ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

398 ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು | ಖಾನೆಯು ಯಾವ ಸಂಧಿಯನ್ನು ಒದಗಿಸಿ ಕೊಟ್ಟಿತೋ ಅಷ್ಟೇ ಅದರ ಶ್ರೇಯ ಸ್ಪೆಂದು ಮನ್ನಿಸಿದರೂ ಲಕ್ಷ್ಮಣರಾಯರ ಈ ಔದ್ಯೋಗಿಕ ಸೇವೆಯು ಅಸಾ ಮಾನ್ಯವಾದುದೆಂದು ಗೊತ್ತಾಗುವದು. - ಲಕ್ಷ್ಮಣರಾಯರ ಉದ್ಯೋಗದಮೂಲಕ ಸಂಭವಿಸಿದ ಪ್ರತ್ಯಕ್ಷ ಅಪ್ರತ್ಯಕ ಕಾರ್ಯದ ಅಢಾವೆಯನ್ನು ತೆಗೆದುಕೊಂಡರೆ, ಅದರಲ್ಲಿ ಇನ್ನಿಷ್ಟು ಮಹತ್ವದ ಭಾಗವನ್ನು ಸೇರಿಸಬೇಕಾಗುವದು. ೧೯೦೩ರಲ್ಲಿ ಬೆಳಗಾವಿಯಲ್ಲಿ ಮೇವನ್ನು ಕತ್ತರಿಸುವ ಯಂತ್ರವನ್ನು ತಯಾರಿಸಲು ಲಕ್ಷ್ಮಣರಾಯರು ಆರಂಭಿಸಿದರು, ಆ ಹೊತ್ತಿಗೆ ಮಹಾ ರಾಷ್ಟ್ರದಲ್ಲಿ ಕೈಬೆರಳಿನ ಮೇಲೆಣಿಸುವಷ್ಟು ಸಹ ಯಾಂತ್ರಿಕ ಕಾರಖಾನೆಗಳಿರ ಲಿಲ್ಲ. ಇಂಥ ಕಾರಖಾನೆಗಳನ್ನು ಮಹಾರಾಷ್ಟ್ರೀಯ ರಿಗೆ ತೆರೆಯಲು ಬರು ಇದೆಯೋ ಇಲ್ಲವೋ ಎಂದೆನಿಸುತ್ತಿತ್ತು. ಔಂಧದ ರಾಜೇಸಾಹೇಬರ ಸಹಾಯವು ಲಕ್ಷಣರಾಯರಿಗೆ ಯೋಗ್ಯ ಕಾಲಕ್ಕೆ ದೊರೆತದ್ದರಿಂದ ಕಿರ್ಲೋಸ್ಕರವಾಡಿಯ ಸ್ಥಾಪನೆಯಾಯಿತು. ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿಯೂ ಮಹಾರಾಷ್ಟ್ರವು ತನ್ನ ತೇಜಸ್ಸನ್ನು ಪ್ರಕಟಮಾಡಲು ಶಕ್ಯವಿದೆ ಎಂದು ಸಿದ್ಧವಾಯಿತು. ಕಿರ್ಲೋಸ್ಕರವಾಡಿ, ಓಗಲೆನಾಡಿಗಳೊಳಗಿನ ಕಾರಖಾನೆಗಳು ತಮ್ಮ ತಮ್ಮ ಉದ್ಯೋಗದಿಂದ ಮುಂದೆ ಬಂದವು, ಅದರಂತೆ ಯಾವ ಸಂಸ್ಥಾನವು ತನ್ನ ಕೈಲಾದಮಟ್ಟಿಗೆ ಸಹಾಯವನ್ನು ಮಾಡಿತೋ ಅಂಥ ಕಂಧಸಂಸ್ಥಾನವೂ ಮುಂದೆ ಬರಲು ಅವು ಉಪಯೋಗಬಿದ್ದವು. ಕಾರಖಾನೆಯಿಂದ ಸಂಸ್ಥಾನದ ಮಹತ್ವವು ಬೆಳೆಯುವದೆಂದು ಕಂಡು ಬಂದಮೇಲೆ ಇಚಲಕರಂಜಿ, ಸಾಂಗಲಿ, ಮಿರಜ, ಕೊಲ್ಲಾಪುರ, ಫಲಟನ್ ಜಮಖಂಡಿ, ಭೋರ ಮೊದಲಾದ ಸಂಸ್ಥಾನಗಳು ಈ ಕಿತ್ರೆಯನ್ನೇ ತೀಡಿದವು. ಮಹಾರಾಷ್ಟ್ರದ ಎಷ್ಟೋ ಕಾರಖಾನೆಗಳು ಈ ಸಂಸ್ಥಾನಗಳಲ್ಲಿಯೇ ವಿಶೇಷ ವಾಗಿ ಕೇಂದ್ರಿತವಾಗಿರುವದು ಕಾಣಬರುತ್ತಿದೆ. ಒಬ್ಬರು ಕೆಡುವಿದ ಕಾಲುದಾರಿಯು ಮುಂದೆ ಕೆಲವು ಕಾಲದ ಮೇಲೆ ರಾಜಮಾರ್ಗವಾಗಿ ಪರಿಣಮಿಸುವದು, ಅದರಂತೆ ಔದ್ಯೋಗಿಕ ಕ್ಷೇತ್ರದಲ್ಲಿ ಮೊದಲು ಪದಾರ್ಪಣಮಾಡಿ ನಮ್ಮ ಯಂತ್ರಯೋಗಿಯು ಯಾವ ಹೊಸ