sot ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಬ್ರಿಟಿಶ್. ರಾಜ್ಯದಾಡಳತೆಯಿಂದ ಭಾರತೀಯ ಒಕ್ಕಲಿಗರಿಗೆ ಎಷ್ಟು ಒತ್ತಾಯ ವಾಗುತ್ತದೆಂಬುದರ ಚಿತ್ರವನ್ನು, ಅವನು ಬಹಳ ಪರಿಣಾಮಕಾರಿಯಾಗುವಂತೆ ಚಿತ್ರಿಸುತ್ತಿದ್ದನು. ಜನತೆ ಆ ಭಾಷಣದಲ್ಲಿ ಕ್ರಾಂತಿಯನ್ನು ಕಾಣುತ್ತಿದ್ದರು. ಈ ಕಾಲದಲ್ಲಿ ಕೀರ್ತಿಶಾಲಿಗಳೂ ಲೋಕಪ್ರಿಯ ಮುಂದಾಳುಗಳೂ ಆದ ಪಂಡಿತ ಜವಾಹರಲಾಲ ನೆಹರು ಅವರು ಕಿರ್ಲೋಸ್ಕರವಾಡಿಗೆ ೩೧-೭- ೧೯೪೦ ರಂದು ಬಂದರು. ಕಾರಖಾನೆಯ ಇತಿಹಾಸದಲ್ಲಿಯ ಈ ದಿವಸವು ಸುವರ್ಣಾಕ್ಷರಗಳಿಂದ ಬರೆದಿಡತಕ್ಕಂಥದ್ದಾಗಿದೆ. - ಪಂಡಿತಜೀಯವರು ಆ ವೇಳೆಗೆ ಪುಣೆಯಲ್ಲಿ ನೆರೆದ ಎ, ಆಮ್, ಸಿ, ಸಿ. ಕಮೀಟಿಯ ಸಭೆಗೆಂದು ಬಂದಿದ್ದರು, ಅಲ್ಲಿ ಶ್ರೀ, ಅಪ್ಪಾಸಾಹೇಬಸಂತ ಅವರು ಅವರ ಭೆಟ್ಟಿಯನ್ನು ತೆಗೆದುಕೊಂಡು ಔಂಧ ಸಂಸ್ಥಾನದಲ್ಲಿ ಆರಂಭಿಸಲ್ಪಟ್ಟ ಹೊಸ ರಾಜ್ಯ ಪದ್ಧತಿಯ ನಿರೀಕ್ಷಣೆಯನ್ನು ಮಾಡಲು ಅಮಂತ್ರಣವನ್ನಿತ್ತರು. ಆಗ ಅವರು ತಮ್ಮ ತಂಗಿ ವಿಜಯಲಕ್ಷ್ಮಿಪಂಡಿತ, ಮೃದುಲಾಬೇನ ಸಾರಾಭಾಯಿ, ರಾಘವದಾಸ ಎಂಬವರೊಡನೆ ಔಂಧಕ್ಕೆ ಬಂದರು, ಅಲ್ಲಿಂದ ಅಂದೇ ಮಧ್ಯಾಹ್ನ ಕಿರ್ಲೋಸ್ಕರವಾಡಿಗೆ ಆಗಮಿಸಿದರು. ಅವರ ಆ ಭೆಟ್ಟಿಯೆಂದರೆ ಕಿರ್ಲೋಸ್ಕರವಾಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಒಂದು ಹಬ್ಬವೇ ಎನಿಸಿತು, ಪಂಡಿತಜಿಯ ದರ್ಶನಕ್ಕೆಂದು ೭-೮ ಸಾವಿರ ಜನರು ನೆರೆದರು. ಈ ಮಹಾ ಅತಿಥಿಯನ್ನು ಯಥೋಚಿತ ಶಬ್ದಗಳಿಂದ ಲಕ್ಷಣ ರಾಯರು ಸ್ವಾಗತಿಸಿದಮೇಲೆ, ಚಪ್ಪಾಳೆಯ ಸಪ್ಪಳದಲ್ಲಿ ಪಂಡಿತ ಜವಾಹರಲಾಲ ನೆಹರು ಅವರು ಭಾಷಣ ಮಾಡಲು ಎದ್ದರು. ಅದರಲ್ಲಿ ತಾವು ಔಂಧಕ್ಕೆ ಯಾವ ಉದ್ದೇಶದಿಂದ ಬಂದೆವೆಂಬದನ್ನೂ ಕಿರ್ಲೋಸ್ಕರ ಕಾರಖಾನೆಯನ್ನು ನೋಡಿದ ಮೇಲೆ ಅದರ ಬಗ್ಗೆ ತಮ್ಮ ಮತವು ಏನಾಯಿತೆಂಬದನ್ನು ಕುರಿತು ಮಾತನಾಡಿ “ಇಂದು ನಮ್ಮೆದುರು ಎರಡು ಪ್ರಶ್ನೆಗಳಿವೆ, ಒಂದು- ನಾವು ಸ್ವಾತಂತ್ರವನ್ನು ಹೇಗೆ ದೊರಕಿಸಬೇಕು ? ಎರಡನೆಯದು- ನಮ್ಮ ಬಡ. ತನವನ್ನು ಹೇಗೆ ನೀಗಿಸಿಕೊಳ್ಳಬೇಕು? ಭಾರತದೊಳಗಿನ ಬ್ರಿಟಿಶ್ ಹದ್ದಿಯಲ್ಲೇ ಹೋಗಲಿ, ಇಲ್ಲವೆ ಸಂಸ್ಥಾನಗಳ ಹದ್ದಿಯಲ್ಲೇ ಹೋಗಲಿ, ಎಲ್ಲೆಲ್ಲಿಯೂ ನಿರುದ್ಯೋಗ, ಬಡತನ, ಹಬ್ಬಿದ್ದು ಕಾಣುವದು, ಈ ಸ್ಥಿತಿಯು ಹೋಗಿ ಎಲ್ಲ ಕಡೆಗೂ ಸ್ವತಂತ್ರ ಜನತೆಯ ರಾಜ್ಯ ಆರಂಭವಾಗುವದು ಆವಶ್ಯಕವಾಗಿದೆ.”
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೫೮
ಗೋಚರ