ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧! ಮಿcಚನಬ 'ಸಕಾಳದ ಸಂಪಾದಕರಾದ ಡಾ! ಪರಳೇಕರ, ಇನ್ನೊಬ್ಬರು ಮಹಾರಾಷ್ಟ್ರದ ಖ್ಯಾತನಾಮರಾದ ಧನ್ವಂತರೀ ಡಾ! ದಾದಾಸಾಹೇಬ ಭಡಕಮಕರರು. ಲಕ್ಷ್ಮಣರಾಯರ ಸಹಾಯಕರಿಗೂ, ಬಂದಂಥ ಈ ಅತಿಥಿಗಳಿಗೂ ಮೊದಲನೆಯ ಸಲ ಭೆಟ್ಟಿಯಾದಾಗ, ಅವರು ತಾವು ಕಿರ್ಲೋಸ್ಕರನಾಡಿಗೆ ಬರುವ ಉದ್ದೇಶವನ್ನು ಅವರ ಮುಂದೆ ಹೇಳಿದ್ದರು, ಆ ಹೊತ್ತಿಗೆ ಬಂಗಾಲ ವಲ್ಲಿ ಭಯಂಕರ ಬರಗಾಲ ತಾಂಡವವಾಡುತ್ತಿತ್ತು, ಆ ದುರ್ದೈವೀ ಆಪಗ್ ಗ್ರಹಸ್ತರಿಗೆ ನೆರವನ್ನು ದೊರಕಿಸಬೇಕೆಂದು ಸಕಾಳದ ಫಂಡನ್ನು ಎತ್ತುವ ಪರೋಪಕಾರದ ಕೆಲಸವನ್ನು ಅವರು ಕೈಕೊಂಡಿದ್ದರು. ಈ ಫಂಡಿಗೆ ನೆರ ನಾಗಬೇಕೆಂದು ಪರುಳೇಕರರು ಬಂದಿದ್ದರು, ಲಕ್ಷಣರಾಯರ ಮೇಲೆ ವರ್ಚಸ್ಸು ಬೀಳಬೇಕೆಂದು ಅವರು ದಾದಾಸಾಹೇಬರನ್ನು ತಮ್ಮ ಸಂಗಡ ಕರೆದುಕೊಂಡು ಬಂದಿದ್ದರು. ಯಾಕಂದರೆ, ದಾದಾಸಾಹೇಬರು ಪ್ರಸಿದ್ಧ ಡಾಕ್ಟರರೆಂದು ಅವರಿಗೆ ಎಲ್ಲ ಕಡೆಗೂ ಗೌರವಾದರಗಳು ದೊರೆಯುತ್ತಿದ್ದವು. ಮುತ್ತು ಕಿರ್ಲೋಸ್ಕರರಿಗೆ ಅವರು ಹತ್ತಿರಿನ ಸಂಬಂಧಿಕರೂ ಆಗಿದ್ದರು. ಆಗ ಸುಳೇಕರರು ತನ್ನು ನೆರವಿಗೆಂದು ಅವರನ್ನು ಕರಕೊಂಡು ಬಂದುದರಲ್ಲಿ ಒಂದು ಚಾಣಾಕ್ಷತನವೂ ಅಡಗಿತ್ತೆಂಬುದರಲ್ಲಿ ಸಂಶಯವೇ ಇರಲಿಲ್ಲ. - ಈ ದೊಡ್ಡ ಜನ ತಮ್ಮ ಮನೆಗೆ ಬಂದುದರ ಸಲುವಾಗಿ ಲಕ್ಷ್ಮಣರಾಯ ಲಗೆ ಬಕಳ ಆನಂದವಾಯಿತು, ಅವರ ಚಹಾ-ಪಾನವು ಮುಗಿದಮೇಲೆ ಸಕಾಳಕಾರರು ತಮ್ಮ ಆಗಮನದ ಉದ್ದೇಶವನ್ನು ಸಾವಕಾಶವಾಗಿ ಶ್ರುತ ಪಡಿಸಿದರು. ಬಂಗಾಲದಲ್ಲಿ ಬರಬಿದ್ದು, ಹಾಹಾಕಾರವೆದ್ದ ಕಲ್ಪನೆಯು ಸಾಧಾರಣವಾಗಿ ಎಲ್ಲರಿಗೂ ಗೊತ್ತಿತ್ತು, ಕಾರಣ ಸಕಾಳದ ಫಂಡಿಗೆ ಸಹಾಯ ನೀಡಬೇಕೋ ಬೇಡವೋ ಎಂಬ ಪ್ರಶ್ನೆಯೇ ಉಳಿದಿರಲಿಲ್ಲ. ಸುಮಾರಾಗಿ ಚಿಂಕಿಯನ್ನು ಎಷ್ಟು ೯ --ಕು ? ಎಂಬುದೇ ಲಕ್ಷಣರಾಯರಿಗೆ ಬಿದ್ದ ತೊಡಕು, ಅದಕ್ಕಾಗಿಯೇ ಅವರು ದಾದಾಸಾಹೇಬರ ಮಖದ ಕಡೆಗೆ ನೋಡಿ ಅವರೇನಾದರೂ ಸೂಚಿಸಬಹುದೋ ಎಂದು ದಾರಿ ನೋಡಿದರು, ಆಗ ದಾದಾಸಾಹೇಬರಿಗೆ ಒಂದು ಅಂಕಿಯನ್ನು ಹೇಳುವದೆಂದರೆ ಬಿಕ್ಕಟ್ಟಿನಿಸಿತು. ಆದಕಾರಣ ಅವರು ಗಲ್ಲಕ್ಕೆ ಕೈ ಹಚ್ಚಿಕೊಂಡು ನಗುತ್ತ ಸುಮ್ಮನೆ ಕುಳಿತು ಕೊಂಡರು.