೨೨ ತಾಟಸ್ಟ್ ಧೋರಣೆ ಸದ್ಯಕ್ಕೆ ಜಗತ್ತಿನಲ್ಲಿ ರಾಷ್ಟ್ರಗಳ ಎರಡು ಪ್ರಚಂಡ ಗುಂಪುಗಳು ನಿರ್ಮಾಣವಾಗಿವೆ. ಕುಸ್ತಿಯ ಕಣಕ್ಕಿಳಿದ ಇಬ್ಬರು ಜಟ್ಟಿಗಳಂತೆ ಅವರು ಒಬ್ಬರ ಮುಂದೆ ಒಬ್ಬರು ನಿಂತು ಸಡ್ಡನ್ನು ಹೊಡೆಯುತ್ತಿದ್ದಾರೆ, ಯಾವ ಕಣಕ್ಕೆ ಇಬ್ಬರಲ್ಲಿಯ ಕಿಡಿ ಹಾರಿ ನಿಕರದ ಹೋರಾಟ ಹೂಡೀತು ಎಂಬದನ್ನು ಹೇಳುವದು ಕಠಿಣ. - ಮೂರನೇ ಮಹಾಯುದ್ದ ವು ತಲೆಯೆತ್ತಿದರೆ ಇಡೀ ಜಗತ್ತಿನ ಪ್ರಳಯವೇ ಆಗಬಹುದು, ಅದರಿಂದ ಇಡೀ ಮಾನವ ಜಾತಿಯೇ ಸಮೂಲ ನಾಶವಾಗು ವದೋ ಏನೋ ಎಂಬ ಸಂಶಯವು ಪ್ರತಿಯೊಬ್ಬ ವಿಚಾರವಂತನನ್ನು ಚಿಂತೆ ಗೀಡುಮಾಡಿದೆ. ಅದಕ್ಕಾಗಿಯೇ ಜಗತ್ತಿನಲ್ಲಿ ಶಾಂತತೆಯು ನೆಲೆಸಲೆಂದು ನಮ್ಮ ರಾಷ್ಟ್ರದ ನಾಯಕರು ಅತಿಶಯ ಕಳಕಳಿಯಿಂದ ಪ್ರಯತ್ನ ಮಾಡುತ್ತಿ ದ್ದಾರೆ. ಜಗತ್ತಿನೊಳಗಿನ ಸಂಘರ್ಷಣದಿಂದ ಭಾರತವನ್ನು ಅಲಿಪ್ತವಾಗಿಡುವ ಯತ್ನವೂ ಮಿತಿಮೀರಿ ನಡೆದಿದೆ. ಭಾರತವು ಯಾವುದೇ ಪಂಗಡದಲ್ಲಿ ಸೇರಿಕೊಳ್ಳದೆ, ಒಂದು ತಟಸ್ಥ ರಾಷ್ಟ್ರವೆಂದು ಬಾಳಬೇಕೆಂದು ನಮ್ಮ ರಾಷ್ಟ್ರದ ನಾಯಕರ ಉತ್ಕಟ ಇಚ್ಛೆ ಯಾಗಿದೆ. ಈ ದೃಷ್ಟಿಕೋನವನ್ನೇ ಯಾವಾಗಲೂ ಇರಿಸಿಕೊಂಡೇ ಅವರು ತಮ್ಮ ಅಂತರ್‌ರಾಷ್ಟ್ರೀಯ ಧೋರಣವನ್ನು ರೂಪಿಸುತ್ತಲಿರುವರು, ಮತ್ತು ನೆರೆಹೊರೆಯವರೊಡನೆ ಸಾಮೋಪಚಾರದಿಂದ ನಡೆಯುತ್ತಿರುವರು. ನಾವಾಯಿತು ನಮ್ಮ ಸಂಚವಾರ್ಷಿಕ ಯೋಜನೆಯಾತು, ಎಂದು ನಡೆಯಲು ಅನುಕೂಲವಾದರೆ ಎಷ್ಟು ಒಳ್ಳೆಯದಾದೀತು ! ಅದರಿಂದ ನಾವು ನಮ್ಮ ಪ್ರಗತಿಯನ್ನು ತೀವ್ರವಾಗಿ ಸಾಧಿಸಬಹುದಲ್ಲವೇ ! ಆದರೆ, ಎಲ್ಲರೊಡನೆ ಒಳ್ಳೆ ರೀತಿಯಿಂದ ವರ್ತಿಸಿ, ನಮ್ಮ ಅಭ್ಯುದಯವನ್ನು ಶಾಂತ ನಾಗಿ ಮಾಡಿಕೊಂಡೇವೆಂಬುದು ಅಷ್ಟು ಸುಲಭವಿಲ್ಲ. ಯಾಕಂದರೆ- ನಾವು ಹಿಡಿದ ತಟಸ್ಥವೃತ್ತಿಯು ಕೆಲ ದಿನ ಬಾಳೀತು ಎಂದು ಗ್ರಹಿಸಿದರೂ ಈ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೫೬
ಗೋಚರ