ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ೧೭# ಆಟಗಾರರೆಂದು ಕಿರ್ಲೋಸ್ಕರವಾಡಿಯ ಹೆಸರನ್ನು ಮಹಾರಾರ್ಷ್ಟದಲ್ಲಷ್ಟೆ ಅಲ್ಲದೆ ಹೊರಗೂ ಮೆರೆಯಿಸಿದರು. ಲಕ್ಷಣರಾಯರಿಗೆ ದಾನಶೂರರೆಂಬ ಪದವಿಯನ್ನು ಕೊಟ್ಟರೆ ಶೋಭಿಸ ಲಾರದು. ಯಾಕಂದರೆ, ಅವರು ಯಾವುದೇ ಸಂಸ್ಥೆಗಳಿಗೆ ಕಣ್ಣಲ್ಲಿ ತುಂಬು ವಂತೆ ದಾನ ಕೊಟ್ಟಿರುವದಿಲ್ಲ. ಅದು ಅವರಿಗೆ ಸಾಧಿಸಲಿಕ್ಕೂ ಬರುವಂತಿರ ಲಿಲ್ಲ. ಯಾಕಂದರೆ, ಇಂಜಿನಿಯರಿಂಗ ಉದ್ಯೋಗದಲ್ಲಿ ಕಷ್ಟ ಕಾರ್ಪಣ್ಯಗಳು ಬಹಳ; ಲಾಭಾಂಶ ಅಷ್ಟಕ್ಕಷ್ಟೇ ಅಲ್ಲದೆ, ಲಕ್ಷ್ಮಣರಾಯರು ತಾವಾಗಿಯೇ ತಮ್ಮ ವರಮಾನವನ್ನು ಬಹಳ ಕಡಿಮೆ ಇಟ್ಟುಕೊಂಡಿದ್ದರು. ೧೯೨೪ ರಿಂದ ೧೯೪೦ ರ ಇಳಿತರದ ವರುಷಗಳಲ್ಲಿ ಮ್ಯಾನೇಜಿಂಗಏಜೆಂಟ್ಸ್ ಎಂದು ಕಾರ ಖಾನೆಯ ಎಲ್ಲ ಹೊಣೆಗಾರಿಕೆಯು ಅವರ ಮೇಲಿದ್ದರೂ ಮ್ಯಾನೇಜಿಂಗ ಏಜೆಂಟ್ಸ್ ಕಮೀಶನ ಎಂದು ಅವರಿಗೆ ಯಾವುದೇ ತರಹದ ಪ್ರಾಪ್ತಿಯಾಗಲು ಶಕ್ಯವಾಗಲಿಲ್ಲ.
- ಅವರ ಉಗ್ರಸ್ವಭಾವದ ಮೂಲಕ ಅವರ ಹತ್ತಿರ ಏನನ್ನಾದರೂ ಬೇಡುವ ಎದೆಗಾರಿಕೆಯು ಯಾರಿಗೂ ಆಗುತ್ತಿರಲಿಲ್ಲ. ಯಾರಾದರೂ ಅವ ರನ್ನು ಕಾಣಬಯಸಿದರೆ, ಅವರ ಭೆಟ್ಟಿಯೇ ಆಗುವದು ಕಷ್ಟ, ಭೆಟ್ಟಿಯಾಯಿ ತೆಂದರೆ, ಕೆಲಸ ಮಾಡಿರಿ, ಅಂದರೆ ಹಣ ದೊರೆಯುವದು ಎಂದಿಷ್ಟೇ ಹೇಳಿ ಬಿಡುತ್ತಿದ್ದರು.
ಇದು ಹೇಗೆ ನಿಜವೋ ಹಾಗೆಯೇ ಅವರಿಗೆ ಹಣದ ಮೋಹವು ಎಂದಿಗೂ ಆಗಲಿಲ್ಲೆಂಬುದು ಅಷ್ಟೇ ನಿಜವಿದೆ. ಒಂದು ಒಳ್ಳೆ ಕೆಲಸಕ್ಕಾಗಿ ಅವರು ವೆಚ್ಚ ಮಾಡಲು ಎಂದೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದ್ದರಿಂದ ಅವರು ಅನೇಕರಿಗೆ ಶಿಕ್ಷಣಕ್ಕೂ ಹೊಸ ಕಾರಖಾನೆಗಳನ್ನು ತೆಗೆಯಲಿಕ್ಕೂ ಸಹಾಯ ಇಲ್ಲವೆ ಸಾಲವೆಂದು ಬಹಳ ಹಣ ಕೊಟ್ಟಿದ್ದಾರೆ. ಅದರಲ್ಲಿ ತಿರುಗಿ ಎಷ್ಟು ಹಣ ಬಂತೆಂದು ಅವರು ಎಂದೂ ಕೇಳಲಿಲ್ಲ. ಯಾಕಂದರೆ, ಇಂಥ ಕೊಡ ಕೊಳ್ಳುವ ನಿಮಿತ್ತವಾಗಿ ಕೋರ್ಟಿನ ಕಟ್ಟೆಯನ್ನು ಏರಕೂಡದೆಂದು ಅವರ ನಿಶ್ಚಯ, ಅದರಿಂದ ಯಾರಾದರೂ ಮುಳುಗಿಸಿದರೂ ಅವರು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. , ೧೯೪೩ ರ ಸಪ್ಟಂಬರ ೨೫ ನೇ ತಾರೀಖಿಗೆ ಕಿರ್ಲೋಸ್ಕರವಾಡಿಯ ಸ್ಟೇಶ ನ್ನಿನ ಮೇಲೆ ಪುಣೆಯಿಂದ ಬಂದ ಅತಿಥಿಗಳಿಬ್ಬರು ಇಳಿದರು, ಅವರಲ್ಲಿ ಒಬ್ಬರು