ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧to ಮಿಂಚಿಸಬ ಯನ್ನು ಸರಕಾರವು ದಿಲ್ಲಿಯಲ್ಲಿ ಕರೆಯಿತು. ಅದಕ್ಕೆ ಶಂತನುರಾವ ಮತ್ತು ನಾನಾಸಾಹೇಬರು ಹೋಗಿದ್ದರು. ಕಿರ್ಲೋಸ್ಕರವಾಡಿಯಲ್ಲಿ ಯಾವ ಯಾವ ಯಂತ್ರಗಳನ್ನು ಮಾಡಲು ಬಂದೀತು ಎಂಬ ಸಂಗತಿಯನ್ನು ಅಧಿಕಾರಿಗಳಿಗೆ ತಿಳಿಸಲಾಯಿತು, ಸರಕಾರದ ಗಡಿಬಿಡಿ ಎಂದರೆ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಹೊರಟಂತೆಯಾಗಿತ್ತು. ಆದರೆ ಅದಕ್ಕೆ ಬೇರೆ ಮಾರ್ಗವೇ ಇರಲಿಲ್ಲ. ' ಅಧಿಕಾರಿಯು 'ಶೆಲ್ ಟರ್ನಿಂಗ ಲೇಥ್ ಇಲ್ಲದೆ ಕೆಲಸ ನಿಂತು ಬಿಟ್ಟಿದೆ. ನಾವು ಬ್ರಿಟಿಶ್ ಯುದ್ದ ಮಂತ್ರಿಗೆ ಈ ಯಂತ್ರವನ್ನು ಇಲ್ಲಿಯೇ ಮಾಡಿಸಿದರೆ ಆದೀತೇ ? ಎಂದು ವಿಚಾರಿಸಲಿದ್ದೇನೆ, ಆದರೆ ಅಲ್ಲಿಯವರೆಗೆ ಈ ಬಗ್ಗೆ ನಿಮಗೆ ಏನಾದರೂ ಮಾಡಲು ಬರುವಂತಿದ್ದರೆ ಮಾಡಿ ನೋಡಿರಿ, ನಿಮಗೆ ತೋರಿ ಸಲು ನಮ್ಮ ಹತ್ತರ ಯಂತ್ರದ ನಮೂನೆಯೇ ಇರುವದಿಲ್ಲ, ಕ್ಯಾಟಲಾಗ ದಲ್ಲಿರುವ ಚಿತ್ರ ಮಾತ್ರ ಇದೆ, ಅಷ್ಟೇ, ಬೇಕಾದರೆ ಇದನ್ನು ತೆಗೆದುಕೊಂಡು ಹೋಗಿರಿ” ಎಂದು ಹೇಳಿದನು. ಕಿರ್ಲೋಸ್ಕರವಾಡಿಗೆ ಮರಳಿದ ಮೇಲೆ ಶಂತನುರಾವ, ಶಂಭೂರಾವ, ಅನಂತರಾವ, ರಾಜಾರಾಮಪಂತ ಮತ್ತು ಇನ್ನಿತರ ಇಂಜನಿಯರರ ಮಂಡ ಳಿಯು ಈ ಉದ್ಯೋಗದಲ್ಲಿ ತೊಡಗಿತು. ಅವರು ರಾತ್ರಿಯನ್ನು ಹಗಲ ಸ್ನಾಗಿ ಮಾಡಿ ಕೆಲಸ ಮಾಡಿ ಮೂರೇ ತಿಂಗಳಲ್ಲಿ ಅದನ್ನು ಸಿದ್ದಪಡಿಸಿದರು. ಈ ಯಂತ್ರದ ರಚನೆಯಲ್ಲಿ ಪರಾಕಾಷ್ಟತೆಯ ಸೂಕ್ಷ್ಮತೆಯನ್ನು ಇರಿಸಬೇಕಾಗು ತದೆ. ಅದಕ್ಕೆ ಪ್ರೇಸ ಜಿನ್ ಮಶಿನ್ನ ಎಂದು ಹೆಸರಿದೆ. ಈ ಕೆಲಸವು ಇಷ್ಟು ಕಠಿಣವಿದ್ದು ದರಿಂದ ಇಂಗ್ಲಂಡ, ಅಮೇರಿಕೆ, ಜರ್ಮನಿಯಂಥ ದೇಶಗಳನ್ನು ಬಿಟ್ಟು ಈ ಯಂತ್ರಗಳು ಎಲ್ಲಿಯೂ ತಯಾರಿಸುತ್ತಿದ್ದಿಲ್ಲ, ಆದರೆ ಪ್ರಯತ್ನಿಸುವ ವರಿಗೆ ಈ ಜಗತ್ತಿನಲ್ಲಿ ಯಾವುದು ಅಶಕ್ಯವಿದೆ ? - “ಲೇಥ ಸಿದ್ಧವಾಗಿವೆ. ಪರೀಕ್ಷಿಸಲು ಪ್ರತಿನಿಧಿಯನ್ನು ಕಳಿಸಿರಿ.” ಎಂಬ ತಾರು ಕಿರ್ಲೋಸ್ಕರವಾಡಿಯಿಂದ ದಿಲ್ಲಿಯ ಅಧಿಕಾರಿಗಳಿಗೆ ಹೋಯಿತು. ಅದೇ ಹೊತ್ತಿಗೆ ಲಂಡನ್ನದಿಂದ ಯುದ್ಧ ಮಂತ್ರಿಯ ಪತ್ರವೂ ಬಂದಿತ್ತು. ಅವನು ಅದರಲ್ಲಿ ತಿಳಿಸಿದ್ದೇನೆಂದರೆ- “ಈ ಲೇಥ ಭಾರತದಲ್ಲಿ ತಯಾರಾದವು ಎಂದು ನಮಗೆನಿಸುವದಿಲ್ಲ, ಆದರೆ ಬೇರೆ ಉಪಾಯಗಳೇನಿದ್ದರೂ ಯತ್ನಿಸಿ ನೋಡಿರಿ” ಎಂದು ತಿಳಿಸಿದ್ದನು.