಗಳಿಸಿ ಕೊಂಡರು, ಗವರ್ನರರ ಕಿರ್ಲೋಸ್ಕರವಾಡಿಯ ಭೆಟ್ಟಿಯು ಸ್ಥಗಿತ ವಾಯಿತು. ಈ ಸಮ್ಮಂಧವಾಗಿ ಒಂದು ಮಾತನ್ನು ಲಕ್ಷದಲ್ಲಿರಿಸಿಕೊಳ್ಳಬೇಕಾಗಿದೆ. ಅದೆಂದರೆ, ಕಾರಖಾನೆಯ ಕಡೆಯಿಂದ ಈ ರೀತಿಯಾಗಿ ಸರಕಾರದ ಅಪಮಾನ ವಾದರೂ ಸರಕಾರವು ಮುಂದೆ ಯಾವದೇ ರೀತಿಯಿಂದಲೂ ಕಾರಖಾನೆಗೆ ತೊಂದರೆ ಕೊಡಲಿಲ್ಲ. ಮತ್ತು ಸೇಡು ತೀರಿಸಿಕೊಳ್ಳುವ ವೃತ್ತಿಯನ್ನು ತಳೆಯ ಲಿಲ್ಲ. ಆದುದರಿಂದಲೇ ಈ ವೃತ್ತಿಯುಳ್ಳ ಬ್ರಿಟಿಶ್ ಸರಕಾರವು ಭಾರತದ ಮೇಲೆ ಎಷ್ಟೋ ವರುಷಗಳಿಂದ ರಾಜ್ಯವನ್ನು ಮಾಡುತ್ತ ಬಂದಿತ್ತು. ಸಾತ್ತಾರೆಯ ಕಲೆಕ್ಟರ ಮಿ, ಮಾಯಸೆಯವರ ಪ್ರಕರಣವು ಇದರ ವಿರುದ್ಧ ಸಾಗರ, ಅವನಿಗೆ ಕಿರ್ಲೋಸ್ಕರಕಾರಖಾನೆಯ ಮೇಲೆ ಬಹಳ ಪ್ರೀತಿ ಈ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೨೧
ಗೋಚರ