ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ಮಿಂಚಿನಬಳ್ಳಿ ಸ್ಥಿತಿಯು ಶಾಶ್ವತವಾಗಿ ಉಳಿದೀತೆಂದು ಹೇಳಲು ಬರುವದಿಲ್ಲ. ಅದರಲ್ಲಿ ಜಗತ್ತಿನೊಳಗೆ ಎಲ್ಲಿಯಾದರೂ ಜಗಳ ತಲೆದೋರಿದರೆ ತಟಸ್ಥವೃತ್ತಿಯನ್ನು ಕಾಯ್ದು ಕೊಳ್ಳುವದು ಅಶಕ್ಯಕೋಟಿಯೊಳಗಿನ ಮಾತು, ಇದಕ್ಕೆ ಪ್ರತ್ಯಕ್ಷ ನಿದರ್ಶನ ಬೇಕಿದ್ದರೆ- ದೇಶ ದೇಶದೊಳಗೆ ಯಾಕಾಗಲೊಲ್ಲದು- ಯುದ್ದವು ಆರಂಭವಾದರೆ, ಅಲ್ಲಿಯ ಕಾರಖಾನೆಗಳ ಪರಿಸ್ಥಿತಿಯೇನಾಗುವದೆಂಬುದನ್ನು ಸ್ವಲ್ಪು ನೋಡಬೇಕು. - ಲಕ್ಷ್ಮಣರಾಯರ ಕೆಲಸವು ಕೇವಲ ಒಂದು ಕಾರಖಾನೆಯನ್ನು ನಡೆಸು ವದು ಮಾತ್ರ. ಆದರೂ ಈ ಕೆಲಸವನ್ನು ಮಾಡಲು ಶಾಂತತೆಯೂ ಸುವ್ಯ ವಸ್ಥೆಯೂ ಅವಶ್ಯ ಬೇಕು, ಅದಕ್ಕಾಗಿಯೇ ಅವರು ಇನ್ನಿತರ ಯಾವ ಉದ್ಯೋಗದಲ್ಲಿ ಬೀಳದೆ ಹೊರಗಿನ ವಾತಾವರಣದಿಂದ ದೂರವಿದ್ದು, ತಮ್ಮ ಉದ್ಯೋಗವನ್ನು ನಡೆಸುವ ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈ ತಾಟಸ್ಥವೃತ್ತಿಯನ್ನು ಅವರಿಗೆ ಎಲ್ಲಿಯವರೆಗೆ ಕಾಯಲು ಸಾಧ್ಯವಾಯಿತು ? ಎಂಬುದನ್ನು ತೋರಿಸುವದೇ ಈ ಪ್ರಕರ್ಣದ ಉದ್ದೇಶವಾಗಿದೆ. ೧೯೨೭ ರಲ್ಲಿ ವಾಡಿಯಲ್ಲಿ ಅಳತೆಕರರಿಂದ ಕಾಂಗ್ರೆಸ್‌ದ ರಾಜಕಾರಣವು ಪ್ರವೇಶ ಮಾಡಿತು, ಮುಂದೆ ೧೯೩೦ ರಲ್ಲಿ ಮಹಾತ್ಮಾಜಿಯವರನ್ನು ಬಂಧಿಸಿ ದ್ದರಿಂದ ರಾಜಕಾರಣದ ತೆರೆಗಳು ಹಳ್ಳಿ ಹಳ್ಳಿಗಳನ್ನೂ ಬಡಿದೆಬ್ಬಿಸಿದವು. ಅಂದರೆ ಕಿರ್ಲೋಸ್ಕರವಾಡಿಯಲ್ಲಿಯ ಕೂಲಿಕಾರರೂ ದೇಶದ ಪರಿಸ್ಥಿತಿಯ ವಿಷಯವಾಗಿ ಹೆಚ್ಚು ಹೆಚ್ಚಾಗಿ ವಿಚಾರ ಮಾಡತೊಡಗಿದರು. ಹೊರಗಿನ ರಾಜಕೀಯ ಆಂದೋಲನದ ಪ್ರಸಾರವು ಕಾರಖಾನೆಯ ಅಂಗಳದಲ್ಲಿಯೂ ಪ್ರವೇಶಿಸಿತು. ಇಷ್ಟರಲ್ಲಿ ಇಲ್ಲಿಯ ಹಳ್ಳಿಗಳೊಳಗಿನ ಜನತೆಯನ್ನು ರಾಜಕಾರಣದ ಕಡೆಗೆ ಒಲಿಸಿಕೊಳ್ಳುವ ಮನೋವೇಧಕ ಭಾಷಣವನ್ನು ಬಿಗಿಯುವಂಥ ಒಂದು ಪ್ರಭಾವೀ ವ್ಯಕ್ತಿಯ ಮುಂದೆ ಬಂದಿತು. ಅವನೇ ನಾನಾ ಪಾಟೀಲ, ಎಡೆ ಎಂಬುದು ಅವನ ಹಳ್ಳಿ, ಅದು ವಾಡಿಯಿಂದ ೧೫ ಮೈಲು, ನಾ ನಾ ಪಾಟೀಲನು ನಡುನಡುವೆ ನಾಡಿಗೆ ಬರುತ್ತಿದ್ದನು, ಅದರಿಂದ ಅವನು ಎಲ್ಲ ರಿಗೂ ಪರಿಚಿತನಾಗಿದ್ದನು, ಅವನ ವ್ಯಾಖ್ಯಾನಕ್ಕೆ ಜನ-ಜಂಗುಳಿಯು ಜಾತ್ರೆಯಂತೆಯೇ ನೆರೆಯುತ್ತಿತ್ತು. ಅವನ ಭಾಷೆ ಹುಂಬತನದ್ದು, ದೃಷ್ಟಾಂತ ಹಾಗೂ ವಿನೋದಗಳು ಗ್ರಾಮೀಣ; ಜನತೆಗೆ ತುಂಬಾ ಹಿಡಿಸತಕ್ಕಂಥವು.