೯೨ ಮಿಂಚಿನಬಳ್ಳಿ ಯಿತು, ಅದಕ್ಕಾಗಿ ಭೂಮಿ, ನೀರು, ವಿದ್ಯುತ್‌ಶಕ್ತಿ ಮತ್ತು ಸಂಸ್ಥಾನದ ಸತಕಾರ ಈ ಮೊದಲಾದವುಗಳ ದೃಷ್ಟಿಯಿಂದ ಮೈಸೂರ ಸಂಸ್ಕಾನದೊಳಗಿನ ಹರಿಹರವು ಒಳ್ಳೆಯದೆಂದೆನಿಸಿ, ೧೯೪೧ರ ಎಪ್ರಿಲ್ ತಿಂಗಳಿನಲ್ಲಿ 'ಮೈ ಸೂರ - ಕಿರ್ಲೋಸ್ಕರ ಲಿಮಿಟೆಡ್” ಎಂಬ ಕಂಪನಿಯ , 25 ಲಕ್ಷ ಬಂಡವಲಿನಿಂದ ಹರಿ ರರದಲ್ಲಿ ಸ್ಥಾಪಿಸಲ್ಪಟ್ಟಿತು. ಕಿರ್ಲೋಸ್ಕರವಾಡಿಯ ಆರಂಭವು ಒಂದು ಪಡ ಭೂಮಿಯ ಮೇಲೆ ಆದಂತೆ ಹರಿಹರ ಕಾರಖಾನೆಯದು ಕೂಡ ಪಡಭೂಮಿಯ ಮೇಲೆಯೆ ಆಯಿತು, ಈ ಹೊಸ ಕಾರಖಾನೆಯ ಮುಖ್ಯ ಸೂತ್ರಗಳನ್ನು ಒಬ್ಬ ಹಳೆಯ ಅನುಭವಿಕ ಚಾಲಕರಾದ ಶ್ರೀ ಶಂಭೋರಾವ ಜಾಂಭೀಕರರ ಕಡೆಗೆ ಕೊಡ ಲಾಗಿತ್ತು, ಅವರಿಗೆ ತರುಣರೂ ಯಂತ್ರ ಕುಶಲರೂ ಆದ ರಾಜಾರಾವು ಸಂತರ ನೆರವು ದೊರೆಯಿತು. ಇನರಿಬ್ಬರ ಪ್ರಯತ್ನದ ಫಲವಾಗಿ ೧೦ ತಿಂಗಇಲ್ಲಿಯೇ ಕಾರಖಾನೆಯ ಕಟ್ಟಲ್ಪಟ್ಟು ಮೊದಲನೆಯ ಲೇಥ ಹೊರಬಿದ್ದಿತು. ಈ ಕಾರಖಾನೆಯ ಉದ್ಘಾಟನೆಯ ಮೈಸೂರು ಸಂಸ್ಥಾನದ ಆಗಿನ ದಿವಾಣರಾದ ಶ್ರೀ. ಎನ್. ಮಾಧವರಾವ ಅವರ ಹಸ್ತದಿಂದ ೯ನೇ ಫೆಬ್ರುವರಿ ೧೯೪೨ ರಂದು ಬಹು ವಿಜೃಂಭಣೆಯಿಂದ ಜರುಗಿತು, ಈ ಸಮಾರಂಭಕ್ಕಾಗಿ ಕಿರ್ಲೋಸ್ಕರ ಕಾರಖಾನೆಯ ೩೦೦ ಜನ ಕೆಲಸಗಾರರು ವಿಶೇಷ ಗಾಡಿಯಿಂದ ಹರಿಹರಕ್ಕೆ ತರಲ್ಪಟ್ಟರು. ಆ ಕಾರ್ಯಕ್ರಮವು ಸಮಾಪ್ತಗೊಂಡ ಮೇಲೆ ಅವರನ್ನು ಭದ್ರಾವತಿಯ ಕಾರಖಾನೆಯನ್ನು ತೋರಿಸಲು ಕರೆದೊಯ್ಯ ಲಾಯಿತು. ಪೌರಾಣಿಕ ಕಾಲದಲ್ಲಿ ಇಲ್ಲಿರುವ ತುಂಗಭದ್ರೆಯ ತೀರದಲ್ಲಿ ಹರಿ ಮತ್ತು ಹರರ ಭೆಟ್ಟಿಯು ಆಯಿತು, ಅದರಿಂದ ಇದು ಹರಿಹರ ಎಂಬ ಧಾರ್ಮಿಕ ಕ್ಷೇತ್ರವಾಯಿತೆಂಬ ಇದೆ. ಈ ಸ್ಥಳದಲ್ಲಿ ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಕಾರಖಾನೆಯು ಸಂಗಮವಾದ್ದರಿಂದ ಅದಕ್ಕೊಂದು ಔದ್ಯೋಗಿಕ ಕ್ಷೇತ್ರದ ಹೊಸ ಮಹತ್ವವು ಬಂದಿತು, ಹರಿಹರದೊಳಗಿನ ಕಾರಖಾನೆಯಲ್ಲಿ ಇಂದು ೧೪೦೦ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ. ಮಶಿನ್ ಟೂಲ್ ಮೂಡುವಂಥ ಭಾರತದೊಳಗಿನ ಖಾಸಗೀ ಕಾರಖಾನೆಗಳಲ್ಲಿ ಇದು ಅಗ್ರೇ ಸರವಾಗಿದೆ.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೪೧
ಗೋಚರ