ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ry ಮಿಂಚಿನಬಳ್ಳಿ ಒಯ್ದು ಸಾತಾರೆಯಲ್ಲಿ ಊರಿದರೆಂದು, ಈ ಹಿಂದೆ ಹೇಳಿದ್ದೇವಷ್ಟೆ ! ಆ ಸಸಿಯು ಅಲ್ಲಿಯ ಹವೆಯು ಅದಕ್ಕೆ ಮಾನಿಸಿ, ಭರದಿಂದ ಬೆಳೆದು ಬೇರು ಬಿಟ್ಟಿತು. ಅದಕ್ಕೆ ಉದ್ಯೋಗಪತಿಗಳಾದ ಕೆ. ನಾಲಚಂದ ಹೀರಾಚಂದರ ನೆರವು ದೊರೆತು ಇಂದು ಮಹಾರಾಷ್ಟ್ರದಲ್ಲಿ “ಕೂಪರ ಇಂಜನಿಯರಿಂಗ ಲಿ.” ಎಂದು ಖ್ಯಾತಿ ಗೊಂಡಿದೆ. ನಾವು ಸ್ವಲ್ಪು ಚಿಕಿತ್ಸಕದೃಷ್ಟಿಯಿಂದ ನೋಡಿದರೆ ಮಹಾರಾಷ್ಟ್ರ ಹಾಗು ಕರ್ನಾಟಕದಲ್ಲಿ ಚಿಕ್ಕ ಹಾಗು ಮಧ್ಯಮ ತರಗತಿಯ ಅನೇಕ ಕಾರಖಾನೆಗಳಿಗೆ ಲಕ್ಷ್ಮಣರಾಯರು ನೆರವು ನೀಡಿದ ಕೃತಜ್ಞತೆಯ ಉದ್ಧಾರಗಳು ಕೇಳ ಬರುತ್ತಿವೆ. ಬೆಳಗಾವಿಯ ಜಕ್ಕ' ಕಾರಖಾನೆಯ ಶ್ರೀ ಬಾಬೂರಾವ ಪುಸಾಳಕರರ ಉದ್ಧಾರಗಳು: “ನನ್ನ ಮೋಟಾರ ಸರ್ಮ್ಪಿಸ ಇದ್ದುದರಿಂದ ಕೆರೋಸಿನದಿಂದ ನಡೆಯುವ ಕಾರ್ಬ್ಯುರೇಟರ ಮಾಡುವ ಇಚ್ಚೆ ನನಗಾಯಿತು, ಆದರೆ ಪ್ರಯೋಗ ಮಾಡಲು ಸಾಧನಗಳಲ್ಲಿ ? ಪಪ್ಪಾರವರು ಇದಕ್ಕೆ ಕಿರ್ಲೋಸ್ಕರ ವಾಡಿಯಲ್ಲಿ ಪೂರ್ಣ ನೆರವನ್ನಿತ್ತರು. ಅದರ ಬಗ್ಗೆ ನನ್ನಿಂದ ಏನೂ ತೆಗೆದು ಕೊಳ್ಳಲಿಲ್ಲ. ನಾನೀಗ ಸ್ವತಃ ಕಾರಖಾನೆದಾರನಿರುವದರಿಂದ ಲಕ್ಷಣರಾಯ ರಿಂದ ದೊರೆತ ಸಹಾಯ ಹಾಗು ಪ್ರೋತ್ಸಾಹಗಳ ಬೆಲೆ ಎಷ್ಟು ಅಮೌಲ್ಯ ವಾದುದೆಂಬುದನ್ನು ನಾನು ಬಲ್ಲೆ”. ಬೆಳಗಾಂವಿಯಿಂದ ಸಂಕೇಶ್ವರಕ್ಕೆ ನಡೆಯಿರಿ, ಅಲ್ಲಿ ನಿಮಗೆ 'ಭಾರತ ಮೆಟಲ್ ವರ್ಕ್ಸ' ಎಂದು ಫಲಕ ಕಾಣುವದು, ಅದರೊಳಗೆ ಇಣಿಕಿ ನೋಡಿದರೆ ಅಲ್ಲಿ ಐದು ಲೇಥಗಳು, ಎರಡು ಶೇಪಿಂಗಮಶಿನ್ಸ್, ಒಂದು ಡಿಲಿಂಗಮಶಿನ್ ಇತ್ಯಾದಿ ಯಂತ್ರಗಳು ವಿದ್ಯುತ್ತಿನ ಮೇಲಿಂದ ನಡೆಯುತ್ತಿದ್ದು ೨೦ ಮಂದಿ ಕೆಲಸಗಾರರು ಯಂತ್ರದ ಬೇರೆ ಬೇರೆ ಭಾಗಗಳನ್ನು ನಿರ್ಮಾಣ ಮಾಡುತ್ತಿರು ವದು ಕಾಣುವದು, ಈ ಕಾರಖಾನೆಯ ಒಡೆಯನ ಹೆಸರು ತುಕಾರಾಮ ವಿಠೋಬಾ ಸುತಾರ ಎಂದಿದೆ. ಆತನ ಶಿಕ್ಷಣ ಅತಿ ಸ್ವಲ್ಪು, ಬಡತನವು ಹೆಚ್ಚು. ನೀವು ಕಾರಖಾನೆದಾರರು ಹೇಗೆ ಆದಿರಿ” ಎಂದು ಕೇಳಲು ಅವರು “ನಾನು ೧೯೩೨ರಲ್ಲಿ ಕಿರ್ಲೋಸ್ಕರ ಕಾರಖಾನೆಯಲ್ಲಿ ಫಿಟರ್ ಎಂದು ಕೆಲಸಕ್ಕೆ ನಿಂತೆ, ನನ್ನ ಉತ್ತಮ ಕೆಲಸ ನೋಡಿ, ಶಂಭುರಾಯರು ನನ್ನನ್ನು ಹರಿಹರಕ್ಕೆ ಕರೆದೊಯ್ದರು. ಅಲ್ಲಿ ೧೯೪೦ ರ ವರೆಗೆ ಸುಪರವಾಯಿಜರ ಹುದ್ದೆ ಯ ವರೆಗೆ ಏರಿದೆ, ಮುಂದೆ ನಾನು ಸ್ವತಃ ಒಂದು ಸಣ್ಣ ಕಾರಖಾನೆಯನ್ನು ತೆಗೆಯಬೇಕೆಂದು ರಾಜಾರಾಮ