೧ry ಮಿಂಚಿನಬಳ್ಳಿ ಅಲ್ಲಿಯ ವ್ಯಾಪಾರೀ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಅದರ ಪ್ರಸ್ಥವು ಗಣನೀಯವಾಗಿ ಬೆಳೆದಿತ್ತು. ಅದರ ಕಡೆಗೆ ಇಂಗ್ಲಂಡದೊಳಗಿನ ಅನೇಕ ಏಜೆನ್ಸಿಗಳು ಇದ್ದವು. ಈ ಕಂಪನಿಯೇ ಮದ್ರಾಸ ವಿಭಾಗದಲ್ಲಿ ಕಿರ್ಲೋಸ್ಕರ ಕಂಪನಿಯ ಮಾಲಿನ ಅಧಿಕೃತ ಹಂಚಿಗೆಗಾರವಾಗಿತ್ತು. ಅದು ಇಂಗ್ಲಂಡದೊಳಗಿನ ಕಾರಖಾನೆದಾರರಿಗೆ ಸೂಚಿಸಿದ್ದೇನೆಂದರೆಕಿರ್ಲೋಸ್ಕರ ಬ್ರದರ್ಸ ಲಿ, ಅವರು ಒಂದು ಅಮೇರಿಕನ್ ಕಾರಖಾನೆದಾರರ ಸಂಬಂಧವನ್ನು ಪ್ರಸ್ತಾಪಿಸಲು ಇಚ್ಚಿಸುತ್ತಿದ್ದಾರೆ. ಆ ಕಾರಣದಿಂದ ನೀನೇ ಮುಂದಾಗಿ ಬಂದು ಅವರೊಡನೆ ಸಹಕಾರವನ್ನೇಕೆ ನೀಡಬಾರದು ? ಸುದೈವ ದಿಂದ ಈ ಸೂಚನೆಯು ಆ ಕಾರಖಾನೆದಾರರಿಗೆ ಮಾನ್ಯವಾಗಿ, ಅವರು ಆ ಪ್ರಕಾರ ಕಿರ್ಲೋಸ್ಕರರಿಗೆ ಪತ್ರ ಬರೆದು ನಿಮ್ಮ ಪ್ರತಿನಿಧಿಯನ್ನು ಇಂಗ್ಲಂಡಕ್ಕೆ ಕಳಿಸಿಕೊಡಬೇಕೆಂದು ಆಮಂತ್ರಣವನ್ನೂ ಕೊಟ್ಟುಬಿಟ್ಟರು.
- ಆದರೆ ಅದು ೧೯೪೪ ನೇ ಇಸ್ವಿ, ಚಲೇಜಾವ' ಘೋಷಣೆಯ ಮೂಲಕ ದೇಶದಲ್ಲಿ ಬ್ರಿಟಿಶ್ ವಿರೋಧಿ ಚಳವಳಿಯು ಶಿಖರಕ್ಕೇರಿತ್ತು. ಈ ಹೊತ್ತಿಗೆ ಬ್ರಿಟಿಶ್ ಕಾರಖಾನೆದಾರರ ಸಹಕಾರವು ಯಾರಿಗೆ ರುಚಿಸಬೇಕು ? ಆದುದರಿಂದ ರಾಯರು ಈ ಬಗ್ಗೆ ರಾಜಕೀಯ ಹಾಗೂ ವ್ಯಾಪಾರೀ ಮುಖಂಡರ ಸಲಹೆ ಕೇಳಿದರು, ಅರ್ಥಾತ್ ಕೆಲವರು ಅನುಕೂಲ ಮತ್ತೆ ಕೆಲವರು ಪ್ರತಿಕೂಲ ಅಭಿಪ್ರಾಯವಿತ್ತರು. ಆದರೆ ಆ ಕಾಲದ ರಿಝರ್ವ ಬ್ಯಾಂಕಿನ ಗವರ್ನರರಾದ ಚಿಂತಾಮಣರಾವ ದೇಶಮುಖರು ಮಾತ್ರ ಚಾಲಕರ ವಿಚಾರಸರಣಿಗೆ ಸಂಪೂರ್ಣ ಬೆಂಬಲವಿತ್ತರು. ಆಗ ಲಕ್ಷಣರಾಯರು ಸಹ ಅದೇ ನಿರ್ಣಯ ವನ್ನು ತೆಗೆದುಕೊಂಡು, ಶಂತನುರಾವ ಮತ್ತು ನಾನಾಸಾಹೇಬ ಗುರ್ಜರ ಎಂಬ ತಮ್ಮ ಪ್ರತಿನಿಧಿಗಳನ್ನು ಇಂಗ್ಲಂಡಕ್ಕೆ ಕಳಿಸುವ ಆಲೋಚನೆಗೆ ಇಳಿದರು.
ಲಕ್ಷ್ಮಣರಾಯರು, ಶ್ರೀ ಶಂಭೂರಾವ, ಜಾಂಭೀಕರ, ಶಂಕರರಾವ, ಶಂತನುರಾವ, ಅನಂತರಾವ ಫಳನೀಕರ, ಮಂಗೇಶರಾವ ರೇಘಯವರನ್ನು ತಮ್ಮ ಹಸ್ತಕರೆಂದು ಆರಿಸಿದ್ದರು. ಕಾರಖಾನೆಯ ಪ್ರಗತಿಗೆ ಈ ಎಲ್ಲರಿಂದ ನೆರವೂ ಆಗುತ್ತಿತ್ತು. ೧೯೨೩ ರಲ್ಲಿ ಶ್ರೀ ನಾನಾಸಾಹೇಬ ಗುರ್ಜರೆಂಬವರ ಉತೃಷ್ಟ ನೆರವು ರಾಯರಿಗೆ ಬಂದೊದಗಿತು. ನಾನಾಸಾಹೇಬರು ಎಲ್. ಎಲ್, ಬಿ, ಆದನಂತರ ಕಾರಖಾನೆಗೆ ಬಂದು ಕೂಡಿದರು, ಇವರು ಆಫೀಸಿನ ವ್ಯವಸ್ಥೆಯನ್ನು ನೋಡಹತ್ತಿದರು, ಅವರ ಕುಶಾಗ್ರ ಬುದ್ದಿ, ತೀವ್ರ ಸ್ಮರಣಶಕ್ತಿ,