೨೦೧ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಶ್ರೀ ರಾಮಭಾವೂ ಸಾವಂತ, ಶ್ರೀ ಆಮ್. ಜಿ. ಚಿಂಚಣೀಕರ ಇವರು ಆರಂಭ ಮಾಡಿದ ಹರಿಹರದ ವರ್ಕ್ಸಶಾಪಗಳ ಸಂಗತಿಯೂ ಇದೇ ರೀತಿಯಾಗಿದೆ. ಕೊಲ್ಲಾಪುರದ, ಉದ್ಯಮ ನಗರದಲ್ಲಿ, ವರ್ಕಶಾಪ್ ತೆಗೆದ ಇಬ್ಬರು ಸಣ್ಣ ಕಾರಖಾನೆದಾರರು ಶ್ರೀ ಮೀರಾಸಾಹೇಬ ಹುದಲಿ, ಶ್ರೀ ಮಾಧವರಾವ ಕರಜಗಾರ ಇವರಿಬ್ಬರೂ ಕಿರ್ಲೋಸ್ಕರ ಕಾರಖಾನೆಯಲ್ಲಿ ೧೯೩೦-೩೨ ರಲ್ಲಿ ಟರ್ನರರೆಂದು ಕೆಲಸಕ್ಕೆ ಬಂದರು. ಇವರಲ್ಲಿ ಮೀರಾಸಾಹೇಬನ ವರ್ಕಶಾಪ ದಲ್ಲಿ ಆರು ಜನ ಕೆಲಸಗಾರರಿದ್ದು, ದೊಡ್ಡ ಕಾರಖಾನೆಯಲ್ಲಿ ತಯಾರಾಗುವ ಹಾರಿಝಾಂಟಲ್ ಇಂಜನಗಳ ಕನೆಕ್ಟಿಂಗ್ ಲ್ಯಾಡಸ್ ಮತ್ತು ಬಿಡಿ ಭಾಗಗಳು ತಯಾರ ಆಗುತ್ತವೆ, ಕರಜಗಾರ ಇವರ ಕಾರಖಾನೆಯಲ್ಲಿ ೪೮ ಮಂದಿ ಕೆಲಸ ಗಾರರಿದ್ದು ಸ್ವತಃ ಡೀಝಲ್ ಇಂಜಿನ್ ಮಾಡುತ್ತಾರೆ. ಅವರು ದೊರಕಿಸಿದ ಈ ಯಶಸ್ಸು ಪ್ರಶಂಸನೀಯವಿದೆ. ಅವರು “ಕಿರ್ಲೋಸ್ಕರ ಕಾರಖಾನೆಯಲ್ಲಿ ನಾನು ಸುಮಾರಾಗಿ ೮-೧೦ ವರ್ಷ ಕೆಲಸ ಮಾಡಿದೆ. ಈ ಅವಧಿಯಲ್ಲಿ ಟರ್ನಿಂಗ, ಫಿಟಿಂಗ, ಅಸೆಂಬ್ಲಿಂಗ ಇವುಗಳ ಬಗೆಗೆ ನನಗೆ ದೊರೆತ ಅನುಭವವು ಪ್ರತಿ ಹೆಜ್ಜೆ ಹೆಜ್ಜೆಗೆ ಉಪಯೋಗ ಬೀಳುವದು, ಅದನ್ನು ಶಬ್ದದಿಂದ ವರ್ಣನೆ ಮಾಡಿ ಹೇಳುವದು ಆಗದ ಮಾತು.” ಎಂದು ಹೇಳುವರು. ಹೀಗೆ ಕಿರ್ಲೋಸ್ಕರರಿಂದ, ಸ್ಫೂರ್ತಿ ಪಡೆದ ಕಾರಖಾನೆದಾರರ ಯಾದಿ ಯನ್ನು ಮಾಡಿದರೆ, ಅದು ೩೫ ಕ್ಕೂ ಮಿಕ್ಕುವದು, ವಿಸ್ತಾರ ಭಯದಿಂದ ಅದರಲ್ಲಿಯ ಎರಡು ಅನುಭವಗಳನ್ನಷ್ಟೇ ಇಲ್ಲಿ ವಿವರಿಸುವೆವು. - ಶ್ರೀ ಶಿರೋಡಕರ ಕೆ, ಬಿ, ಯವರ ಅನುಭವ “ನಾನು ಮೂಲತಃ ಗೋವಾ ಪ್ರಾಂತದ ಒಬ್ಬ ಒಕ್ಕಲಿಗನ ಮಗ, ಮನೆ ತನದ ಬಡತನದಿಂದ ನೌಕರಿಗಾಗಿ ಪುಣೆಗೆ ಬಂದೆನು, ಆದರೆ ನೌಕರಿಯು ಸಿಗುವ ಲಕ್ಷಣ ತೋರಲಿಲ್ಲ. ಇಂಥ ಸ್ಥಿತಿಯಲ್ಲಿ ರಸ್ತೆಗುಂಟ ಹತಾಶನಾಗಿ ತಿರುಗು ತಿರುವಾಗ ಒಂದು ಸ್ಥಳದಲ್ಲಿ ಒಂದು ದೊಡ್ಡ ಕಾರಖಾನೆ ಕಟ್ಟುವ ಕೆಲಸವು ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಸುದೈವದಿಂದ ಬಡಿಗನೆಂದು ೧-೮-೦ ಯ ದಿನಗೂಲಿಯ ಕೆಲಸ ಸಿಕ್ಕಿತು, ಅದು ಕಿರ್ಲೋಸ್ಕರ ಆಯಿಲ್ ಇಂಜಿನ್ ಕಾರಖಾನೆಯಾಗಿತ್ತು, ಕೆಲಸ ಮಾಡುತ್ತಿರುವ ಸಮಯದಲ್ಲಿ ಲಕ್ಷ್ಮಣರಾಯರ ದೃಷ್ಟಿಯು ನನ್ನ ಮೇಲೆ ಬಿದ್ದಿತು, ಅವರು ತಮ್ಮ ಹೊಲದಲ್ಲಿ ಬಡಿಗತನದ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೫೦
ಗೋಚರ